ಕ್ಯೂಬಾ ಅಧ್ಯಕ್ಷ ಕ್ಯಾಸ್ಟ್ರೋ ಹಿರಿಯ ಪುತ್ರ ಫಿಡೆಲಿಟೋ ಆತ್ಮಹತ್ಯೆ
Team Udayavani, Feb 2, 2018, 12:23 PM IST
ಹವಾನಾ , ಕ್ಯೂಬಾ : ದಿವಂಗತ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಜನಪ್ರಿಯ ಹಿರಿಯ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸರಕಾರಿ ಮಾಧ್ಯಮ ವರದಿ ಮಾಡಿದೆ; ಅವರಿಗೆ 68 ವರ್ಷ ವಯಸ್ಸಾಗಿತ್ತು.
ಫಿಡೆಲ್ ಕ್ಯಾಸ್ಟ್ರೋ ಡಯಾಸ್ ಬ್ಯಾಲಾರ್ಟ್ ಅವರು ಕಳೆದ ಹಲವು ತಿಂಗಳಿಂದ ತೀವ್ರವಾದ ಖನ್ನತೆಯಿಂದ ಬಳಲುತ್ತಿದ್ದರು. ವೈದ್ಯರ ಸಮೂಹವೊಂದು ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಇಂದು ಬೆಳಗ್ಗೆ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಕ್ಯೂಬಾ ಅಧಿಕೃತ ದೈನಿಕ ಗ್ರ್ಯಾನ್ಮಾ ವರದಿ ಮಾಡಿದೆ.
ಕ್ಯಾರಿಬ್ಬಿಯನ್ ದ್ವೀಪ ಸಮೂಹದಲ್ಲಿ “ಫಿಡೆಲಿಟೋ’ ಎಂಬ ಅಡ್ಡ ಹೆಸರಿನಿಂದ ಜನಪ್ರಿಯರಾಗಿ ಕ್ಯಾಸ್ಟ್ರೋ ಪುತ್ರ ಆರಂಭದಲ್ಲಿ ತನ್ನ ಖನ್ನತೆಗಾಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ಅನಂತರ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮಿರ್ತಾ ಡಯಾಸ್ ಬ್ಯಾಲಾಟ್ರ ಅವರೊಂದಿಗೆ ಮೊದಲ ಮದುವೆಯಲ್ಲಿ ಫಿಡೆಲಿಟೋ ಕ್ಯಾಸ್ಟ್ರೋ 1949ರ ಸೆಪ್ಟಂಬರ್ 1ರಂದು ಜನಿಸಿದ್ದರು. ಯಾವುದೇ ರಾಜಕೀಯ ಹುದ್ದೆ ಹೊಂದಿಲ್ಲದ ಹೊರತಾಗಿಯೂ ಫಿಡೆಲಿಟೋ ಜನಪ್ರಿಯರಾಗಿದ್ದರು. ತನ್ನ ತಂದೆಯನ್ನು ಅವರು ಬಹುವಾಗಿ ಹೋಲುತ್ತಿದ್ದರು. ಇಬ್ಬರೂ ಎತ್ತರದ ನಿಲುವು ಮತ್ತು ಕುರುಚಲು ಗಡ್ಡ ಹೊಂದಿದವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!