Udayavni Special

ಕೋವಿಡ್ ಹತೋಟಿಗೆ ಲಾಕ್ ಡೌನ್ ಮಾತ್ರವಲ್ಲ.. : ಸಾಂಕ್ರಾಮಿಕ ರೋಗ ತಜ್ಞ ಫೌಸಿ ಹೇಳಿದ್ದೇನು.?

ಶ್ರೀರಾಜ್ ವಕ್ವಾಡಿ, May 4, 2021, 4:22 PM IST

Fauci’s advice to India: Clamp nationwide lockdown, start massive vaccination

ವಾಷಿಂಗ್ಟನ್ :  ಭಾರತದಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ಸಾವು ನೋವುಗಳನ್ನುರಾಷ್ಟ್ರದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ದಿನ ನಿತ್ಯ ಕೋವಿಡ್ ಸೋಂಕಿನ ಅಲೆ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಆಕ್ಸಿಜನ್, ಲಸಿಕೆ ಹಾಗೂ ಮೆಡಿಕಲ್ ಸೌಲಭ್ಯಗಳ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ದೇಶದಲ್ಲಿ ಕೋವಿಡ್ ರೂಪಾಂತರಿ ತಂದಿಟ್ಟ ಅವಾಂತರದ ಬಗ್ಗೆ ವಿಶ್ವದಾದ್ಯಂತ ಕಳವಳ ವ್ಯಕ್ತವಾಗುತ್ತಿದೆ. ಒಂದೆಡೆ ಸೋಂಕಿನ ನಿಯಂತ್ರಣಕ್ಕೆ ದೇಶದ ಬಹುತೇಕ ರಾಜ್ಯಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೂ ಕೂಡ ಸೋಂಕಿನ ವೇಗ ಕಡಿಮೆಯಾಗುತ್ತಿಲ್ಲ. ಮತ್ತೆ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಕೊನೆಯ ಅಸ್ತ್ರ’ವನ್ನು ಬಳಕೆ ಮಾಡುತ್ತಾರಾ ಎಂಬ ಚಿಂತೆ ಸಾರ್ಚಜನಿಕರಲ್ಲಿ ಕಾಡಿದೆ.

ಕೆಲವು ರಾಜಕೀಯ ನಾಯಕರು, ವೈದ್ಯಕೀಯ ತಜ್ಞರು ದೇಶದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು, ದೇಶದಾದ್ಯಂತ ಲಾಕ್ ಡೌನ್ ಘೋಷಿಸಿ, ಲಾಕ್ ಡೌನ್ ಗೆ ಬದಲಾಗಿ ಪರ್ಯಾಕ ಮಾರ್ಗವನ್ನು ಕಂಡುಕೊಳ್ಳಿ, ಮೆಡಿಕಲ್ ತುರ್ತು ಸೌಲಭ್ಯವನ್ನು ಪೂರೈಸಿ ಎಂದು ಭಿನ್ನ ಭಿನ್ನ ಅಭಿಪ್ರಾಯಗಳನ್ನು ನೀಡುತ್ತಿರುವುದು ಮತ್ತಷ್ಟು ಆತಂಕ, ಗೊಂದಲವನ್ನು ಸೃಷ್ಟಿ ಮಾಡಿದೆ.

ಓದಿ : ಜನತೆ ನನಗೆ ಸೋತು ಗೆದ್ದಿರುವವರು ಎಂದು ಸರ್ಟಿಫಿಕೇಟ್ ನೀಡಿದ್ದಾರೆ: ಸತೀಶ್ ಜಾರಕಿಹೊಳಿ

ದೇಶದಲ್ಲಿ ಕೋವಿಡ್ ಸೋಂಕಿನ ತೀವ್ರತೆ ಏರಿಕೆಯಾದ ಹಿನ್ನಲೆಯಲ್ಲಿ, ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಮತ್ತು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಭಾರತದ ಈಗಿನ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಲಾಕ್ ಡೌನ್, ಬೃಹತ್ ವ್ಯಾಕ್ಸಿನೇಷನ್ ಮತ್ತು ಹೆಚ್ಚಿನ ಸಂಖ್ಯೆಯ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ ಮಾಡುವುದೊಂದೇ ಮಾರ್ಗ ಎಂದು ಹೇಳಿದ್ದಾರೆ.

ವಿಶ್ವದ ಅಗ್ರ ಪಂಕ್ತಿಯ ಸಾಂಕ್ರಾಮಿಕ ರೋಗ ತಜ್ಞ ಫೌಸಿ ಈ ರೀತಿಯ ಸಲಹೆ ನೀಡಿದ್ದು, ಭಾರತದಲ್ಲಿ ಹಠಾತ್ ಏರಿಕೆಯಾಗುತ್ತಿರುವ ಕೋವಿಡ್ ರೂಪಾಂತರಿಯ ಅಲೆಯ ಬಗ್ಗೆ ಕಳವಳ ಪಟ್ಟಿದ್ದಾರೆ.

ಅನೇಕ ಜನರು ಸೋಂಕಿಗೆ ಒಳಗಾದಾಗ, ಚಿಕಿತ್ಸೆ ಮಾಡಲು ವೈದ್ಯಕೀಯ ಸೌಲಭ್ಯಗಳ  ಕೊರತೆ,  ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಮತ್ತು ಸರಬರಾಜುಗಳ ಕೊರತೆಯನ್ನು ಹೊಂದಿರುವಾಗ ನಿಜವಾಗಿಯೂ ಹತಾಶ ಪರಿಸ್ಥಿತಿಯಾಗುತ್ತದೆ. ಡಾ. ಫೌಸಿ ಬೇಸರ ವ್ಯಕ್ತ ಪಡಿಸಿದ್ದಾರೆ.

ದೇಶದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಪೂರೈಸುವಲ್ಲಿ ಅಲ್ಲಿನ ಸರ್ಕಾರ ಕಾರ್ಯ ನಿರ್ವಹಿಸಬೇಕು ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಂಭವವಿದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ದೇಶದಾದ್ಯಂತ ಇತರೆ ರಾಷ್ಟ್ರಗಳು ಕಳೆದ ವರ್ಷ ಕಠಿಣ ಲಾಕ್ ಡೌನ್ ಮಾಡಿದಂತೆ ಮಾಡಬೇಕು ಎಂದಿದ್ದಾರೆ.

ಇನ್ನು, ಲಸಿಕೆ ಹಾಕುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ಇದು ಹಲವಾರು ವಾರಗಳ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ ಅಷ್ಟೇ ಎಂದು ಅವರು ಹೇಳಿದರು.

“ಭಾರತವು ಈಗಾಗಲೇ ಲಸಿಕೆಯ ಅಭಿಯಾನವನ್ನು ಮಾಡುತ್ತಿದೆ ಎಂದು ನನಗೆ ತಿಳಿದಿದೆ, ಆದ್ದರಿಂದ ನೀವು ಲಸಿಕೆ ಅಭಿಯಾನ ಮಾಡುತ್ತಿಲ್ಲ ಎಂದು ನಾನು ನಿಮಗೆ ಹೇಳುತ್ತಿಲ್ಲ.

ಚೀನಾ ಕಳೆದ ವರ್ಷ ಏನು ಮಾಡಿದೆ, ಏಕಾಏಕಿ ಆಸ್ಟ್ರೇಲಿಯಾ ಏನು ಮಾಡಿತು, ನ್ಯೂಜಿಲೆಂಡ್ ಏನು ಮಾಡಿತು, ಇತರ ದೇಶಗಳು ಏನು ಮಾಡಿದ್ದವು ಎಂಬುದು ತುಲನಾತ್ಮಕವಾಗಿ ಸೀಮಿತ ಅವಧಿಗೆ ಸಂಪೂರ್ಣವಾಗಿ ಲಾಕ್ ಮಾಡುವ ನಿರ್ಧಾರಕ್ಕೆ ಬಂದವು. ಆರು ತಿಂಗಳವರೆಗೆ ಲಾಕ್ ಡೌನ್ ಮಾಡಲು ನಿರ್ಧಾರ ತೆಗೆದುಕೊಂಡವು. ನೀವು ಕೆಲವು ವಾರಗಳವರೆಗೆ ಲಾಕ್ ಡೌನ್ ಮಾಡುವುದು ಉತ್ತಮ. ಇಲ್ಲವಾದಲ್ಲಿ ಸೋಂಕಿನ ಹರಡುವಿಕೆ ಮತ್ತಷ್ಟು ಹೆಚ್ಚಳವಾಗುವುದಕ್ಕೆ ಸಾಧ್ಯವಿದೆ. ಈ ಬಗ್ಗೆ ಗಮನ ಹರಿಸುವುದು ಉತ್ತಮ. ಲಾಕ್ ಡೌನ್ ಮಾತ್ರವಲ್ಲ, ಸೋಂಕಿತರ ಚಿಕಿತ್ಸೆಗೆ ಬೇಕಾದ ಎಲ್ಲಾ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದು ಅಗತ್ಯ  ಎಂದು ಡಾ. ಫೌಸಿ ಹೇಳಿದರು.

ಇನ್ನು. ತಾತ್ಕಾಲಿಕ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸಲು ಸಶಸ್ತ್ರ ಪಡೆಗಳ ಸಹಾಯವನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಓದಿ : 2021 ಆರ್ಥಿಕ ವರ್ಷ: ಹೆಚ್ಚು ಕಾರು ಮಾರಾಟವಾದ ಟಾಪ್ ತ್ರಿ ಸಿಟಿಗಳ ಲಿಸ್ಟ್ ನಲ್ಲಿ ಬೆಂಗಳೂರು!?

ಟಾಪ್ ನ್ಯೂಸ್

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

sadu

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಸ್ರೇಲ್‌ ಸೇನೆಯ ಮುಂದುವರಿದ ವೈಮಾನಿಕ ದಾಳಿ: ಹಮಾಸ್‌ ರಹಸ್ಯ ಸುರಂಗ ಧ್ವಂಸ

ಇಸ್ರೇಲ್‌ ಸೇನೆಯ ಮುಂದುವರಿದ ವೈಮಾನಿಕ ದಾಳಿ: ಹಮಾಸ್‌ ರಹಸ್ಯ ಸುರಂಗ ಧ್ವಂಸ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ವಿಶ್ವ ಸುಂದರಿ ಸ್ಪರ್ಧೆ: ಮೆಕ್ಸಿಕೊದ ಆ್ಯಂಡ್ರಿಯಾ ಮೆಝಾಗೆ ಮಿಸ್ ಯೂನಿವರ್ಸ್ ಕಿರೀಟ

ವಿಶ್ವ ಸುಂದರಿ ಸ್ಪರ್ಧೆ: ಮೆಕ್ಸಿಕೊದ ಆ್ಯಂಡ್ರಿಯಾ ಮೆಝಾಗೆ ಮಿಸ್ ಯೂನಿವರ್ಸ್ ಕಿರೀಟ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

MUST WATCH

udayavani youtube

ಉಡುಪಿ ಮಲ್ಲಿಗೆ ಬೆಳೆದು ಆದಾಯ ಗಳಿಸಿದ ಪುತ್ತೂರಿನ ಲೋಬೋ..!

udayavani youtube

ಮಳೆಗೆ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!

udayavani youtube

ಆಪತ್ಬಾಂಧವ ಆಟೋ ಡ್ರೈವರ್ – ಮಹೇಶ್ ಮಣಿಪಾಲ

udayavani youtube

ಕೊರೊನಾ ವಿಷಮ ಸ್ಥಿತಿ ಯಲ್ಲಿರುವ ಭಾರತಕ್ಕೆ “ಸಂಜೀವಿನಿ’

udayavani youtube

ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ನಾಗಿಣಿ ಡ್ಯಾನ್ಸ್ ಶಿಕ್ಷೆ

ಹೊಸ ಸೇರ್ಪಡೆ

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಕೋವಿಡ್ ಸೋಂಕಿತರಿಗೆ ಕಲಬುರಗಿ ಪಾಲಿಕೆಯಿಂದ ಐದು ಆಟೋ ಆಂಬ್ಯುಲೆನ್ಸ್ ವ್ಯವಸ್ಥೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

sadu

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.