Udayavni Special

ಪಾಕ್‌ ವಿರುದ್ಧ ಭಾರೀ ಆಕ್ರೋಶ


Team Udayavani, Nov 24, 2017, 6:20 AM IST

Pakistan,-Hafiz-Saeed.jpg

ವಾಷಿಂಗ್ಟನ್‌: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್‌ ಆದೇಶಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಾಕ್‌ ಸರಕಾರದ ನಿರ್ಧಾರದ ಕುರಿತು ಭಾರತ ಮಾತ್ರವಲ್ಲದೇ, ಅಮೆರಿಕದ ತಜ್ಞರೂ ಕಿಡಿಕಾರಿದ್ದಾರೆ.

ಸಯೀದ್‌ ಬಂಧಮುಕ್ತ ಸುದ್ದಿಗೆ ಗುರುವಾರ ಖಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, “ಬಹಿಷ್ಕಾರಕ್ಕೊಳಗ ಗಿರುವ ಭಯೋತ್ಪಾದಕನನ್ನು ಮುಖ್ಯ ವಾಹಿನಿಗೆ ತರುವಂಥ ಪಾಕಿಸ್ಥಾನದ ಯತ್ನವು, ಉಗ್ರರಿಗೆ ಬೆಂಬಲ ನೀಡುವು ದನ್ನು ಮುಂದುವರಿಸಿರುವುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ವಿಧ್ವಂಸಕ ಕೃತ್ಯ ಎಸಗಿದವರನ್ನು ಶಿಕ್ಷೆಗೊಳಪಡಿಸು ವಲ್ಲಿ ಪಾಕಿಸ್ಥಾನದ ಗಂಭೀರತೆಯ ಕೊರತೆ  ಯನ್ನು ಇದು ತೋರಿಸುತ್ತಿದೆ’ ಎಂದು ಹೇಳಿದೆ. ಅಲ್ಲದೆ, ಭಯೋತ್ಪಾದಕರಿಗೆ ರಕ್ಷಣೆ ನೀಡುವ ಪಾಕ್‌ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದು ಕೂಡ ಸ್ಪಷ್ಟವಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.  

ಮಿತ್ರರಾಷ್ಟ್ರ ಸ್ಥಾನಮಾನ ರದ್ದುಗೊಳಿಸಿ: ಇದೇ ವೇಳೆ, ಸಯೀದ್‌ ಬಿಡುಗಡೆ ಕುರಿತು ಅಮೆರಿಕದಿಂದಲೂ ಆಕ್ರೋಶದ ಧ್ವನಿ ವ್ಯಕ್ತವಾಗಿದೆ. ಉಗ್ರರಿಗೆ ನೆರಳಾಗುವ ಪಾಕಿಸ್ಥಾನದ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ, ಮಾತನಾಡಿರುವ ಅಮೆರಿಕದ ಪ್ರಮುಖ ಉಗ್ರ ನಿಗ್ರಹ ತಜ್ಞರು, “ಪಾಕಿಸ್ಥಾನಕ್ಕೆ ನೀಡಿರುವ ನ್ಯಾಟೋಯೇತರ ಮಿತ್ರರಾಷ್ಟ್ರ ಸ್ಥಾನಮಾನವನ್ನು ಕೂಡಲೇ ರದ್ದುಮಾಡಬೇಕು’ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. 

26/11ರ ದಾಳಿ ನಡೆದು 9 ವರ್ಷಗಳಾಗಿದ್ದು, ಇನ್ನೂ ಅದರ ರೂವಾರಿಗೆ ಶಿಕ್ಷೆಯಾಗಿಲ್ಲ. ಒಂದು ಪದದಲ್ಲಿ ಹೇಳುವುದಾದರೆ, ಉಗ್ರ ಸಯೀದ್‌ನ ಬಿಡುಗಡೆಯು “ಘಾತಕಕೃತ್ಯ’ವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆತ ದೊಡ್ಡ ದೊಡ್ಡ ರ್ಯಾಲಿಗಳ ನೇತೃತ್ವ ವಹಿಸಿ ಮಾತನಾಡುವ ಸುದ್ದಿಯನ್ನೂ ನಾವು ಓದಬಹುದೋ ಏನೋ? ಹೀಗಾಗಿ ಪಾಕಿಸ್ಥಾನಕ್ಕೆ ನೀಡಿರುವ ನ್ಯಾಟೋಯೇತರ ಮಿತ್ರ ಸ್ಥಾನಮಾನವನ್ನು ರದ್ದು ಮಾಡಲು ಇದು ಸೂಕ್ತ ಸಮಯ ಎಂದು ದಕ್ಷಿಣ ಏಷ್ಯಾದ ಭದ್ರತೆ, ಉಗ್ರ ನಿಗ್ರಹದ ತಜ್ಞ ಬ್ರೂಸ್‌ ರೀಡೆಲ್‌ ಹೇಳಿದ್ದಾರೆ. ಇತರೆ ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನವು ದುರ್ಬಲ ವಾದ ಮಂಡಿಸಿ, ಸೂಕ್ತ ಸಾಕ್ಷ್ಯಗಳನ್ನು ನೀಡದೇ ಇದ್ದ ಕಾರಣ ಬುಧವಾರವಷ್ಟೇ ಹಫೀಜ್‌ನ ಬಿಡುಗಡೆಗೆ ಕೋರ್ಟ್‌ ಆದೇಶಿಸಿತ್ತು.

ಜಾಧವ್‌ ಪತ್ನಿ, ತಾಯಿ ಭದ್ರತೆ ಖಚಿತಪಡಿಸಿ: ಪಾಕ್‌ಗೆ ಭಾರತ
ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಭೇಟಿಯಾಗಲು ತೆರಳುತ್ತಿರುವ ಅವರ ಪತ್ನಿ ಹಾಗೂ ತಾಯಿಗೆ ಸೂಕ್ತ ಭದ್ರತೆ ಒದಗಿಸುವ ಕುರಿತು ಖಚಿತಪಡಿಸುವಂತೆ ಪಾಕಿಸ್ಥಾನಕ್ಕೆ ಭಾರತ ಕೋರಿಕೆ ಸಲ್ಲಿಸಿದೆ. ಜಾಧವ್‌ಗೆ ಅವರ ಪತ್ನಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸುವುದಾಗಿ ಪಾಕ್‌ ಸರಕಾರ ಹೇಳಿದೆ. ಅಲ್ಲಿಗೆ ತೆರಳುತ್ತಿರುವ ಜಾಧವ್‌ ಪತ್ನಿಯ ಸುರಕ್ಷತೆಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರವನ್ನು ಕೇಳಿಕೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಜತೆಗೆ, ಪಾಕಿ ಸ್ತಾನವು ಜಾಧವ್‌ ಕುಟುಂಬ ಸದಸ್ಯರಿಗೆ ಕಿರುಕುಳ ಕೊಡುವುದು, ವಿಚಾರಣೆ ನಡೆಸುವುದಾಗಲೀ ಮಾಡಬಾ ರದು ಎಂದೂ ಸೂಚಿಸಲಾಗಿದೆ. ಏತನ್ಮಧ್ಯೆ, ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಪ್ರಶ್ನಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ಪಾಕ್‌ ಸುಳಿವು ನೀಡಿದೆ.

ಕಣಿವೆ ರಾಜ್ಯದಲ್ಲಿ ವಕೀಲರ ಪ್ರತಿಭಟನೆ
ಉಗ್ರ ಹಫೀಜ್‌ ಸಯೀದ್‌ ಬಿಡುಗಡೆ ನಿರ್ಧಾರವನ್ನು ಖಂಡಿಸಿ ಗುರುವಾರ ಜಮ್ಮು ಬಾರ್‌ ಅಸೋಸಿಯೇಷನ್‌ನ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಹೈಕೋರ್ಟ್‌ ಸಂಕೀರ್ಣದ ಮುಂದೆ ಸೇರಿದ ವಕೀಲರು, ಉಗ್ರ ಸಯೀದ್‌ ಹಾಗೂ ಪಾಕಿಸ್ಥಾನದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಪಾಕಿಸ್ಥಾನಿ ಧ್ವಜಕ್ಕೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಪಾಕ್‌ನಲ್ಲಿರುವ ಹಫೀಜ್‌ ಸಯೀದ್‌ನ ಉಗ್ರ ಜಾಲದ ಮೇಲೆ ಮತ್ತೂಂದು ಸರ್ಜಿಕಲ್‌ ದಾಳಿಯನ್ನು ನಡೆಸಬೇಕು ಎಂದೂ ವಕೀಲರು ಒತ್ತಾಯಿಸಿದರು.

ಟಾಪ್ ನ್ಯೂಸ್

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

bomb

ಅಫ್ಘಾನಿಸ್ಥಾನದಲ್ಲಿ ಶಿಯಾಗಳನ್ನ ಗುರಿಯಾಗಿರಿಸಿಕೊಂಡು ಮುಂದುವರಿದ ದಾಳಿ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಈದ್‌ ಮಿಲಾದ್‌ ಸರಳ ಆಚರಣೆ: ಜಿಲ್ಲಾಧಿಕಾರಿ ಆದೇಶ

ಈದ್‌ ಮಿಲಾದ್‌ ಸರಳ ಆಚರಣೆ: ಜಿಲ್ಲಾಧಿಕಾರಿ ಆದೇಶ

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

ಉತ್ತಮ ದಾಖಲಾತಿಯ ಶಾಲೆಗೆ ಬೇಕು ಇನ್ನಷ್ಟು ಸೌಕರ್ಯ

ಉತ್ತಮ ದಾಖಲಾತಿಯ ಶಾಲೆಗೆ ಬೇಕು ಇನ್ನಷ್ಟು ಸೌಕರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.