ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

2023ಕ್ಕೆ ಕಾಲಜ್ಞಾನಿ ಬಾಬಾ ವಂಗಾ ನುಡಿದಿರುವ ಭವಿಷ್ಯವಿದು

Team Udayavani, Dec 4, 2022, 7:30 AM IST

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

ಲಂಡನ್‌:ಹೊಸ ವರ್ಷದ ಹೊಸ್ತಿಲಲ್ಲಿರುವ ಜಗತ್ತಿಗೆ ಬಲ್ಗೇರಿಯಾದ ಕಾಲಜ್ಞಾನಿ ಬಾಬಾ ವಂಗಾ ಅವರ ಭವಿಷ್ಯವಾಣಿ ಆತಂಕ ತರಿಸಿದೆ. 9/11ರ ಉಗ್ರರ ದಾಳಿ, ಬ್ರೆಕ್ಸಿಟ್‌, ರಾಜಕುಮಾರಿ ಡಯಾನಾ ಸಾವು, ಬರಾಕ್‌ ಒಬಾಮ ಅಧ್ಯಕ್ಷತೆ ಕುರಿತಂತೆ ನಿಖರ ಭವಿಷ್ಯ ನುಡಿದಿದ್ದ ಬಾಂಬಾ ವಂಗಾ ಅವರು 2023ರ ಭವಿಷ್ಯವನ್ನು ಏನೆಂದು ಬರೆದಿದ್ದಾರೆ ಗೊತ್ತಾ?

1. ಭೂಮಿಯ ಕಕ್ಷೆ ಬದಲಾವಣೆ
2023ರಲ್ಲಿ ಭೂಮಿಯ ಕಕ್ಷೆ ಬದಲಾಗುತ್ತದೆ. ಬ್ರಹ್ಮಾಂಡದಲ್ಲಿ ಭೂಮಿಯ ಚಲನೆಯಲ್ಲಿ ಸ್ವಲ್ಪ ಹೆಚ್ಚು-ಕಮ್ಮಿಯಾದರೂ ದೊಡ್ಡ ಮಟ್ಟದ ಬದಲಾವಣೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಬಾಬಾ ವಂಗಾ. ಭೂಮಿಯೇನಾದರೂ ಸೂರ್ಯನನ್ನು ಸಮೀಪಿಸಿದರೆ, ವಿಕಿರಣಗಳ ಪ್ರಮಾಣ ಹೆಚ್ಚಳವಾಗಿ, ತಾಪಮಾನ ವಿಪರೀತ ಏರಲಿದೆ. ಒಂದು ವೇಳೆ, ಭೂಮಿಯು ಸೂರ್ಯನಿಂದ ಹಿಂದಕ್ಕೆ ಸರಿದರೆ, ನಾವು ಹಿಮಯುಗಕ್ಕೆ ಬಿದ್ದು, ಕತ್ತಲ ಅವಧಿಯು ಹೆಚ್ಚಲಿದೆ.

2. ಸೌರ ಸುನಾಮಿ
ಜಗತ್ತು ಹಿಂದೆಂದೂ ಕಂಡಿರದಂಥ ಸೌರ ಸುನಾಮಿಯು 2023ರಲ್ಲಿ ಸಂಭವಿಸಲಿದೆ ಎಂದೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಸೂರ್ಯನಿಂದ ಹೊರಬರುವ ಜ್ವಾಲೆಗಳು ಕೋಟಿಗಟ್ಟಲೆ ಅಣುಬಾಂಬ್‌ಗಳಷ್ಟು ಬಲಿಷ್ಠವಾಗಿರುತ್ತವೆ. ಮುಂದಿನ ವರ್ಷ ಸಂಭವಿಸುವ ಸೌರ ಸುನಾಮಿಯು ತಂತ್ರಜ್ಞಾನಗಳಿಗೆ ಹಾನಿ ಉಂಟುಮಾಡಲಿದೆ ಮತ್ತು ವಿದ್ಯುತ್‌ ಅಭಾವ, ಸಂವಹನ ವೈಫ‌ಲ್ಯಗಳಿಗೂ ಕಾರಣವಾಗಲಿದೆಯಂತೆ.

3. ಜೈವಿಕ ಅಸ್ತ್ರಗಳು
“ಬೃಹತ್‌ ದೇಶ’ವೊಂದು ಜನರ ಮೇಲೆ ಜೈವಿಕ ಅಸ್ತ್ರವನ್ನು ಪ್ರಯೋಗಿಸಲಿದೆ. ಪರಿಣಾಮವಾಗಿ, ಸಾವಿರಾರು ಜೀವಗಳು ಬಲಿಯಾಗಲಿವೆ. ಈಗಾಗಲೇ ವಿಶ್ವಸಂಸ್ಥೆಯು ಜೈವಿಕ ಅಸ್ತ್ರಗಳ ಪ್ರಯೋಗಕ್ಕೆ ನಿಷೇಧ ಹೇರಿದೆ. ಆದರೂ, ಅನೇಕ ದೇಶಗಳು ರಹಸ್ಯವಾಗಿ ಇಂಥ ಪ್ರಯೋಗಗಳನ್ನು ನಡೆಸುತ್ತಲೇ ಇವೆ.

4. ಪರಮಾಣು ಸ್ಫೋಟ
2023ರಲ್ಲಿ ಪರಮಾಣು ವಿದ್ಯುತ್‌ ಸ್ಥಾವರವೊಂದು ಸ್ಫೋಟಗೊಳ್ಳಲಿದೆ ಎಂದಿದ್ದಾರೆ ಬಾಬಾ ವಂಗಾ. ಈಗಾಗಲೇ ರಷ್ಯಾವು ಉಕ್ರೇನ್‌ಗೆ “ಅಣ್ವಸ್ತ್ರ ಪ್ರಯೋಗದ ಬ್ಲ್ಯಾಕ್‌ಮೇಲ್ ‘ ಮಾಡುತ್ತಿರುವ ಕಾರಣ, ಕೀವ್‌ನಲ್ಲೇ ಈ ಸ್ಫೋಟ ಸಂಭವಿಸಬಹುದೇ ಎಂಬ ಅನುಮಾನ ಮೂಡಿದೆ.

5. ಲ್ಯಾಬ್‌ ಶಿಶುಗಳು
ನೈಸರ್ಗಿಕ ಜನನಗಳ ಸಂಖ್ಯೆ ಕಡಿಮೆಯಾಗಿ, ಮನುಷ್ಯರೆಲ್ಲ ಪ್ರಯೋಗಾಲಯಗಳಲ್ಲೇ ಸೃಷ್ಟಿಯಾಗುವಂತ ಸ್ಥಿತಿ ನಿರ್ಮಾಣವಾಗಲಿದೆ. ಯಾರು ಹುಟ್ಟಬೇಕು ಎಂಬುದನ್ನು ವಿಶ್ವನಾಯಕರು ಮತ್ತು ವೈದ್ಯಕೀಯ ತಜ್ಞರೇ ನಿರ್ಧರಿಸುವಂತಾಗುತ್ತದೆ.

ಯಾರಿವರು ಬಾಬಾ ವಂಗಾ?
1911ರಲ್ಲಿ ಬಲ್ಗೇರಿಯಾದಲ್ಲಿ ಹುಟ್ಟಿದ ಬಾಬಾ ವಂಗಾ ಅವರು ತಮ್ಮ 12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡರು. ಅಂದಿನಿಂದ ಅವರಿಗೆ, ಭವಿಷ್ಯವಾಣಿ ನುಡಿಯುವಂಥ ಅತೀಂದ್ರಿಯ ಶಕ್ತಿ ಬಂತೆಂದು ಹೇಳಲಾಗಿದೆ. “ನಾಸ್ಟ್ರಾಡಾಮಸ್‌ ಆಫ್ ದಿ ಬಾಲ್ಕನ್ಸ್‌’ ಎಂದೇ ಕರೆಯಲ್ಪಡುವ ಅವರು 1996ರಲ್ಲಿ ಕೊನೆಯುಸಿರೆಳೆದರು. ಆದರೆ, 5079ನೇ ಇಸವಿಯವರೆಗಿನ ಭವಿಷ್ಯವಾಣಿಯನ್ನು ಅವರು ಬರೆದು ಹೋಗಿದ್ದಾರೆ. 5079ರಲ್ಲಿ ಈ ಜಗತ್ತು ಅಂತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅವರು ನುಡಿದಿರುವ ಭವಿಷ್ಯ ಶೇ.85ರಷ್ಟು ನಿಜವಾಗಿದೆ ಎಂದು ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.