ಫೇಸ್‌ಬುಕ್‌ನಲ್ಲಿ ಲಿಬ್ರಾ ಕಾಯ್ನ!

Team Udayavani, Jun 19, 2019, 5:00 AM IST

ಸ್ಯಾನ್‌ ಫ್ರಾನ್ಸಿಸ್ಕೋ: ಬಿಟ್‌ಕಾಯ್ನ ರೀತಿ ಕ್ರಿಪ್ಟೋಕರೆನ್ಸಿ ಕ್ಷೇತ್ರಕ್ಕೂ ಇಳಿದಿರುವ ಫೇಸ್‌ಬುಕ್‌, ಲಿಬ್ರಾ ಎಂಬ ಹೆಸರಿನ ಕ್ರಿಪ್ಟೋಕರೆನ್ಸಿಯನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಸ್ನೇಹಿತರಿಗೆ ಮೆಸೆಂಜರ್‌ನಲ್ಲೇ ಹಣ ಕಳುಹಿಸಬಹುದು. ಅಷ್ಟೇ ಅಲ್ಲ, ಹಲವು ಸೇವೆಗಳನ್ನೂ ಈ ಲಿಬ್ರಾ ಕಾಯ್ನ ಬಳಸಿ ಪಡೆಯಬಹುದು. ಮಂಗಳವಾರ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಇದನ್ನು ಬಿಡುಗಡೆ ಮಾಡಲಾಗಿದ್ದು, ಇದು ಬಿಟ್‌ಕಾಯ್ನ ರೀತಿಯೇ ಕೆಲಸ ಮಾಡಲಿದೆ.

ಮುಂದಿನ ವರ್ಷದಿಂದ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಸದ್ಯ ಪ್ರಾಯೋಗಿಕವಾಗಿ ಚಾಲ್ತಿಗೆ ಬರಲಿದೆ. ಮಾಸ್ಟರ್‌ ಕಾರ್ಡ್‌, ವೀಸಾ, ಉಬರ್‌ ಸೇರಿದಂತೆ 28ಕ್ಕೂ ಹೆಚ್ಚು ಸಂಸ್ಥೆಗಳು ಲಿಬ್ರಾ ರೂಪಿಸುವಲ್ಲಿ ಕೈಜೋಡಿಸಿವೆ. ಈ ಕ್ರಿಪ್ಟೋ ಕರೆನ್ಸಿಯನ್ನು ಫೇಸ್‌ಬುಕ್‌ ಬಳಸುವ ಯಾರು ಬೇಕಾದರೂ ವಿನಿಮಯ ಮಾಡಬಹುದಾದ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ