
ಆರ್ಥಿಕ ಸಂಕಷ್ಟದಲ್ಲಿ ಡಾಯಿಷ್ ಬ್ಯಾಂಕ್!
Team Udayavani, Mar 27, 2023, 7:40 AM IST

ಬರ್ಲಿನ್: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಬೆನ್ನಲ್ಲೇ ಸಾಲು ಸಾಲು ಬ್ಯಾಂಕುಗಳು ಇದೇ ಹಾದಿ ಹಿಡಿಯುತ್ತಿವೆ. ಸ್ವಿಜರ್ಲೆಂಡ್‌ನ ಕ್ರೆಡಿಟ್ ಸೂಸಿ ಬ್ಯಾಂಕ್ ಮುಳುಗಡೆಯ ಹಂತದಲ್ಲಿದೆ. ಇದೀಗ ಜರ್ಮನಿಯ ಅತಿ ದೊಡ್ಡ ಬ್ಯಾಂಕ್ ಆಗಿರುವ ಡಾಯಿಷ್ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ಶುಕ್ರವಾರ ಡಾಯಿಷ್ ಬ್ಯಾಂಕ್‌ನ ಷೇರುಗಳ ಮೌಲ್ಯದಲ್ಲಿ ಶೇ.8ರಷ್ಟು ಇಳಿಕೆಯಾಗಿದೆ. ಸಾಲಗಾರರು ಸರಿಯಾದ ಸಮಯಕ್ಕೆ ಬಾಕಿ ತಿರಿಸದೇ ಇರುವುದು, ಸುಸ್ತಿದಾರರ ಸಂಖ್ಯೆ ಅಧಿಕವಾಗಿರುವುದೇ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಇನ್ನೊಂದೆಡೆ, ಷೇರುದಾರರು ಕಳೆದ ಬುಧವಾರ, ಗುರುವಾರ, ಶುಕ್ರವಾರ ಡಾಯಿಷ್ ಬ್ಯಾಂಕ್ ಷೇರುಗಳನ್ನು ನಿರಂತರವಾಗಿ ಮಾರಾಟ ಮಾಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಈ ಬ್ಯಾಂಕ್‌ನ ಷೇರುಗಳ ಮೌಲ್ಯದಲ್ಲಿ ಶೇ.24ರಷ್ಟು ಇಳಿಕೆಯಾಗಿದೆ.
ದೇಶದ ಅತಿ ದೊಡ್ಡ ಬ್ಯಾಂಕ್‌ನ ಪರಿಸ್ಥಿತಿ ಹೀಗಾಗಿರುವುದಕ್ಕೆ ಷೇರು ಸೇರಿದಂತೆ ಠೇವಣಿ ಹೊಂದಿರುವ ಜರ್ಮನ್ ನಾಗರಿಕರು ಆತಂಕಗೊಂಡಿದ್ದಾರೆ.
ಟಾಪ್ ನ್ಯೂಸ್
