
ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್ ವಿಫಲ; ಅಮೆರಿಕ ಸಂಸತ್ ಸಮಿತಿ ವರದಿ ಆರೋಪ
ಭಾರತೀಯ ನಾಯಕರು ಕೊಟ್ಟ ಉಡುಗೊರೆ ಮೌಲ್ಯ 47 ಸಾವಿರ ಡಾಲರ್
Team Udayavani, Mar 22, 2023, 10:15 AM IST

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ವಿದೇಶಿ ನಾಯಕರಿಂದ ಪಡೆದ ಒಟ್ಟು 2.5 ಲಕ್ಷ ಡಾಲರ್ ಮೌಲ್ಯದ ಉಡುಗೊರೆಗಳ ವಿವರಗಳನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ. ಈ ಬಗ್ಗೆ ಅಮೆರಿಕದ ಸಂಸತ್‌ನ ಸಮಿತಿ ಆರೋಪಿಸಿದೆ.
ಭಾರತೀಯ ನಾಯಕರು ನೀಡಿರುವ 47 ಸಾವಿರ ಡಾಲರ್ ಮೌಲ್ಯದ ಉಡುಗೊರೆಗಳೂ ಇದರಲ್ಲಿ ಸೇರಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಸೌದಿ ಅರೇಬಿಯಾದಿಂದ ನೀಡಲಾಗಿರುವ ಖಡ್ಗಗಳು, ಭಾರತದ ಆಭರಣಗಳು ಹಾಗೂ ಟ್ರಂಪ್ ಅವರ ಬೃಹತ್ ಸಾಲ್ವಡೋರನ್ ಭಾವಚಿತ್ರ ಸೇರಿದಂತೆ ಹಲವು ಐಷಾರಾಮಿ ಉಡುಗೊರೆಗಳ ವಿವರಗಳನ್ನು ಸಲ್ಲಿಸಲು ಅವರ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ, 2017ರಿಂದ 2021ರವರೆಗೆ ಆಡಳಿತ ನಡೆಸಿದ್ದರು.
ಟಾಪ್ ನ್ಯೂಸ್
