101 ವರ್ಷದ ವ್ಯಕ್ತಿಯೊಬ್ಬನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜರ್ಮನಿ ಕೋರ್ಟ್
Team Udayavani, Jun 29, 2022, 7:05 AM IST
ಬರ್ಲಿನ್: ಯೆಹೂದಿಗಳ ನಾಶಕ್ಕೆ ಪಣ ತೊಟ್ಟಿದ್ದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನ ರಕ್ತದಾಹಕ್ಕೆ ಮರುಳಾಗಿ, ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ 3 ಸಾವಿರಕ್ಕೂ ಹೆಚ್ಚು ಯೆಹೂದಿಗಳ ಮಾರಣಹೋಮಕ್ಕೆ ಕಾರಣವಾಗಿದ್ದ 101 ವರ್ಷದ ವ್ಯಕ್ತಿಯೊಬ್ಬನಿಗೆ ಜರ್ಮನಿಯ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವ್ಯಕ್ತಿಯ ವಿವರಗಳನ್ನು ಬಹಿರಂಗಗೊಳಿಸಲಾಗಿಲ್ಲ. ಈ ವ್ಯಕ್ತಿ, 1942ರಿಂದ 1945ರ ಅವಧಿಯಲ್ಲಿ ಉತ್ತರ ಬರ್ಲಿನ್‌ನಲ್ಲಿದ್ದ ಸ್ಯಾಚ್‌ಸೆನ್‌ಹುಸೇನ್ ಬಂಧನ ಗೃಹಗಳಲ್ಲಿ ಬಂಧಿಯಾಗಿದ್ದ 3,518 ವ್ಯಕ್ತಿಗಳನ್ನು ಕೊಂದಿದ್ದ ಎಂಬ ಆರೋಪ ಆತನ ಮೇಲಿತ್ತು. ಆದರೆ, ಆತ ತಾನು 1942-43ರಲ್ಲಿ ಈಶಾನ್ಯ ಜರ್ಮನಿಯ ಪೇಸ್‌ಪಾಕ್ ನಗರದ ಹೊರವಲಯದ ಹೊಲಗಳಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದುದಾಗಿ ಹೇಳಿದ್ದ.
ಇದನ್ನೂ ಓದಿ:ತೀಸ್ತಾ ಸೆಟಲ್ವಾಡ್ ಪದ್ಮಶ್ರೀ ಹಿಂಪಡೆಯಬೇಕು: ನರೋತ್ತಮ್ ಮಿಶ್ರಾ
ಆದರೆ, ತನಿಖೆಯಲ್ಲಿ ಈತ ಸ್ಯಾಚ್‌ಸೆನ್‌ಹ್ಯುಸೆನ್ ಬಂಧನ ಗೃಹದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಬಗ್ಗೆ ದಾಖಲೆಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ನೆಯುರುಪ್ಪಿನ್ ಪ್ರಾಂತೀಯ ನ್ಯಾಯಲಯದ ಈತನಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟ್ವಿಟರ್ ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್ ಮಸ್ಕ್
ಅಫ್ಘಾನ್ ನಲ್ಲಿ ತೆಹ್ರೀಕ್-ಇ-ತಾಲಿಬಾನ್ ಉನ್ನತ ಕಮಾಂಡರ್ ಸೇರಿ ಮೂವರ ಹತ್ಯೆ
ಅಕ್ಷತಾ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ: ರಿಷಿ ಸುನಕ್
ತೈವಾನ್-ಚೀನ ಶಕ್ತಿ ಪ್ರದರ್ಶನ; ಜಲಸಂಧಿಯಲ್ಲಿ ನೌಕಾಪಡೆಗಳ ಗಸ್ತು
ಇಸ್ರೇಲ್ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್ ಹತ್ಯೆ