ಗ್ರೀನ್ ಕಾರ್ಡ್ ನಿರ್ಬಂಧ ತೆರವು
Team Udayavani, Feb 27, 2021, 7:15 AM IST
ವಾಷಿಂಗ್ಟನ್: ಅಮೆರಿಕದ ಪೌರತ್ವ ಪಡೆಯಲು ಇಚ್ಛಿಸುವ ಭಾರತೀಯ ಐಟಿ ಉದ್ಯೋಗಿಗಳಿಗೆ ಅಧ್ಯಕ್ಷ ಜೋ ಬೈಡೆನ್ ಖುಷಿಯ ವಿಚಾರವೊಂದನ್ನು ಘೋಷಿಸಿದ್ದಾರೆ.
ಪೌರತ್ವ (ಗ್ರೀನ್ ಕಾರ್ಡ್) ಅರ್ಜಿಗಳಿಗೆ ನಿರ್ಬಂಧ ಹೇರಿದ್ದ ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶವನ್ನು ಈಗಿನ ಅಧ್ಯಕ್ಷ ಜೊ ಬೈಡನ್ ಹಿಂಪಡೆದಿದ್ದಾರೆ. ಇದರ ಜತೆಯಲ್ಲೇ, ಎಚ್-1ಬಿ, ಎಚ್-4, ಎಚ್-2ಬಿ, ಎಲ್-1 ಹಾಗೂ ಜೆ ಮಾದರಿಯ ವೀಸಾಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನೂ ಹಿಂಪಡೆಯಲಾಗಿದೆ.
ಈ ಕುರಿತು ಮಾತನಾಡಿದ ಅವರು, ಪೌರತ್ವ ಹಾಗೂ ವೀಸಾಗಳ ಮೇಲೆ ನಾವು ನಿರ್ಬಂಧ ಹಾಕುವುದರಿಂದ ಅಮೆರಿಕದ ವಿಕಾಸಕ್ಕೆ ಮಾರಕವಾಗುತ್ತದೆ. ನಮ್ಮ ದೇಶದಲ್ಲಿ ನೆಲೆಸಿರುವವರಿಗೆ ಪೌರತ್ವ ಹಕ್ಕನ್ನು ವಂಚಿಸಿದ ಹಾಗಾಗುತ್ತದಲ್ಲದೆ ಅವರ ಕುಟುಂಬಸ್ಥರನ್ನು ಅವರಿಂದ ದೂರ ಮಾಡಿದಂತಾಗುತ್ತದೆ. ಇದನ್ನು ಅವಲೋಕಿಸಿಯೇ ಹಿಂದಿನ ಆದೇಶಗಳನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಈ ಹಿಂದೆ ಟ್ರಂಪ್ ಅವರು ಹೊಸದಾಗಿ ಅಮೆರಿಕದಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡುವ ಸೌಲಭ್ಯವನ್ನು ಹಿಂಪಡೆದಿದ್ದರು. ಅಲ್ಲದೆ ತಾತ್ಕಾಲಿಕ ಉದ್ಯೋಗ ವೀಸಾದಡಿ ಅಮೆರಿಕಕ್ಕೆ ಆಗಮಿಸುವ ವಿದೇಶಿಗರ ಮೇಲೆ ನಿರ್ಬಂಧ ಹೇರಲು, ಎಚ್-1ಬಿ, ಎಚ್-4, ಎಚ್-2ಬಿ, ಎಲ್-1 ಹಾಗೂ ಜೆ ಮಾದರಿಯ ವೀಸಾಗಳಿಗೆ ನಿರ್ಬಂಧ ಹೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು