ಜೆಯುಡಿ ಮುಖ್ಯಸ್ಥ ಹಾಫೀಜ್‌ ಸಯೀದ್‌ ನ ಭಾವ ಅಬ್ದುರ್‌ ರೆಹಮಾನ್‌ ಮಕ್ಕಿ ಅರೆಸ್ಟ್‌

Team Udayavani, May 15, 2019, 5:57 PM IST

ಲಾಹೋರ್‌ : ಪಾಕಿಸ್ಥಾನ ಸರಕಾರವನ್ನು ಟೀಕಿಸಿ, ದ್ವೇಷ ಕಾರುವ ಭಾಷಣ ಮಾಡಿದ್ದಕ್ಕಾಗಿ ನಿಷೇಧಿತ ಜಮಾತ್‌ ಉದ್‌ ದಾವಾ ಉನ್ನತ ನಾಯಕ ಮತ್ತು ಮುಂಬಯಿ ಉಗ್ರ ದಾಳಿಯ ಸೂತ್ರಧಾರ ಹಾಫೀಜ್‌ ಸಯೀದ್‌ ನ ಭಾವ ಹಾಫೀಜ್‌ ಅಬ್ದುರ್‌ ರೆಹಮಾನ್‌ ಮಕ್ಕಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಜೆಯುಡಿ ಇದರ ರಾಜಕೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಮತ್ತು ಇದರ ದಾನ ಸಂಸ್ಥೆಯಾಗಿರುವ ಫ‌ಲಾಹ್‌ ಎ ಇನ್‌ಸಾನಿಯತ್‌ ಪ್ರತಿಷ್ಠಾನದ ಪ್ರಭಾರಿಯಾಗಿರುವ ಮಕ್ಕಿಯನ್ನು ಪೊಲೀಸರು ನಿಷೇಧಿತ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆ ವೇಳೆ ಬಂಧಿಸಿದರು.

ಲಾಹೋರ್‌ನಿಂದ 80 ಕಿ.ಮೀ. ದೂರದ ಗುಜರನ್‌ವಾಲಾ ಪಟ್ಟಣದಲ್ಲಿ ಮಾಡಿದ್ದ ದ್ವೇಷ ಕಾರುವ ಭಾಷಣಕ್ಕಾಗಿ ಮಕ್ಕಿಯ ಬಂಧನವಾಗಿರುವುದನ್ನು ಪಂಜಾಬ್‌ ಪೊಲೀಸ್‌ ವಕ್ತಾರ ನಬೀಲಾ ಘಜನ್‌ಫ‌ರ್‌ ದೃಢೀಕರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಅಗರ್ತಲಾ: ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಪಶ್ಚಿಮ ರಾಜ್ಯಗಳಲ್ಲಿ ನೆಲೆಯೂರಲು ಯತ್ನಿಸಿತ್ತು ಎಂದು ಗೃಹ ಸಚಿವಾಲಯದ...

  • ಲಂಡನ್‌: ಡಿಯಾಜಿಯೋ ಕಂಪೆನಿ ಜೊತೆಗಿನ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಇಂಗ್ಲೆಂಡ್‌ ಹೈಕೋರ್ಟ್‌ ತೀರ್ಪು ನೀಡಿದ ಪರಿಣಾಮ 90 ಕೋಟಿ ರೂ. ನಷ್ಟವನ್ನು...

  • ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ...

  • ವಾಷಿಂಗ್ಟನ್‌: ಮುಂದಿನ ತಿಂಗಳು ಜಪಾನ್‌ನಲ್ಲಿ ಜಿ-20 ಶೃಂಗ ನಡೆಯಲಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಭೇಟಿ ನಡೆಯಲಿದೆ. ಇಲ್ಲಿ...

  • ಕೈರೋ: ಇರಾಕ್‌ ಹಾಗೂ ಸಿರಿಯಾದಲ್ಲಿ ಅಮೆರಿಕದ ಸೇನಾ ದಾಳಿಯಿಂದಾಗಿ ನೆಲೆ ಕಳೆದುಕೊಂಡಿರುವ ಐಸಿಸ್‌ ಉಗ್ರರು ಈಗ ಗೆರಿಲ್ಲಾ ಯುದ್ಧ ತಂತ್ರ ಗಳನ್ನು ಅಳವಡಿಸಿ ಕೊಳ್ಳುವ...

ಹೊಸ ಸೇರ್ಪಡೆ