ಇಂಡೋನೇಶ್ಯದ ಸುಲವೇಶಿ ದ್ವೀಪದಲ್ಲಿ 7 ಅಂಕಗಳ ತೀವ್ರತೆಯ ಭೂಕಂಪ
Team Udayavani, Apr 12, 2019, 7:32 PM IST
ಸಿಂಗಾಪುರ : ಇಂದು ಶುಕ್ರವಾರ ಇಂಡೋನೇಶ್ಯದ ಸುಲವೇಶಿ ದ್ವೀಪದಲ್ಲಿ 7 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿತೆಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.
ಗೊರೊಂಟಾಲೋ ಪ್ರಾಂತ್ಯದಲ್ಲಿ 280 ಕಿ.ಮೀ. ದಕ್ಷಿಣದಲ್ಲಿ, 43 ಕಿ.ಮೀ. ನೆಲದಾಳದಲ್ಲಿ ಈ ಭೂಕಂಪ ಸಂಭವಿಸಿದೆ.
ಭೂಕಂಪದಿಂದಾಗಿ ಯಾವುದೇ ಸಾವು, ನೋವು, ನಾಶ, ನಷ್ಟ ಆಗಿರುವ ವರದಿಗಳು ಬಂದಿಲ್ಲ ಎಂದು ಕೇಂದ್ರವು ಹೇಳಿದೆ.