Udayavni Special

ಅಮೆರಿಕ ಅಧ್ಯಕ್ಷ ಟ್ರಂಪ್‌ ವಿರುದ್ಧ ಮಹಾಭಿಯೋಗಕ್ಕೆ ಸಿದ್ಧತೆ


Team Udayavani, Aug 25, 2018, 6:00 AM IST

17.jpg

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಅಕ್ರಮಗಳ ಸಂಬಂಧ ಡೊನಾಲ್ಡ್‌ ಟ್ರಂಪ್‌ ವಿರುದ್ಧ ನವೆಂಬರ್‌ ಬಳಿಕ ಮಹಾಭಿಯೋಗ ಪ್ರಕ್ರಿಯೆ ನಡೆಯಲಿದೆ. ನವೆಂಬರ್‌ನಲ್ಲಿ ಅಮೆರಿಕದ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌(ಕೆಳಮನೆ)ಗೆ ಮಧ್ಯಂತರ ಚುನಾವಣೆ ನಡೆಯಲಿದ್ದು ಈ ಬಳಿಕವಷ್ಟೇ ಮಹಾಭಿಯೋಗ ಪ್ರಕ್ರಿಯೆ ಶುರುವಾಗಲಿದೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಈ ಚುನಾವಣೆಯಲ್ಲಿ ಜನ ಡೆಮಾಕ್ರಾಟಿಕ್‌ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡಿದಲ್ಲಿ ಅವರು, ಟ್ರಂಪ್‌ ಮಹಾಭಿಯೋಗ ಬಯಸಿದ್ದಾರೆ ಎಂಬರ್ಥವಾಗುತ್ತದೆ. ಹೀಗಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಪ್ರಕ್ರಿಯೆ ಶುರು ಮಾಡಬಹುದು ಎಂದು ಡೆಮಾಕ್ರಾಟಿಕ್‌ನ ಸದಸ್ಯರೇ ಹೇಳಿದ್ದಾರೆ.

ಒಂದು ವೇಳೆ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ ಅವರ ಪಕ್ಷವಾದ ರಿಪಬ್ಲಿಕನ್‌ಗೆ ಹೆಚ್ಚಿನ ಸ್ಥಾನ ನೀಡಿದಲ್ಲಿ ಜನ ಟ್ರಂಪ್‌ ಪರವೇ ಇದ್ದಾರೆ ಎಂದರ್ಥವಾಗುತ್ತದೆ. ಹೀಗಾಗಿ ಚುನಾವಣೆ ನೋಡಿಕೊಂಡು ಪ್ರಕ್ರಿಯೆ ಶುರು ಮಾಡಬಹುದು ಎಂದಿದ್ದಾರೆ.

ಟೈಮ್‌ ಮುಖಪುಟದಲ್ಲಿ: ಇದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಪ್ರಸಿದ್ಧಿಯ ಪತ್ರಿಕೆ ಟೈಮ್‌ನಲ್ಲಿ ಟ್ರಂಪ್‌ ಅವರ ಅರ್ಧ ಫೋಟೋ ಬಳಕೆ ಮಾಡಿಕೊಂಡು ಮುಖಪುಟ ವಿನ್ಯಾಸ ಮಾಡಲಾಗಿದೆ. ಇಡೀ ವೈಟ್‌ಹೌಸ್‌ಗೆ ನೀರು ತುಂಬಿಸಿ “ಇನ್‌ ಡೀಪ್‌’ ಎಂಬ ತಲೆಬರಹ ನೀಡಲಾಗಿದೆ. ಈಗ ಎದುರಾಗಿರುವ ಸಮಸ್ಯೆಗಳು ಹೆಚ್ಚಿದ್ದು ಹೊರಗೆ ಬರುವುದು ಕಷ್ಟ ಎಂಬರ್ಥದಲ್ಲಿ ವಿನ್ಯಾಸ ಮಾಡಲಾಗಿದೆ. ಈ ಹಿಂದೆಯೂ ಟ್ರಂಪ್‌ ಅವರ ಖಾಸಗಿ ವಕೀಲರ ಕಚೇರಿ ಮೇಲೆ ಎಫ್ಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾಗ “ಸ್ಟಾರ್ಮ್’ ಎಂಬರ್ಥದ ತಲೆಬರಹ ನೀಡಿ ಅರ್ಧ ನೀರಿನಲ್ಲಿ ಮುಳುಗಿಸಲಾಗಿತ್ತು. ಈಗ ಸಂಪೂರ್ಣವಾಗಿ ಟ್ರಂಪ್‌ ಅವರನ್ನು ಮುಳುಗಿಸಲಾಗಿದೆ.

ಈ ಮಹಾಭಿಯೋಗ ಪ್ರಕ್ರಿಯೆ ಬಗ್ಗೆ ಗುರುವಾರವಷ್ಟೇ ಮಾತನಾಡಿದ್ದ ಟ್ರಂಪ್‌, ಒಂದು ವೇಳೆ ಹಾಗೇನಾದರೂ ಆದರೆ ಇಡೀ ಅಮೆರಿಕದ ಷೇರು ಮಾರುಕಟ್ಟೆ ಕುಸಿದು ನೆಲಕ್ಕೆ ಬೀಳಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ವಲಸೆ ನೀತಿಗೆ ಆಕ್ಷೇಪ
ಟ್ರಂಪ್‌ ಸರಕಾರ ಕೈಗೊಂಡ ವಲಸೆ ನೀತಿಗೆ ಉದ್ಯಮ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕದ ಪ್ರಮುಖ ಕಂಪನಿಗಳ ಸಿಇಒಗಳು ಪತ್ರ ಬರೆದಿದ್ದಾರೆ. ಈ ವಲಸೆ ನೀತಿಯಿಂದಾಗಿ ಅಸ್ಥಿರತೆ ಉಂಟಾಗುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಆರೋಪಿಸಿದ್ದಾರೆ. ಆ್ಯಪಲ್‌ ಸಿಇಒ ಟಿಮ್‌ ಕುಕ್‌, ಜೆಪಿ ಮಾರ್ಗನ್‌ ಚೇಸ್‌ನ ಜೇಮೀ ಡಿಮಾನ್‌, ಅಮೆರಿಕನ್‌ ಏರ್‌ಲೈನ್ಸ್‌ನ ಡಗ್‌ ಪಾರ್ಕರ್‌ ಸೇರಿ 59 ಸಿಇಒಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಇವರೆಲ್ಲರೂ ಭಾರತೀಯ ಪ್ರತಿಭಾವಂತರ ಪರ ನಿಂತಂತಾಗಿದೆ.

ಸರಕಾರ ವಲಸೆ ನೀತಿ ಬದಲಾವಣೆ ಮಾಡುವಾಗ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಕೌಶಲ ಭರಿತ ಉದ್ಯೋಗಿಗಳ ಜೀವನಕ್ಕೆ ಬಾಧೆಯಾಗಬಾರದು. ಉದ್ಯೋಗಿಗಳ ಹಿತದೃಷ್ಟಿಯಿಂದ ಹಠಾತ್ತನೆ ನೀತಿಗಳನ್ನು ಬದಲಾವಣೆ ಮಾಡಬಾರದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಇತ್ತೀಚೆಗೆ ಎಚ್‌1ಬಿ ವೀಸಾ ನೀತಿಯಲ್ಲಿ ಟ್ರಂಪ್‌ ಸರಕಾರ ಭಾರಿ ಬದಲಾವಣೆ ಮಾಡಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್-19 ಕಳವಳ – ಸೆ.21: 7339 ಹೊಸ ಪ್ರಕರಣ ; 9925 ಡಿಸ್ಚಾರ್ಜ್; 122 ಸಾವು

ಕೋವಿಡ್-19 ಕಳವಳ – ಸೆ.21: 7339 ಹೊಸ ಪ್ರಕರಣ ; 9925 ಡಿಸ್ಚಾರ್ಜ್; 122 ಸಾವು

ಬೆಂಗಳೂರು ರೋಸ್ ಆನಿಯನ್ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

ಬೆಂಗಳೂರು ರೋಸ್ ತಳಿಯ ಈರುಳ್ಳಿ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

ಕಲಬುರಗಿ: ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕ ಶವವಾಗಿ ಪತ್ತೆ

ಕಲಬುರಗಿ: ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕ ಶವವಾಗಿ ಪತ್ತೆ

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ!

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ! ಸ್ಥಳಕ್ಕೆ ಅಧಿಕಾರಿಗಳ ದೌಡು

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಮುಂಬಯಿಯ ಕೊಲೆ ಆರೋಪಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿದ ಪೊಲೀಸರು

ಮುಂಬಯಿಯ ಕೊಲೆ ಆರೋಪಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿದ ಪೊಲೀಸರು

ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ: ವಾಟಾಳ್ ನಾಗರಾಜ್

ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ: ವಾಟಾಳ್ ನಾಗರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

Mask

ಸಾಧ್ಯವಾದರೆ ಮಾಸ್ಕ್ ಧರಿಸಿ; ತಪ್ಪಿದರೆ ಸ್ಮಶಾನದಲ್ಲಿ ಸಮಾಧಿ ಗುಂಡಿ ತೋಡಿ!

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

ಷಟ್ಪಥ ಹೆದ್ದಾರಿ ಲೋಪ ಸರಿಪಡಿಸಿ

ಷಟ್ಪಥ ಹೆದ್ದಾರಿ ಲೋಪ ಸರಿಪಡಿಸಿ

ಇ-ಲೋಕ ಅದಾಲತ್‌ನಲ್ಲಿ 629 ಪ್ರಕರಣ ಇತ್ಯರ್ಥ

ಇ-ಲೋಕ ಅದಾಲತ್‌ನಲ್ಲಿ 629 ಪ್ರಕರಣ ಇತ್ಯರ್ಥ

ಕೋವಿಡ್-19 ಕಳವಳ – ಸೆ.21: 7339 ಹೊಸ ಪ್ರಕರಣ ; 9925 ಡಿಸ್ಚಾರ್ಜ್; 122 ಸಾವು

ಕೋವಿಡ್-19 ಕಳವಳ – ಸೆ.21: 7339 ಹೊಸ ಪ್ರಕರಣ ; 9925 ಡಿಸ್ಚಾರ್ಜ್; 122 ಸಾವು

ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಗಂಗೆ

ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಗಂಗೆ

RCB

ಸೇಡು ತೀರಿಸಿಕೊಳ್ಳುತ್ತಾ ಆರ್‌ಸಿಬಿ? ಪಿಚ್‌ ರಿಪೋರ್ಟ್‌ ಯಾರಿಗೆ ಫೇವರ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.