ಬ್ಲಾಕ್ ಆಗಿರುವ ಖಾತೆ ಪುನಸ್ಥಾಪಿಸಲು ಗೂಗಲ್ ನಕಾರ
ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಕಂಟೆಂಟ್: ಸರ್ಚ್ ಎಂಜಿನ್ ವಾದ
Team Udayavani, Aug 24, 2022, 6:40 AM IST
ವಾಷಿಂಗ್ಟನ್: ವೈದ್ಯಕೀಯ ಕಾರಣಗಳಿಗಾಗಿ ತೆಗೆದಿದ್ದ ತನ್ನ ಮಗನ ತೊಡೆಸಂದುವಿನ ಚಿತ್ರವನ್ನು ತಪ್ಪಾಗಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯ ಖಾತೆಯನ್ನು ಮರುಸ್ಥಾಪಿಸಲು ಗೂಗಲ್ ನಿರಾಕರಿಸಿದೆ. ಅದು ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್ ಆಗಿರುವುದರಿಂದ, ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಅವರ ಖಾತೆ ಬ್ಲಾಕ್ ಆಗಿರುತ್ತದೆ ಎಂದೂ ಸಂಸ್ಥೆ ಹೇಳಿದೆ.
ಮಗುವಿನ ತೊಡೆಸಂದುವಿನಲ್ಲಿ ಉರಿ ಶುರುವಾಗಿ ಅದು ಕೆಂಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ, ಮಗುವಿನ ತಂದೆ ಮಾರ್ಕ್ ಅದರ ಫೋಟೋವನ್ನು ಕ್ಲಿಕ್ಕಿಸಿ, ವೈದ್ಯರಿಗೆ ಕಳುಹಿಸಿದ್ದರು. ಆ ಫೋಟೋಗಳು ತಪ್ಪಾಗಿ ಕ್ಲೌಡ್ಗೆ ಅಪ್ಲೋಡ್ ಆಗಿದ್ದು, ಗೂಗಲ್ನ ವ್ಯವಸ್ಥೆಯು ಅದನ್ನು “ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್’ ಎಂದು ಗುರುತಿಸಿತ್ತು.
2 ದಿನಗಳ ಬಳಿಕ ಮಾರ್ಕ್ ಅವರ ಜಿಮೇಲ್, ಗೂಗಲ್ ಫೈ(ಫೋನ್ ಸೇವೆ ನೀಡುವ ವ್ಯವಸ್ಥೆ) ಮತ್ತು ಇತರೆ ಗೂಗಲ್ ಖಾತೆಗಳು ಬ್ಲಾಕ್ ಆದವು. ಜತೆಗೆ, ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು ಕೂಡ ಮಾರ್ಕ್ ವಿರುದ್ಧ ತನಿಖೆ ಆರಂಭಿಸಿ, ಅವರದ್ದೇನೂ ತಪ್ಪಿಲ್ಲ ಎಂಬುದನ್ನು ಕಂಡುಕೊಂಡರು. ಆದರೆ, ಗೂಗಲ್ ಮಾತ್ರ ತನ್ನ ನಿಯಮಕ್ಕೆ ಬದ್ಧವಾಗಿದ್ದು, ಮಾರ್ಕ್ ಅವರ ಖಾತೆಗಳನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿದೆ. ಗೂಗಲ್ನ ಈ ನಡೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ