ಇಂಟರ್ನೆಟ್ ಸೆನ್ಸೇಷನ್‌ಆಗಿದ್ದ ಬೆಕ್ಕು ಇನ್ನಿಲ್ಲ

Team Udayavani, May 18, 2019, 6:00 AM IST

ವಾಷಿಂಗ್ಟನ್‌: ಇಂಟರ್‌ನೆಟ್‌ನಲ್ಲಿ ಗ್ರಂಪಿ ಕ್ಯಾಟ್ ಎಂದೇ ಜನಪ್ರಿಯವಾಗಿದ್ದ ಬೆಕ್ಕು ಸಾವನ್ನಪ್ಪಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬೆಕ್ಕು 24 ಲಕ್ಷ ಫಾಲೋವರ್‌ಗಳನ್ನು ಹೊಂದಿತ್ತು. ಅಷ್ಟೇ ಅಲ್ಲ, ಒಮ್ಮೆ ಟಿವಿಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಾಗೂ ಸಿನಿಮಾದಲ್ಲಿ ಕಾಣಿಸಿ ಕೊಂಡಿತ್ತು. 2012ರಲ್ಲಿ ಒಮ್ಮೆ ಈ ಬೆಕ್ಕಿನ ವಿಶಿಷ್ಟ ಭಂಗಿಯ ಫೋಟೋ ವೈರಲ್ ಆದಾಗಿನಿಂದ ಇದು ಸೆಲೆಬ್ರಿಟಿ ಸ್ಟೇಟಸ್‌ ಪಡೆದಿತ್ತು. ಗ್ರಂಪಿ ಕ್ಯಾಟ್ ಹೆಸರಿನಲ್ಲಿ ಒಂದು ದೊಡ್ಡ ವಹಿವಾಟೇ ನಡೆಯುತ್ತಿದೆ. ಈ ಬೆಕ್ಕಿನ ಮುಖವನ್ನೇ ಹೋಲುವ ಕಾರ್ಟೂನ್‌ ಕ್ಯಾರೆಕ್ಟರ್‌ಗಳು, ಸ್ಟಿಕ್ಕರ್‌ಗಳೂ ಜನಪ್ರಿಯವಾಗಿವೆ. ಈ ಬೆಕ್ಕಿನ ಮಾಲೀಕರು ಸ್ಥಾಪಿಸಿದ ಗ್ರಂಪಿ ಕ್ಯಾಟ್ ಸಂಸ್ಥೆಯ ಮೌಲ್ಯ 2014ರಲ್ಲೇ 680 ಕೋಟಿ ರೂ. ಆಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ