ಮೃತ ಮಹಿಳೆಯ ಗರ್ಭಾಶಯ ಕಸಿ ಮಾಡಿ ಮಗುವಿಗೆ ಜನ್ಮ

Team Udayavani, Jul 16, 2019, 5:24 AM IST

ಕ್ಲೀವ್‌ಲ್ಯಾಂಡ್‌: ವೈದ್ಯಕೀಯ ಲೋಕದ ಮಹತ್ವದ ಸಾಧನೆಯೊಂದರಲ್ಲಿ ಅಮೆರಿಕದ ಕ್ಲೀವ್‌ಲ್ಯಾಂಡ್‌ನ‌ಲ್ಲಿ ಮೃತ ಮಹಿಳೆಯಿಂದ ತೆಗೆದು ಕಸಿ ಮಾಡಿದ ಗರ್ಭಕೋಶದಿಂದ ಮತ್ತೂಬ್ಬ ಮಹಿಳೆ ಯಶಸ್ವಿಯಾಗಿ ತಾಯಿಯಾಗಿದ್ದಾಳೆ. ಈ ಮಹಿಳೆಗೆ ಮೃತ ಮಹಿಳೆ ಯಿಂದ ಗರ್ಭ ಕೋಶವನ್ನು ತೆಗೆದು ಕಸಿ ಮಾಡಲಾಗಿತ್ತು. ಅಮೆರಿಕದ ವೈದ್ಯ ಕೀಯ ಇತಿಹಾಸ ದಲ್ಲೇ ಇದು ಪ್ರಥಮ ಕ್ರಮವಾಗಿದ್ದು, ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಕ್ಲೀವ್‌ಲ್ಯಾಂಡ್‌ ಕ್ಲಿನಿಕ್‌ ಈ ಒಟ್ಟು ಪ್ರಕ್ರಿಯೆಯನ್ನು ನಡೆಸಿ, ಯಶಸ್ವಿಯಾಗಿದೆ. 2017ರಲ್ಲಿ ಗರ್ಭಕೋಶ ಕಸಿ ನಡೆಸಿ, ಕಳೆದ ವರ್ಷ ಐವಿಎಫ್ ಮೂಲಕ ಗರ್ಭದಾನ ಮಾಡಲಾಗಿತ್ತು.

ಈ ಪ್ರಕ್ರಿಯೆ ಇನ್ನೂ ಪ್ರಯೋಗದ ಹಂತದಲ್ಲಿದೆ. ಗರ್ಭಾಶಯ ಕಸಿ ಮಾಡುವ ಬಗ್ಗೆ ವ್ಯಾಪಕ ಸಂಶೋಧನೆ ನಡೆಯುತ್ತಿದೆ. ಒಟ್ಟು ಐದು ಮಹಿಳೆಯರಿಗೆ ಗರ್ಭಕೋಶ ಕಸಿ ಮಾಡಲಾಗಿತ್ತು. ಈ ಪೈಕಿ ಮೂವರು ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಆರೋಗ್ಯವಂತ ಮಹಿಳೆಯ ಗರ್ಭಕೋಶವನ್ನು ತೆಗೆದು ಕಸಿ ಮಾಡುವಲ್ಲಿ ವೈದ್ಯಕೀಯ ಜಗತ್ತು ಯಶಸ್ಸು ಕಂಡಿದೆ. ಆದರೆ ಇದೇ ಮೊದಲ ಬಾರಿಗೆ ಮೃತ ಮಹಿಳೆಯಿಂದ ಗರ್ಭಕೋಶವನ್ನು ತೆಗೆದು ಕಸಿ ಮಾಡಿ ಯಶಸ್ಸು ಸಾಧಿಸಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ