ಜಪಾನ್ಗೊಬ್ಬ ಪುಟಾಣಿ ದೊರೆ
13ರ ಪೋರನ ಹೆಗಲ ಮೇಲೆ ರಾಜಮನೆತನದ ಭವಿಷ್ಯ
Team Udayavani, Oct 19, 2019, 5:02 AM IST
ಟೋಕಿಯೋ: ಜಪಾನ್ ರಾಜ ಮನೆತನದ ಭವಿಷ್ಯ ಈಗ 13 ವರ್ಷದ ಬಾಲಕ ಹಿಸಾಹಿಟೋ ಮೇಲೆ ನಿಂತಿದೆ. ರಾಜ ಮನೆತನದಲ್ಲಿ ಗಂಡು ಸಂತಾನ ವಿರಳವಾಗಿರುವ ಕಾರಣ, ಹಾಲಿ ದೊರೆಯ ಪದತ್ಯಾಗ ಬಳಿಕ ಅವರ ಕಿರಿಯ ಸಹೋದರ ಅಕಿಶಿನೋ ದೊರೆಯ ಸ್ಥಾನಕ್ಕೇರಲಿದ್ದಾರೆ. ತದಅನಂತರ ಇರುವುದು ಈ ಬಾಲಕ ಮಾತ್ರ. ಹೀಗಾಗಿ, ಆತನನ್ನು ಈಗಲೇ ಮುಂದಿನ ದೊರೆ ಎಂದು ಬಿಂಬಿಸಿ, ಆ ಹೊಣೆ ಹೊರಲು ಅವನನ್ನು ತಯಾರು ಮಾಡಲಾಗುತ್ತಿದೆ.
ಹಿಂದಿನ ದೊರೆ ಅಕಿಹಿಟೋ ಅವರ ಪದ ತ್ಯಾಗದ ಅನಂತರ ನರುಹಿಟೋ(59) ಅವರು ಮೇ 1ರಂದು ದೊರೆಯ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಇದೇ 22ರಂದು ವಿದೇಶಿ, ದೇಶೀಯ ಗಣ್ಯರ ಸಮ್ಮುಖದಲ್ಲಿ ನರುಹಿಟೋ ಅಧಿಕೃತ ಪಟ್ಟಾಭಿಷೇಕ ನಡೆಯಲಿದೆ. ಅನಂತರದಲ್ಲಿ ಅವರ ಕಿರಿಯ ಸಹೋದರ ಪ್ರಿನ್ಸ್ ಅಕಿಶಿನೋ(53) ರಾಜನ ಪಟ್ಟಕ್ಕೇರುತ್ತಾರೆ. ಅನಂತರ ಪಟ್ಟಕ್ಕೇರಲು ಗಂಡು ಸಂತಾನ ಎಂದು ಇರುವುದು ಹಿಸಾಹಿಟೋ ಮಾತ್ರ.
ಆಗಸ್ಟ್ನಲ್ಲಿ ಈ ಕಿರಿಯ ರಾಜಕುಮಾರ ಹಿಸಾಹಿಟೋ ಭೂತಾನ್ಗೆ ಭೇಟಿ ನೀಡಿದ್ದು, ಅದು ಆತನ ಮೊದಲ ಸಾಗರೋತ್ತರ ಪ್ರಯಾಣವಾಗಿತ್ತು. ಜಪಾನ್ನ ಭವಿಷ್ಯದ ದೊರೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸ ಲೆಂದೇ ಹಿಸಾಹಿಟೋನನ್ನು ಭೂತಾನ್ಗೆ ಕರೆದೊಯ್ಯಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಸಾಂಪ್ರದಾಯಿಕ “ಹಕಾಮಾ’ ಕಿಮೋನೋ ಧರಿಸಿಕೊಂಡು ಆತಿಥೇಯರಿಗೆ ನಮಿಸಿದ ಶೈಲಿ, ಆರ್ಚರಿಯತ್ತ ತೋರಿದ ಆಸಕ್ತಿ ಎಲ್ಲವನ್ನೂ ಗಮನಿಸಿದ್ದ ಮಂದಿ, ಮುಂದಿನ ಜಪಾನ್ ರಾಜನನ್ನು ಹಿಸಾಹಿಟೋನಲ್ಲಿ ಕಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್