150 ಜನರಿದ್ದ ಇಥಿಯೋಪಿಯಾ ವಿಮಾನ ಪತನ
Team Udayavani, Mar 10, 2019, 9:46 AM IST
ನವದೆಹಲಿ: ಇಥಿಯೋಪಿಯಾದ ರಾಜಧಾನಿ ಅಡೀಸ್ ಅಬಾಬಾದಿಂದ ನೈರೋಬಿಗೆ ಸಾಗುತ್ತಿದ್ದ ಬೋಯಿಂಗ್ 737 -800 ಮ್ಯಾಕ್ಸ್ ಇಥಿಯೋಪಿಯನ್ ಪ್ರಯಾಣಿಕರ ವಿಮಾನವೊಂದು ಪತನಗೊಂಡಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಈ ವಿಮಾನದಲ್ಲಿ 150 ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಗಳಿದ್ದರೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಈ ಪ್ರಯಾಣಿಕರ ವಿಮಾನವು ಪತನಗೊಂಡಿರುವುದನ್ನು ಇಥಿಯೋಪಿಯಾದ ಪ್ರಧಾನಮಂತ್ರಿಗಳ ಕಾರ್ಯಾಲಯವು ದೃಢಪಡಿಸಿದೆ ಮತ್ತು ವಿಮಾನದಲ್ಲಿ ಪ್ರಯಾನಿಸುತ್ತಿದ್ದವೆರೆಲ್ಲಾ ಸಾವಿಗೀಡಾಗಿರಬಹುದಾದ ಭೀತಿಯನ್ನು ಅದು ವ್ಯಕ್ತಪಡಿಸಿದೆ.
ಇಥಿಯೋಪಿಯಾದ ರಾಜಧಾನಿಯಿಂದ 62 ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ಈ ವಿಮಾನವು ಪತನಗೊಂಡಿದೆ ಎನ್ನಲಾಗುತ್ತಿದೆ. ‘ಅಡೀಸ್ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್ 737 -800 ಮ್ಯಾಕ್ಸ್ ವಿಮಾನವು 8.44ರ ಸುಮಾರಿಗೆ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ಈ ವಿಮಾನದಲ್ಲಿ 149 ಪ್ರಯಾಣಿಕರು ಮತ್ತು 8ಜನ ಸಿಬ್ಬಂದಿಗಳಿದ್ದರೆಂದು ನಂಬಲಾಗುತ್ತಿದೆ. ದುರ್ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ’ ಎಂದು ಇಥಿಯೋಪಿಯನ್ ಏರ್ ಲೈನ್ಸ್ ತಾನು ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ