ಸ್ಪರ್ಧಾತ್ಮಕ ರಾಷ್ಟ್ರವಾಗಲಿದೆ ಭಾರತ: ಅಮಿತಾಭ್‌ ಕಾಂತ್‌

Team Udayavani, Dec 14, 2019, 7:45 PM IST

ವಾಷಿಂಗ್ಟನ್‌: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಐತಿಹಾಸಿಕ ಹಾಗೂ ಸರಣಿ ಸುಧಾರಣಾ ಕ್ರಮಗಳು ದೀರ್ಘ‌ಕಾಲದಲ್ಲಿ ಭಾರತವನ್ನು ಸ್ಪರ್ಧಾತ್ಮಕ ಹಾಗೂ ಉತ್ಪಾದಕ ದಕ್ಷ ರಾಷ್ಟ್ರವನ್ನಾಗಿಸಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ. ಅಮೆರಿಕದ ಶೈಕ್ಷಣಿಕ ತಜ್ಞರು, ಸ್ಟಾರ್ಟಪ್‌ಗ್ಳು, ಕಾರ್ಪೊರೇಟ್‌ ಗಣ್ಯರು ಹಾಗೂ ಸರ್ಕಾರದ ಅಧಿಕಾರಿಗಳೊಂದಿಗಿನ ಸಭೆಗೆಂದು ಬೋಸ್ಟನ್‌ಗೆ ಆಗಮಿಸಿರುವ ಅಮಿತಾಭ್‌ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ್ದಾರೆ. ಭಾರತದ ಪ್ರಗತಿಯ ಕಥೆ ಈಗಷ್ಟೇ ಆರಂಭವಾಗಿದೆ. ಜಿಎಸ್‌ಟಿ, ದಿವಾಳಿ ಕಾಯ್ದೆ, ರೇರಾದಂಥ ರಿಯಲ್‌ ಎಸ್ಟೇಟ್‌ ಸುಧಾರಣಾ ಕ್ರಮಗಳು ಭಾರತದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದೂ ಅವರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ