ಮಸ್ಕ್ ಎಲ್ಲದಕ್ಕೂ ನನ್ನಲ್ಲಿ ಭಿಕ್ಷೆ ಬೇಡುತ್ತಿದ್ದ! ಟ್ರಂಪ್-ಮಸ್ಕ್ ಟ್ವಿಟರ್ ವಾರ್
Team Udayavani, Jul 14, 2022, 7:05 AM IST
ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸ್ನೇಹ-ಸಂಬಂಧ ಹಳಸಲಾರಂಭಿಸಿದೆ. ಇದಕ್ಕೆ ಅವರಿಬ್ಬರ ನಡುವೆ ನಡೆದಿರುವ ಟ್ವೀಟ್ ಯುದ್ಧವೇ ಸಾಕ್ಷಿ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಪರವೇ ಮತ ಚಲಾಯಿಸಿದ್ದಾಗಿ ಮಸ್ಕ್ ಸುಳ್ಳು ಹೇಳಿದ್ದಾರೆ ಎನ್ನುವುದು ಟ್ರಂಪ್ ಆರೋಪ. ಅಷ್ಟೇ ಅಲ್ಲ, “ನಾನೊಬ್ಬ ರಿಪಬ್ಲಿಕನ್ ಪಕ್ಷದ ಮತ್ತು ಟ್ರಂಪ್ ಅವರ ದೊಡ್ಡ ಅಭಿಮಾನಿ’ ಎಂದು ಮಸ್ಕ್ ಹೇಳಿಕೊಂಡಿದ್ದು, ಪ್ರತಿಯೊಂದು ವಿಷಯಕ್ಕೂ ನನ್ನ ಬಳಿ ಬಂದು ಭಿಕ್ಷೆ ಬೇಡುತ್ತಿದ್ದ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಮಸ್ಕ್ ವಿರುದ್ಧ ಹರಿಹಾಯ್ದಿರುವ ಟ್ರಂಪ್, “ನಾನು ಅಧ್ಯಕ್ಷನಾಗಿದ್ದಾಗ ಶ್ವೇತಭವನಕ್ಕೆ ಪದೇ ಪದೆ ಬಂದು, ತನ್ನ ಯೋಜನೆಗಳಿಗೆ ಸಬ್ಸಿಡಿ ನೀಡುವಂತೆ ಮಸ್ಕ್ ಬೇಡಿಕೊಳ್ಳುತ್ತಿದ್ದರು. ನಾನೇನಾದರೂ ಆಗ ಮಂಡಿಯೂರಿ ಬೇಡಿಕೋ ಎಂದಿದ್ದರೆ ಅದನ್ನೂ ಮಾಡುತ್ತಿದ್ದರು’ ಎಂದು ಬರೆದಿದ್ದಾರೆ. ಈ ಟ್ವೀಟ್ಗಳಿಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, “ನಾನು ಆ ವ್ಯಕ್ತಿಯನ್ನು ದ್ವೇಷಿಸುವುದಿಲ್ಲ. ಆದರೆ, ಇದು ಟ್ರಂಪ್ ಅವರಿಗೆ ತನ್ನ ಹ್ಯಾಟ್ ಕೆಳಗಿಟ್ಟು, ಸೂರ್ಯಾಸ್ತದತ್ತ ಪಯಣಿಸುವ ಸಮಯ (ನಿವೃತ್ತಿ ಪಡೆಯುವ ಕಾಲ).
ಟ್ರಂಪ್ ಬದುಕುಳಿಯಲು ಇರುವ ಏಕೈಕ ದಾರಿಯೆಂದರೆ ಮತ್ತೆ ಅಧ್ಯಕ್ಷ ಸ್ಥಾನಕ್ಕೇರುವುದು’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್