Udayavni Special

ಆರ್ಥಿಕ ಅಪರಾಧಿಗಳ ಬಗ್ಗು ಬಡಿಯಲು ಮೋದಿ ನವ ಸೂತ್ರ

Team Udayavani, Dec 2, 2018, 6:00 AM IST

s-47.jpg

ಬ್ಯುನಸ್‌ ಐರಿಸ್‌: ಆರ್ಥಿಕ ಅಪರಾಧಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನೆರವಾಗುವ 9 ಅಂಶಗಳ ಕಾರ್ಯ ಸೂಚಿಯೊಂದನ್ನು ಪ್ರಧಾನಿ ಮೋದಿ ಅವರು ಜಿ-20 ಸದಸ್ಯ ರಾಷ್ಟ್ರಗಳ ಮುಂದಿಟ್ಟಿದ್ದಾರೆ. “ಅಂತಾರಾಷ್ಟ್ರೀಯ ವ್ಯಾಪಾರ, ಅಂತಾರಾಷ್ಟ್ರೀಯ ಆರ್ಥಿಕ ಮತ್ತು ತೆರಿಗೆ ವ್ಯವಸ್ಥೆ’ ವಿಚಾರದ ಮೇಲೆ ಜಿ-20 ಒಕ್ಕೂಟದ ಸದಸ್ಯ ರಾಷ್ಟ್ರಗಳಿಗಾಗಿ ಶುಕ್ರವಾರ ಆಯೋಜಿಸಲಾಗಿದ್ದ 2ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ತಮ್ಮಲ್ಲಿ ಆಶ್ರಯ ಪಡೆದಿರುವ ಆರ್ಥಿಕ ಅಪರಾಧಿಗಳನ್ನು ಮೂಲ ದೇಶಕ್ಕೆ ಆದಷ್ಟು ಬೇಗನೆ ಹಸ್ತಾಂತರಿಸಿ ಸಂಬಂಧಪಟ್ಟ ದೇಶದ ಪ್ರಗತಿಗೆ ಕೈಜೋಡಿಸ ಬೇಕು” ಎಂದು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಭಾರತ, ರಷ್ಯಾ, ಚೀನ ತ್ರಿಪಕ್ಷೀಯ ಸಭೆ
ಶೃಂಗಸಭೆಗಾಗಿ ಸೇರಿರುವ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಶನಿವಾರ ತ್ರಿಪಕ್ಷೀಯ ಸಭೆ ನಡೆಯಿತು. ಈ ಮೂರೂ ದೇಶಗಳ ನಡುವೆ 12 ವರ್ಷಗಳ ಅನಂತರ ನಡೆದ ತ್ರಿಪಕ್ಷೀಯ ಸಭೆಯಿದು. ಶನಿವಾರದ ಸಭೆಯಲ್ಲಿ ಮೂವರೂ ನಾಯಕರು, ಮುಕ್ತ ವಿಶ್ವ ಆರ್ಥಿಕತೆಯ ಈ ಕಾಲಘಟ್ಟದಲ್ಲಿ  ತಮ್ಮ ನಡುವಿನ ವಾಣಿಜ್ಯ ಚಟುವಟಿಕೆಗಳನ್ನು ಪರಸ್ಪರ ಸಹಕಾರದೊಂದಿಗೆ ಮುಂದುವರಿಸಿಕೊಂಡು ಹೋದಲ್ಲಿ ಆಗುವ ಲಾಭಗಳ ಬಗ್ಗೆ ಚರ್ಚಿಸಿದರು. ಮಾತುಕತೆ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ, “ರಿಕ್‌ (ರಷ್ಯಾ-ಇಂಡಿಯಾ-ಚೀನ) ದೇಶಗಳ ನಡುವಿನ ಚರ್ಚೆ ಮಹತ್ವದ್ದಾಗಿದ್ದು, ಮೂರೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲು, ವಿಶ್ವಶಾಂತಿಗೆ ಗಣನೀಯ ಕೊಡುಗೆ ನೀಡಲು ತೀರ್ಮಾನಿಸಲಾಯಿತು’ ಎಂದರು.

ಮೋದಿಗೆ ಅಪು ಹೋಲಿಸಿದ ವಾಹಿನಿಗೆ ಛೀಮಾರಿ
ಶೃಂಗಸಭೆಗಾಗಿ ಗುರುವಾರ ಬ್ಯುನಸ್‌ ಐರಿಸ್‌ಗೆ ಪ್ರಧಾನಿ ಮೋದಿ ಆಗಮಿಸಿದ್ದನ್ನು ನೇರಪ್ರಸಾರ ಮಾಡಿದ ಅರ್ಜೆಂಟೀನದ “ಕ್ರೋನಿಕಾ ಟಿವಿ’ ಎಂಬ ವಾಹಿನಿ, ಮೋದಿಯವರನ್ನು ಅಮೆರಿಕದ ಜನಪ್ರಿಯ ಕಾಮಿಕ್‌ ಟಿವಿ ಧಾರಾವಾಹಿಯೊಂದರಲ್ಲಿ ಬರುವ “ಅಪು’ ಎಂಬ ಪಾತ್ರಕ್ಕೆ ಹೋಲಿಸಿ ವಿವಾದಕ್ಕೀಡಾಗಿದೆ. 

ಭಾರತ-ಚೀನ ಸ್ನೇಹ ವೃದ್ಧಿ
ಕಳೆದ ವರ್ಷ, ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಜಿನ್‌ಪಿಂಗ್‌ ನೇತೃತ್ವದಲ್ಲಿ ನಡೆದಿದ್ದ ಉಭಯ ದೇಶಗಳ ನಡುವಿನ “ವುಹಾನ್‌ ಶಾಂತಿ ಒಪ್ಪಂದ’ದ ತರುವಾಯ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಇಬ್ಬರೂ ನಾಯಕರು ತಿಳಿಸಿದ್ದಾರೆ. ಜತೆಗೆ ಒಪ್ಪಂದದ ಅಂಶಗಳ ಜಾರಿಯನ್ನು ಉಭಯ ರಾಷ್ಟ್ರಗಳು ಈಗಾಗಲೇ ಎರಡು ಬಾರಿ ಪರಾಮರ್ಶಿಸಿವೆ. ಇಂಥ ನಡೆಗಳು ಎರಡೂ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದಿದ್ದಾರೆ. ಅಂದಹಾಗೆ ಮೋದಿ, ಜಿನ್‌ಪಿಂಗ್‌ ಪರಸ್ಪರ ಭೇಟಿಯಾಗುತ್ತಿರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ.

ಏನಿವು 9 ಅಂಶ?
1ಆರ್ಥಿಕ ಅಪರಾಧಿಗಳನ್ನು ಪತ್ತೆ ಹಚ್ಚಲು, ಮೂಲ ದೇಶಗಳಿಗೆ ಹಸ್ತಾಂತರಿಸಲು ಜಿ-20 ದೇಶಗಳ ನಡುವೆ ಒಂದು ಶಿಸ್ತುಬದ್ಧ ಸಿದ್ಧ ವ್ಯವಸ್ಥೆ ಜಾರಿಯಾಗಬೇಕು.
2    ಇನ್ನೊಂದು ದೇಶದ ಅಪರಾಧಿಗಳಿಗೆ ತಮ್ಮ ದೇಶದೊಳಕ್ಕೆ ಪ್ರವೇಶ, ಆಶ್ರಯ ನೀಡುವುದನ್ನು ಸದಸ್ಯ ರಾಷ್ಟ್ರಗಳು ನಿಲ್ಲಿಸಬೇಕು.
3    ಆರ್ಥಿಕ ಅಪರಾಧಿಗಳ ವಿರುದ್ಧ ಕೈಗೊಳ್ಳುವ ಕಾನೂನು ಕ್ರಮಗಳಿಗೆ ಸಹಕಾರ ನೀಡಬೇಕು.
4    ವಿಶ್ವಸಂಸ್ಥೆಯ ಭ್ರಷ್ಟಾಚಾರ ನಿಗ್ರಹ ಸಮ್ಮೇಳನ (ಯುಎನ್‌ಸಿಎಸಿ), ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಯೋಜಿತ ಅಪರಾಧಗಳ ನಿಗ್ರಹ ಸಮ್ಮೇಳನ (ಯುಎನ್‌ಒಟಿಸಿ)ಗಳಲ್ಲಿ ರೂಪಿಸಿರುವ ಕಾರ್ಯಸೂಚಿಗಳು ಸಂಪೂರ್ಣವಾಗಿ, ಕರಾರುವಾಕ್ಕಾಗಿ ಜಾರಿಗೊಳ್ಳಬೇಕು.
5    ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆರ್ಥಿಕ ಅವ್ಯವಹಾರಗಳ ನಿಗ್ರಹ ದಳ(ಎಫ್ಎಟಿಎಫ್) ವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.
6    ಆರ್ಥಿಕ ಅಪರಾಧಿಗಳಿಗೆ ಸರಿಯಾದ ವ್ಯಾಖ್ಯಾನವನ್ನು ಎಫ್ಎಟಿಎಫ್ ನೀಡಬೇಕು.
7    ಆರ್ಥಿಕ ಅಪರಾಧಿಗಳು ಅಡಗಿರುವ ತಾಣಗಳನ್ನು ಪತ್ತೆಹಚ್ಚಲು, ಅವರನ್ನು ಅವರ ಮೂಲ ರಾಷ್ಟ್ರಗಳಿಗೆ ಹಸ್ತಾಂತರಿಸಲು ಹಾಗೂ ಕಾನೂನು ವ್ಯಾಪ್ತಿಯೊಳಗೆ ವಿಚಾರಣೆಗೊಳಪಡಿಸುವಂಥ ಒಂದು ಹೊಸ ವ್ಯವಸ್ಥೆಯನ್ನು ಎಫ್ಎಟಿಎಫ್ ರೂಪಿಸಬೇಕು.
8    ಅಪರಾಧಿಗಳನ್ನು ಹಿಡಿದು ತರುವ ವಿಚಾರಗಳಲ್ಲಿ ದೇಶವೊಂದು ಪಡೆಯುವ ಅನುಭವಗಳು, ಮಾಹಿತಿ ರೂಪದಲ್ಲಿ ಇತರ ಜಿ-20 ಸದಸ್ಯ ರಾಷ್ಟ್ರಗಳ ನಡುವೆ ಹಂಚಿಕೆಯಾಗಬೇಕು. ಇದಕ್ಕಾಗಿ ಒಂದು ಸಾಮಾನ್ಯ ವೇದಿಕೆ ಸೃಷ್ಟಿಯಾಗಬೇಕು.
9    ಆರ್ಥಿಕ ಅಪರಾಧಿಗಳ ಆಸ್ತಿ, ವ್ಯವಹಾರಗಳನ್ನು ಪತ್ತೆ ಹಚ್ಚಿ ಮೂಲ ರಾಷ್ಟ್ರಕ್ಕೆ ನೀಡುವಲ್ಲಿ ದೊಡ್ಡ ಮಟ್ಟದ ಸಹಾಯ ನೀಡಬೇಕು.

ಟಾಪ್ ನ್ಯೂಸ್

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದ ದುಷ್ಕರ್ಮಿಗಳು

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದಿದ್ದ ದುಷ್ಕರ್ಮಿ

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

RAILWAY

ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

captain

ಅಮರೀಂದರ್ ಸಿಂಗ್ ಬಿಜೆಪಿಯೊಂದಿಗೆ ಸೇರಿ ಕಾಗೆ ತಿನ್ನಲಿ : ಕಾಂಗ್ರೆಸ್ ಆಕ್ರೋಶ

ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದ ದುಷ್ಕರ್ಮಿಗಳು

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದಿದ್ದ ದುಷ್ಕರ್ಮಿ

25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.