ಉತ್ತರ ಕೊರಿಯಾ ಜತೆ ಯುದ್ಧಕ್ಕೆ ಅಮೆರಿಕ ಚಿಂತನೆ
Team Udayavani, Aug 3, 2017, 8:40 AM IST
ವಾಷಿಂಗ್ಟನ್: ಎಷ್ಟೇ ಎಚ್ಚರಿಕೆ ನೀಡಿದರೂ ತಲೆಕೆಡಿಸಿಕೊಳ್ಳದೇ ಅಣ್ವಸ್ತ್ರಸಜ್ಜಿತ ಕ್ಷಿಪಣಿ ತಯಾರಿಕೆಗೆ ಮುಂದಾಗಿರುವ ಉತ್ತರ ಕೊರಿಯಾ ವಿರುದ್ಧ ಯುದ್ಧವೇ ಲೇಸೆನ್ನುವ ತೀರ್ಮಾನಕ್ಕೆ ಅಮೆರಿಕ ಬಂದಂತಿದೆ. ಉತ್ತರ ಕೊರಿಯಾದ ನಡೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಮ್ಮ ಮುಂದೆ ಎಲ್ಲಾ ರೀತಿಯ ಆಯ್ಕೆಗಳಿವೆ. ಯುದ್ಧವೇ ಆನಿವಾರ್ಯ ಆದಲ್ಲಿ ಅದಕ್ಕೂ ಸೈ. ನಾವು ಮಾಡಿ ತೋರಿಸುವ ತನಕ ಏನು ಮಾಡುತ್ತೇವೆ ಎನ್ನುವುದನ್ನು ಪ್ರಚಾರ ಮಾಡಿಕೊಳ್ಳುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾಗಿ ವೈಟ್ಹೌಸ್ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ವೇತಭವನದ ಪ್ರಧಾನ ಕಾರ್ಯದರ್ಶಿ ಸರ್ಹಾ ಸ್ಯಾಂಡೆರ್, ‘ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಕ್ಷಿಪಣಿ ತಯಾರಿಕೆಗೆ ಅವಕಾಶ ನೀಡುವ ಪ್ರಮೇಯವೇ ಇಲ್ಲ. ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ನಿಖರವಾದ ಅಭಿಮತ ಹೊಂದಿದ್ದಾರೆ. ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ನಿಲ್ಲಿಸಬೇಕೆನ್ನುವ ಬಗ್ಗೆ ಅಭಿಪ್ರಾಯ ಹೊಂದಿದ್ದಾರೆ’ ಎಂದು ತಿಳಿಸಿದ್ದಾರೆ. ಟ್ರಂಪ್ ಆಡಳಿತ ಈ ವಿಚಾರಕ್ಕೆ ಸಂಬಂಧಿಸಿ ಹಿತೈಷಿ ರಾಷ್ಟ್ರಗಳ ಜತೆಗೂ ಮಾತುಕತೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು