ಪ್ರಾಚೀನ ಕಾಲದ 50 ಶವ ಪೆಟ್ಟಿಗೆಗಳು ಪತ್ತೆ
Team Udayavani, Jan 18, 2021, 8:10 AM IST
ಕೈರೋ: ಜಗತ್ತಿನ ಇತಿಹಾಸಕ್ಕೆ ಹಲವು ಕೊಡುಗೆಗಳನ್ನು ನೀಡಿದ ಈಜಿಪ್ಟ್ನಲ್ಲಿ 16ನೇ ಶತಮಾನದಿಂದ ಕ್ರಿಸ್ತಪೂರ್ವ 11ನೇ ಶತಮಾನದ ಅವಧಿಗೆ ಸೇರಿದ 50 ಶವಪೆಟ್ಟಿಗಳನ್ನು ಪತ್ತೆ ಹಚ್ಚಲಾಗಿದೆ. ಕೈರೋದ ದಕ್ಷಿಣ ಭಾಗದ ಸಾಕ್ಕರ ಎಂಬಲ್ಲಿರುವ ಪ್ರಾಚ್ಯ ಉತ್ಖನನ ಕೇಂದ್ರದಲ್ಲಿ ಅವುಗಳು ಸಿಕ್ಕಿವೆ. ಜತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಕೇಂದ್ರದ ಕುರುಹೂ ಪತ್ತೆಯಾಗಿದೆ. ಅದು ಈಜಿಪ್ಟ್ನ ದೊರೆ ತೇತಿ ಎಂಬಾತನ ರಾಣಿ ನೆರ್ಟ್ ಎಂಬಾಕೆಯ ಅಂತಿಮ ಸಂಸ್ಕಾರ ನಡೆಸಿದ ಕೇಂದ್ರವಾಗಿದ್ದಿರಬಹುದು ಎಂದು ಇತಿಹಾಸ ಸಂಶೋಧಕರು ಪ್ರತಿಪಾದಿಸಿದ್ದಾರೆ.
ಅವುಗಳು ಸುಮಾರು 3 ಸಾವಿರ ವರ್ಷಗಳಷ್ಟು ಹಿಂದಿನದ್ದು ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ದೇಶದ ಇತಿಹಾಸವನ್ನೇ ಪುನಾರಚಿಸುವಂಥ ಹಲವು ಮಹತ್ವದ ಅಂಶಗಳು ತಿಳಿದುಬರುವ ಸಾಧ್ಯತೆ ಇದೆ. ಪತ್ತೆಯಾಗಿರುವ ಶವಪೆಟ್ಟಿಗೆಗಳು 40 ಅಡಿ ಉದ್ದವಿದೆ ಎಂದು ಸಂಶೋಧಕ ಝಹಿ ಹವಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರಿಗೆ ಇತಿಹಾಸ-ಭವಿಷ್ಯ ಸೃಷ್ಟಿಸುವ ಸಾಮರ್ಥ್ಯವಿದೆ : ರಾಹುಲ್ ಗಾಂಧಿ
ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ
ಪಾಕ್ ನಲ್ಲಿ ಒಂದೇ ಕುಟುಂಬದ ಐವರು ಹಿಂದೂಗಳ ಕತ್ತು ಸೀಳಿ ಕೊಲೆ!
ಪೋಪ್- ಶಿಯಾ ಧರ್ಮಗುರು ಭೇಟಿ : ಐತಿಹಾಸಿಕ ಇರಾಕ್ ಭೇಟಿಯಲ್ಲಿ ಮತ್ತೂಂದು ಚರಿತ್ರಾರ್ಹ ನಡೆ
ಅಮೆರಿಕದಲ್ಲಿ ಭಾರತೀಯರ ಪಾರಮ್ಯ! ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ