ಗ್ರೀನ್ ಕಾರ್ಡ್ ಇನ್ನು ಸುಲಭ?: ಹೊಸ ಮಸೂದೆ ಅಂಗೀಕಾರಗೊಂಡರೆ ಇದು ಸಾಧ್ಯ
Team Udayavani, Sep 14, 2021, 6:30 AM IST
ವಾಷಿಂಗ್ಟನ್: ಭಾರತೀಯರೂ ಸೇರಿ ದಂತೆ ಅಮೆರಿಕದ ಗ್ರೀನ್ಕಾರ್ಡ್ಗಾಗಿ ಕಾಯುತ್ತಿರುವ ಲಕ್ಷಾಂತರ ಮಂದಿಗೆ ನೆಮ್ಮದಿಯ ಸುದ್ದಿಯೊಂದನ್ನು ಅಲ್ಲಿನ ಸರಕಾರ ನೀಡಿದೆ. ಇದಕ್ಕೆ ಸಂಬಂಧಿಸಿದ ಮಸೂದೆವು ಅಂಗೀಕಾರಗೊಂಡು, ಕಾನೂನಾಗಿ ರೂಪುಗೊಂಡರೆ, ಗ್ರೀನ್ಕಾರ್ಡ್ಗಾಗಿ ಕಾಯುತ್ತಿರುವವರು ಪೂರಕ ಶುಲ್ಕವನ್ನು ಪಾವತಿಸಿ, ಕಾನೂ ನಾತ್ಮಕ ಕಾಯಂ ವಾಸದ ಅವಕಾಶ ಪಡೆಯಲಿದ್ದಾರೆ.
ಇದರಿಂದಾಗಿ ಭಾರತದ ಸಾವಿರಾರು ಐಟಿ ವೃತ್ತಿಪರರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ಗ್ರೀನ್ ಕಾರ್ಡ್ ಎಂದರೆ ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಅವಕಾಶ ಕಲ್ಪಿಸಿ ವಿತರಿಸಲಾಗುವ ಕಾರ್ಡ್. ಈಗ ಸರಕಾರ ಪ್ರಸ್ತಾವಿಸಿರುವ ಮಸೂದೆಯು ಕಾನೂನಾಗಿ ಮಾರ್ಪಾ ಡಾ ಗುವ ಮುನ್ನ ನ್ಯಾಯಾಂಗ ಸಮಿತಿ, ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಮತ್ತು ಸೆನೆಟ್ನಲ್ಲಿ ಅಂಗೀಕಾರಗೊಂಡು, ಅಧ್ಯಕ್ಷರ ಅಂಕಿತ ಪಡೆಯಬೇಕಾಗುತ್ತದೆ.
ಇದು ಕಾನೂನಾಗಿ ರೂಪುಗೊಂಡ ಬಳಿಕ ಅಮೆರಿಕದಲ್ಲಿರುವ ವಲಸಿಗರು 5 ಸಾವಿರ ಯುಎಸ್ ಡಾಲರ್(3.68 ಲಕ್ಷ ರೂ.) ಅನ್ನು ಪೂರಕ ಶುಲ್ಕವಾಗಿ ಪಾವ ತಿಸಿ, ಗ್ರೀನ್ ಕಾರ್ಡ್ ಪಡೆಯಬಹು ದಾಗಿದೆ. ವಲಸಿಗ ಹೂಡಿಕೆದಾರರಿಗೆ (ಇಬಿ-5 ಕೆಟಗರಿಯಲ್ಲಿ ಬರುವವರು) ಈ ಮೊತ್ತ 50 ಸಾವಿರ ಡಾಲರ್ (36.86 ಲಕ್ಷ ರೂ.) ಆಗಿರುತ್ತದೆ.
ಈ ಅವಕಾಶವು 2031ರಲ್ಲಿ ಮುಗಿಯ ಲಿದ್ದು, ಅದರೊಳ ಗಾಗಿ ಹಣ ಪಾವತಿಸಿ ಅಮೆರಿಕದ ಕಾಯಂ ವಾಸಿಗಳಾಗಬ ಹುದು. ಇನ್ನು, ಅಮೆರಿಕದ ನಾಗರಿಕ ನಿಂದ ಪ್ರಾಯೋಜ ಕತ್ವ ಪಡೆದು ಬಂದಿ ರುವ ಕುಟುಂಬ ಆಧರಿತ ವಲಸಿಗ 2500 ಡಾಲರ್(1.84 ಲಕ್ಷ ರೂ.) ಪಾವತಿಸಿ ಗ್ರೀನ್ ಕಾರ್ಡ್ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ