
ಪ್ರವಾಹಪೀಡಿತ ಈಜಿಪ್ಟ್ ನಲ್ಲೀಗ “ಚೇಳು’ ಕಾಟ!
ವಿಷಕಾರಿ ಚೇಳು ಕಡಿತಕ್ಕೆ 3 ಬಲಿ, 450ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
Team Udayavani, Nov 16, 2021, 7:00 AM IST

ಕೈರೋ: ಭಾರೀ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಈಜಿಪ್ಟ್ಈಗ ಚೇಳು ಕಾಟ ಶುರುವಾಗಿದೆ. ಇಲ್ಲಿನ ದಕ್ಷಿಣದ ಅಸ್ವಾನ್ ನಗರದಲ್ಲಿ ಮಳೆಯಿಂದಾಗಿ ಚೇಳುಗಳೆಲ್ಲ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಚೇಳು ಕಡಿತದಿಂದ ಕನಿಷ್ಠ 3 ಮಂದಿ ಸಾವಿಗೀಡಾಗಿದ್ದಾರೆ. ಅಷ್ಟೇ ಅಲ್ಲ, 450ಕ್ಕೂ ಅಧಿಕ ಮಂದಿ ಚೇಳು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೀಗಾಗಿ, ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದ್ದು, ಯಾರೂ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ಕೊರೊನಾ ಲಸಿಕೆ ವಿತರಣೆಯನ್ನು ಸ್ಥಗಿತಗೊಳಿಸಿ, ಚೇಳು ಕಡಿತದಿಂದ ದಾಖಲಾದವರಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ದಾಂಪತ್ಯಕ್ಕೆ ಕಾಲಿಟ್ಟ ರಾಜ್‌ಕುಮಾರ್ ರಾವ್-ಪತ್ರಲೇಖಾ
ಪ್ರತಿ ಬಾರಿಯೂ ಇಲ್ಲಿ ಮಳೆ ಅತಿಯಾಗಿ, ಪ್ರವಾಹ ಉಂಟಾದಾಗ ಭಾರೀ ಪ್ರಮಾಣದ ಚೇಳುಗಳು ಕೊಚ್ಚಿಕೊಂಡು ಬರುತ್ತವೆ. ಏಕೆಂದರೆ ಅಸ್ವಾನ್‌ನ ಪರ್ವತ ಪ್ರದೇಶಗಳು ದಪ್ಪನೆಯ ಬಾಲವನ್ನು ಹೊಂದಿರುವ 4 ಇಂಚು ಉದ್ದದ ಅರೇಬಿಯನ್ ಚೇಳುಗಳ ಆವಾಸಸ್ಥಾನವಾಗಿದೆ. ಈ ವಿಷಜಂತುಗಳು ಪ್ರತಿ ವರ್ಷ ಹಲವು ಮಂದಿಯನ್ನು ಬಲಿಪಡೆಯುತ್ತದೆ. ಇವುಗಳನ್ನು ಜಗತ್ತಿನಲ್ಲೇ ಅತ್ಯಂತ ವಿಷಕಾರಿ ಚೇಳುಗಳು ಎಂದು ಕರೆಯಲಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರ್ತ್ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 8 ಮಂದಿ ಸಾವು, 3 ಮಂದಿಗೆ ಗಾಯ

ಪೇಶಾವರದಲ್ಲಿ ತಾಲಿಬಾನ್ ಅಟ್ಟಹಾಸ: 46 ಸಾವು,150ಕ್ಕೂ ಹೆಚ್ಚು ಮಂದಿಗೆ ಗಾಯ

49 ಸಾವಿರ ರೂ. ಚಿತ್ರ 25 ಕೋಟಿ ರೂಪಾಯಿಗೆ ಮಾರಾಟವಾಯಿತು!

ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಬಂದಿಳಿದದ್ದು ಮಾತ್ರ ದುಬೈಯಲ್ಲೇ…

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
