ಕೊಲಂಬೋ ನಗರದಲ್ಲಿ ಮತ್ತೆ ಬಾಂಬ್‌ ಸ್ಫೋಟ , ಜನತೆ ಕಂಗಾಲು

Team Udayavani, Apr 25, 2019, 10:58 AM IST

ಕೊಲಂಬೋ: ಐಸಿಸ್‌ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಗುರುವಾರ ಮತ್ತೆ ಬಾಂಬ್‌ ಸ್ಫೋಟ ಸಂಭವಿಸಿದೆ.

ಕೊಲಂಬೋ ನಗರದ ಹೃದಯ ಭಾಗದಿಂದ 40 ಕಿ.ಮೀ ದೂರದಲ್ಲಿ ನ್ಯಾಯಾಲಯವೊಂದರ ಹಿಂಬದಿ ಸ್ಫೋಟ ಸಂಭವಿಸಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಸ್ಫೋಟ ಅಷ್ಟೊಂದು ಪ್ರಬಲವಾಗಿರಲಿಲ್ಲ ಎಂದು ತಿಳಿದು ಬಂದಿದ್ದು,ಪೊಲೀಸರು ಸ್ಥಳ ಸುತ್ತುವರಿದು ತನಿಖೆ ಆರಂಭಿಸಿದ್ದಾರೆ.

ಈಸ್ಟರ್‌ ರವಿವಾರ  (ಎ. 21)ದಂದು ನಡೆದ ಸರಣಿ ಸ್ಫೋಟದಲ್ಲಿ 359 ಮಂದಿ ಬಲಿಯಾಗಿದ್ದು, 500 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವ್ಯಾಪಕ ಕಟ್ಟೆಚ್ಚರದ ನಡೆವೆ ಮತ್ತೆ ಕೇಳಿಸಿದ ಬಾಂಬ್‌ ಸದ್ದು ಜನತೆಯನ್ನು ಇನ್ನಷ್ಟು ಭಯಭೀತರನ್ನಾಗಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ