Udayavni Special

ವಿಮಾನ ಪತನ: ಪಾಕ್‌ ಮತ್ತೆ ಸುಳ್ಳು 

Team Udayavani, Mar 7, 2019, 12:30 AM IST

s-16.jpg

ಇಸ್ಲಾಮಾಬಾದ್‌: ಇತ್ತೀಚೆಗೆ ಭಾರತ-ಪಾಕ್‌ ನಡುವೆ ನಡೆದ ಉದ್ವಿಗ್ನ ಸ್ಥಿತಿ, ಅನಂತರದ ಬೆಳವಣಿಗೆಗಳ ಕುರಿತು ಪದೇ ಪದೆ ಸುಳ್ಳು ಹೇಳುತ್ತಾ ಸಿಕ್ಕಿಬಿದ್ದಿರುವ ಪಾಕಿಸ್ಥಾನ, ಇದೀಗ ಮತ್ತೂಂದು ಸುಳ್ಳಿನ ಸರಮಾಲೆಯನ್ನು ಹೆಣೆದಿದೆ. ಭಾರತದ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಮತ್ತೂಂದು ಸುಳ್ಳನ್ನು ಪಾಕಿಸ್ಥಾನ ಹೇಳಿದೆ. ಅಲ್ಲಿನ ಸಂಸತ್‌ನ ಕೆಳ ಮನೆ ನ್ಯಾಷನಲ್‌ ಅಸೆಂಬ್ಲಿಯಲ್ಲಿ ಬುಧವಾರ ಮಾತನಾಡಿದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಫೆ. 14ರ ಅನಂತರದ ಘಟನೆ ಬಳಿಕ ಭಾರತ ಪ್ರತಿರೋಧ ಕ್ರಮಗಳನ್ನು ಕೈಗೊಂಡ ವೇಳೆ ಪಾಕಿಸ್ಥಾನದ ವಾಯುಪಡೆ ಐಎಎಫ್ನ 2 ವಿಮಾನಗಳನ್ನು ಹೊಡೆದು ಉರುಳಿಸಿದೆ. ಭಾರತದ ವಿಮಾನಗಳು ಪಾಕಿಸ್ಥಾನದ ವಾಯು ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕೇ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಉಗ್ರರ ಮೃತದೇಹ ತೋರಿಸಿ: ಪುಲ್ವಾಮಾ ದಾಳಿಯಲ್ಲಿ ಅಸುನೀಗಿದ ಇಬ್ಬರು ಯೋಧರ ಕುಟುಂಬ ಸದಸ್ಯರು, ಐಎಎಫ್ ಬಾಲಾಕೋಟ್‌ನಲ್ಲಿ ನಡೆಸಿದ ದಾಳಿಯ ಬಗ್ಗೆ ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ. “ಯೋಧರ ಛಿದ್ರಗೊಂಡ ದೇಹದ ಭಾಗಗಳನ್ನು ನೋಡಿದ್ದೇವೆ.  ಉಗ್ರರ ಮೃತದೇಹ ನೋಡಿದರಷ್ಟೇ ನಮಗೆ ಸಮಾಧಾನವಾಗುತ್ತದೆ’ ಎಂದಿದ್ದಾರೆ.

ಕೇಸು ದಾಖಲಿಸಿ: ಪುಲ್ವಾಮಾ ಘಟನೆ ಕುರಿತ ಟ್ವೀಟ್‌ಗೆ ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ತಮ್ಮ ವಿರುದ್ಧ ಕೇಸು ದಾಖಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.  

ಪಾಕ್‌ ಶೆಲ್‌ ದಾಳಿ: ಜಮ್ಮು- ಕಾಶ್ಮೀರದ ರಜೌರಿ ಹಾಗೂ ಪೂಂಛ… ಜಿಲ್ಲೆಯ ಎಲ್‌ಒಸಿಯಲ್ಲಿ ಪಾಕಿಸ್ಥಾನದ ದಾಳಿ ಮುಂದುವರಿದಿದೆ.

ಮುಂದುವರಿದ “ಕಠಿನ ಕ್ರಮ’: ಉಗ್ರ ಸಂಘಟನೆಗಳ ವಿರುದ್ಧ “ಕಠಿನ ಕ್ರಮ’ ಮುಂದುವರಿಸಿರುವ ಪಾಕಿಸ್ಥಾನ ಬುಧ ವಾರ ಜಮಾತ್‌-ಉದ್‌-ದಾವಾ, ಅದರ ಸಹ ಸಂಸ್ಥೆ ಫ‌ಲಾಹ್‌-ಇ-ಇನ್ಸಾನಿಯತ್‌ ಫೌಂಡೇಷನ್‌ ಸಹಿತ ಹಲವು ಉಗ್ರ ಸಂಘಟನೆಗಳಿಗೆ ಸೇರಿದ ಸೆಮಿನರಿಗಳು, ಆಸ್ತಿಗಳನ್ನು ವಶಪಡಿಸಿಕೊಂಡಿದೆ. 

ಹೆಚ್ಚುವರಿ ಸೇನೆ ಜಮಾವಣೆ
ಭಾರತ ಮತ್ತು ಪಾಕಿಸ್ಥಾನದ ನಡುವೆ ಸಮರದ ವಾತಾವರಣ ತಲೆದೋರಿರುವ ಬೆನ್ನಲ್ಲೇ, ಪಾಕಿಸ್ಥಾನವು ಕಾಶ್ಮೀರದ ಬಳಿಯಿರುವ ತನ್ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಹೆಚ್ಚುವರಿ ಸೈನ್ಯವನ್ನು ಹಾಗೂ ಯುದ್ಧ ಸಲಕರಣೆಗಳನ್ನು ಜಮೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆ ನಡೆಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ಥಾನ- ಆಫ್ಘಾನಿಸ್ಥಾನದ ಗಡಿಯಲ್ಲಿ ಜಮೆಗೊಂಡಿದ್ದ ಪಾಕಿಸ್ಥಾನದ ಹೆಚ್ಚುವರಿ ಸೈನ್ಯ ಹಾಗೂ ಯುದ್ಧ ಸಲಕರಣೆಗಳನ್ನು ಎಲ್‌ಒಸಿ ಬಳಿಯ ನೌಶೇರಾ ಪ್ರಾಂತ್ಯದ ಕಡೆಗೆ ರವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸೊಳ್ಳೆ ಹೊಡೆದ ಅನಂತರ ಲೆಕ್ಕ ಮಾಡುವುದಿಲ್ಲ
ಬಾಲಾಕೋಟ್‌ನಲ್ಲಿ ಭಾರತ ದಾಳಿ ನಡೆಸಿದ ಅನಂತರ ಅಲ್ಲಿ ಸತ್ತವರ ಸಂಖ್ಯೆಯೆಷ್ಟು ಎಂಬ ಬಗ್ಗೆ ಸಾಕ್ಷ್ಯ ನೀಡಿ ಎಂದು ವಿಪಕ್ಷಗಳು ಕೇಳುತ್ತಿರುವುದಕ್ಕೆ ಕೇಂದ್ರ ಸಚಿವ ವಿ.ಕೆ. ಸಿಂಗ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸೊಳ್ಳೆಗಳನ್ನು ಸಾಯಿಸಿದ ಅನಂತರ ಅವುಗಳನ್ನು ಲೆಕ್ಕ ಮಾಡುತ್ತ ಕೂರುವುದಿಲ್ಲ. ಬದಲಿಗೆ ನೆಮ್ಮದಿಯಿಂದ ನಿದ್ರೆ ಮಾಡುತ್ತೇವೆಟ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಇನ್ನೊಂದೆಡೆ ಮುಂದಿನ ಬಾರಿ ಇಂಥ ದಾಳಿ ನಡೆಸುವಾಗ ಈ ರೀತಿ ಪ್ರಶ್ನೆ ಕೇಳುವವರನ್ನು ಕರೆದುಕೊಂಡು ಹೋಗಿ ಎಸೆಯ ಬೇಕು. ಎಷ್ಟು ಜನರು ಸತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಬರಲಿ ಎಂದಿದ್ದಾರೆ.

ಟಾಪ್ ನ್ಯೂಸ್

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌, ಚಿರಾಗ್‌ ಮುನ್ನಡೆ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌, ಚಿರಾಗ್‌ ಮುನ್ನಡೆ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಬ್ರಹ್ಮಾವರದ ಸಾಧಕಿ ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ

ಬ್ರಹ್ಮಾವರದ ಸಾಧಕಿ ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ

ಶ್ರೀನಾಥ್‌, ಹರ್ಭಜನ್‌ಗೆ ಪ್ರತಿಷ್ಠಿತ ಎಂಸಿಸಿ ಗೌರವ

ಶ್ರೀನಾಥ್‌, ಹರ್ಭಜನ್‌ಗೆ ಪ್ರತಿಷ್ಠಿತ ಎಂಸಿಸಿ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.