“ಸಾರೆಗಾಮಾಪಾ’ ಮಾಜಿ ಸ್ಪರ್ಧಿ, ಪಾಕ್ ಗಾಯಕ ಝೈನ್ ಅಲಿ ನಿಗೂಢ ಸಾವು
Team Udayavani, Jul 24, 2017, 10:55 AM IST
ಲಾಹೋರ್: ಉದಯೋನ್ಮುಖ ಪಾಕ್ ಗಾಯಕ ಹಾಗೂ “ಸಾರೆಗಾಮಾಪಾ’ ಸ್ಪರ್ಧೆಯ ಮಾಜಿ ಸ್ಪರ್ಧಿ ಝೈನ್ ಅಲಿ ಅವರು ಲಾಹೋರ್ನಲ್ಲಿನ ತನ್ನ ಸ್ನೇಹಿತರ ಮನೆಯಲ್ಲಿ ನಿಗೂಢ ಸನ್ನಿವೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಮ್ ಪ್ರಕಾರ ಝೈನ್ ಅವರು ಕಳೆದ ಜು.20ರಂದು ಲಾಹೋರ್ನ ಶೇಖಾಪುರದಲ್ಲಿನ ತನ್ನ ಸ್ನೇಹಿತರ ಮನೆಗೆ ಹೋಗಿದ್ದರು. ಅನಂತರದಲ್ಲಿ ಅವರ ಶವ ಶೌಚಾಲಯದಲ್ಲಿ ಪತ್ತೆಯಾಗಿತ್ತು.
ಝೈನ್ ಅವರ ನಿಗೂಢ ಸಾವಿನ ಕುರಿತ ತನಿಖೆ ನಡೆಯುತ್ತಿದೆ. ಝೈನ್ ಅವರ ಸಹೋದರ ಮಾಧ್ಯಮದೊಂದಿಗೆ ಮಾತನಾಡುತ್ತಾ “ನನ್ನ ತಮ್ಮನಿಗೆ ಯಾರ ವಿರುದ್ಧವೂ ದ್ವೇಷ, ವೈಷಮ್ಯ ಇರಲಿಲ್ಲ. ಉದಯೋನ್ಮುಖ ಗಾಯಕನಾಗಿದ್ದ ಆತ ಸದ್ಯದಲ್ಲೇ ಸಿನೆಮಾಗೆ ಹಾಡುವವನಿದ್ದ’ ಎಂದು ಹೇಳಿದ್ದಾರೆ.
ಝೈನ್ ಅವರು 2012ರಲ್ಲಿ ಪ್ರಸಿದ್ಧ ಟಿವಿ ಸಂಗೀತ ಕಾರ್ಯಕ್ರಮವಾಗಿದ್ದ “ಸಾರೆಗಾಮಾಪಾ’ದಲ್ಲಿ ಸ್ಪರ್ಧಿಸಿ ತನ್ನ ಹಾಡುಗಾರಿಕೆಯ ಅನನ್ಯತೆಗೆ ಭಾರೀ ಮೆಚ್ಚುಗೆ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ