“ಕನ್ಯೆ” ಪದ ಬದಲಾಯಿಸಿ… ಹೋರಾಟಗಾರರ ಬೇಡಿಕೆಗೆ ಬಾಂಗ್ಲಾ ಕೋರ್ಟ್ ಮನ್ನಣೆ

ಮಹತ್ತರ ತೀರ್ಪು ನೀಡಿದ ಬಾಂಗ್ಲಾ ನ್ಯಾಯಾಲಯ

Team Udayavani, Oct 9, 2019, 8:15 PM IST

ಢಾಕ: ಕನ್ಯೆ ಎಂಬ ಪದವನ್ನು ಬಾಂಗ್ಲಾದೇಶದ ಮುಸ್ಲಿಂ ವಿವಾಹ ಪ್ರಮಾಣಪತ್ರಗಳಿಂದ ತೆಗೆದುಹಾಕಬೇಕೆಂದು ಸ್ತ್ರೀ ಪರ ಹೋರಾಟಗಾರರು ಸಲ್ಲಿಸಿರುವ ಮೇಲ್ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಮಹತ್ತರವಾದ ತೀರ್ಪು ನೀಡಿದೆ. ಪ್ರಮಾಣ ಪತ್ರದಲ್ಲಿ ಕನ್ಯೆ ಎಂಬ ಪದದ ಬದಲು ಪರ್ಯಾಯ ಪದವನ್ನು ಸೂಚಿಸಿದೆ.

ದಕ್ಷಿಣ ಏಷ್ಯಾದ ಮುಸ್ಲಿಂ ವಿವಾಹ ಕಾನೂನುಗಳ ಪ್ರಕಾರ, ವಧುವನ್ನು ಆಯ್ಕೆ ಮಾಡುವಾಗ ಮೂರು ಆಯ್ಕೆಗಳನ್ನು ಅನುಸರಿಸಲಾಗುತ್ತದೆ. ಕುಮಾರಿ, ವಿಧವೆ ಹಾಗೂ ವಿಚ್ಚೇದಿತೆ ಎಂಬ ವಿಗಂಡನೆಗಳ ಆಧಾರದ ಮೇಲೆ ವಧುವನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕುಮಾರಿ ಅವಿವಾಹಿತೆ ಎಂದು ಸೂಚಿಸಿದ್ದರು, ಆದರೆ ವಿಸ್ತರಣೆ ರೂಪ ಕನ್ಯೆ ಎಂಬುದಾಗಿದೆ ಅಲ್ಲದೇ ಈ ಪದ ಬಳಕೆಯಿಂದ ಅವಳ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಆಗುತ್ತದೆ ಎಂಬುದು ಹೋರಾಟಗಾರರ ವಾದವಾಗಿತ್ತು.

ಭಾನುವಾರ ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಮುಂದಿನ ದಿನಗಳಲ್ಲಿ  ಈ ಪದ ಬಳಕೆಯನ್ನು ನಿಷೇಧ ಮಾಡುವುದಾಗಿ ಹೇಳಿದ್ದು, ಪರ್ಯಾಯ ಪದವಾಗಿ ಒಬಿಬಾಹಿತೊ ಎಂದು ಬದಲಾಯಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ನ್ಯಾಯಾಲಯ ತನ್ನ ಸಂಕ್ಷಿಪ್ತ ತೀರ್ಪಿನಲ್ಲಿ ಈ ಪದದ ವಿವರಣೆ ನೀಡಿದ್ದು, ಅದು ಹುಡುಗಿ ಅಥವಾ ಅವಿವಾಹಿತ ಎಂದು ನಿರ್ದಿಷ್ಟ  ಅರ್ಥವನ್ನು ಸೂಚಿಸುತ್ತದೆ ಎಂದು ತಿಳಿಸಿದೆ.

ಈ ಪ್ರಕರಣ ಕುರಿತಾಗಿ ಸಂಪೂರ್ಣ ತೀರ್ಪನ್ನು ಅಕ್ಟೋಬರ್‌ ಅಂತ್ಯಕ್ಕೆ ನೀಡುವುದಾಗಿ ನ್ಯಾಯಾಲಯ ತಿಳಿಸಿದ್ದು,  ಪ್ರಮಾಣಪತ್ರದಲ್ಲಿನ ಬದಲಾವಣೆಯನ್ನು ಅಂದಿನಿಂದ ಜಾರಿಯಾಗುವ ನಿರೀಕ್ಷೆ  ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ