ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಮತ್ತೆ ಸಾವಿನ ಭೀತಿಯಲ್ಲಿ ಹಜಾರಸ್‌!

Team Udayavani, Aug 21, 2021, 1:12 PM IST

ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಮತ್ತೆ ಸಾವಿನ ಭೀತಿಯಲ್ಲಿ ಹಜಾರಸ್‌!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಶುರುವಾಯಿತು ಎಂದರೆ ಸಾಕು, ಅಲ್ಲಿನ ಹೆಣ್ಣು ಮಕ್ಕಳಿಗಿಂತ ಮೊದಲು ಭಯ ಶುರುವಾಗುವುದು ಹಜಾರಸ್‌ ಸಮುದಾಯದ ಜನರಿಗೆ. ಇವರ ವಿಚಾರದಲ್ಲಿ ತಾಲಿಬಾನಿಗಳು, ಹಿಟ್ಲರ್‌ಗಿಂತ ಕ್ರೂರಿಗಳು. ಒಂದು ಕಾಲದಲ್ಲಿ ಇಡೀ ಅಫ್ಘಾನ್‌ನ ಜನಸಂಖ್ಯೆಯ ಶೇ.67ರಷ್ಟಿದ್ದ ಹಜಾರಸ್‌ ಸಮುದಾಯ ಈಗ ತೀರಾ ಶೇ.10ರಿಂದ 12ರಷ್ಟಕ್ಕೆ ಇಳಿಕೆಯಾಗಿದೆ. ಇದಕ್ಕೆ ಕಾರಣ ಸಾಮೂಹಿಕವಾಗಿ ಇವರನ್ನು ತಾಲಿಬಾನಿಗಳು ಕೊಂದು ಹಾಕಿದ್ದಾರೆ. ಈಗ ಇವರ ಆತಂಕ ಇನ್ನಷ್ಟು ಹೆಚ್ಚಾಗಲು ಕಾರಣವೂ ಇದೆ. ಮೊನ್ನೆಯಷ್ಟೇ ಇವರ ನಾಯಕ ಅಬ್ದುಲ್‌ ಅಲಿ ಮಝಾರಿ ಅವರ ಪ್ರತಿಮೆಯನ್ನು ತಾಲಿಬಾನಿಗಳು ಧ್ವಂಸಗೊಳಿಸಿದ್ದಾರೆ.

ಯಾರಿವರು ಹಜಾರಸ್‌ಗಳು

ಇದು ಅಫ್ಘಾನಿಸ್ತಾನದ ಅತ್ಯಂತ ಪ್ರಾಚೀನ ಬುಡಕಟ್ಟು ಸಮುದಾಯ. ಇವರು ತಮ್ಮನ್ನು ಮೊಂಗೊಲ್‌ ಸಾಮ್ರಾಟ ಜಿಂಗೀಸ್‌ ಖಾನ್‌ನ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಇದು ಅತ್ಯಂತ ಸಂಪ್ರದಾಯ ಮತ್ತು ಧಾರ್ಮಿಕ ಸಮುದಾಯ. ಅಫ್ಘಾನಿಸ್ತಾನದಲ್ಲಿ ಇವರು ವಾಸಿಸುತ್ತಿರುವುದು ಗುಡ್ಡಗಾಡು ಪ್ರದೇಶಗಳಲ್ಲಿ. 13ನೇ ಶತಮಾನದಲ್ಲಿ ಮೊಂಗಲ್‌ ಸಾಮ್ರಾಜ್ಯದ ಅಧೀನದಲ್ಲೇ ಇಡೀ ಅಫ್ಘಾನಿಸ್ತಾನ ವಿತ್ತು.19ನೇ ಶತಮಾನದಲ್ಲಿ ಪಶ್ತುನ್‌ ರಾಜಅಹ್ಮದ್‌ ಶಾ ದುರಾನಿ ಅವರ ಆಳ್ವಿಕೆ ಮಾಡುತ್ತಿದ್ದ. ಪಶ್ತುನ್‌ ರಾಜ ಸುನ್ನಿಗೆ ಸೇರಿದನಾಗಿದ್ದು, ಹಜಾರಸ್‌ಗಳು ಶಿಯಾಗೆ ಸೇರಿದವರಾಗಿದ್ದಾರೆ.

ತಾಲಿಬಾನಿಗಳಿಗೇಕೆ ದ್ವೇಷ?

ಹಜಾರಸ್‌ಗಳು ಶಿಯಾ ಮುಸ್ಲಿಮರಾಗಿರುವುದೇ ತಾಲಿಬಾನ್‌ ಉಗ್ರರ ಪ್ರಮುಖ ದ್ವೇಷಕ್ಕೆ ಕಾರಣ. ಅಷ್ಟೇ ಅಲ್ಲ,ಅಫ್ಘಾನ್‌ ನಲ್ಲಿ ಸುನ್ನಿ ಮುಸ್ಲಿಮರೇ ಬಹಳಷ್ಟು ಸಂಖ್ಯೆಯಲ್ಲಿದ್ದು, ಇವರೂ ಶಿಯಾಗೆ ಸೇರಿದವರನ್ನು ವಿರೋಧಿಸುತ್ತಾರೆ. ಜತೆಗೆ ಪರ್ಶಿಯನ್‌ ಲಿಪಿ ಹೊಂದಿರುವ ಹಜಾರಗಿ ಎಂಬ ಭಾಷೆಯನ್ನು ಮಾತನಾಡುವ ಇವರು, ಸಾಮಾನ್ಯವಾಗಿ ದೇಶದ ಉಳಿದವರಿಗಿಂತ ಬೇರೆಯಾಗಿಯೇ ಗುರುತಿಸಲ್ಪಟ್ಟಿದ್ದಾರೆ.

ಶೇ.67ರಷ್ಟಿದ್ದಜನಸಂಖ್ಯೆ ಹಜಾರಸ್‌ ಅವರದ್ದು ಅಫ್ಘಾನಿಸ್ತಾನದಲ್ಲಿನ ಅತ್ಯಂತ ದೊಡ್ಡ ಜನಾಂಗೀಯ ಅಲ್ಪಸಂಖ್ಯಾತರು. ಸದ್ಯ ಇಲ್ಲಿನ ಜನಸಂಖ್ಯೆಯ ಶೇ.10-12ರಷ್ಟಿದ್ದಾರೆ. ಒಂದು ಕಾಲದಲ್ಲಿ ಇಡೀ ದೇಶದಲ್ಲಿ ಇವರ ಜನ ಸಂಖ್ಯೆ ಇದ್ದದ್ದು ಶೇ.67ರಷ್ಟು. ಆದರೆ, ಕಾಲ ಕ್ರಮೇಣ ಜನಸಂಖ್ಯೆ ಕಡಿಮೆಯಾಗುತ್ತಾ ಬಂದಿತು.

19ನೇ ಶತಮಾನದಿಂದ ಆಕ್ರಮಣ

ಹಜಾರಸ್‌ಗಳ ಮೇಲೆ ದಾಳಿ ಶುರುವಾಗಿದ್ದು 19ನೇ ಶತಮಾನ ಮಧ್ಯಭಾಗದಲ್ಲಿ. ಪಶ್ತುನ್‌ ರಾಜ ಅಮೀರ್‌ ಅಬ್ದುಲ್‌ ರೆಹಮಾನ್‌, ಶಿಯಾದವರ ಸಾಮೂಹಿಕ ಹತ್ಯೆಗೆ ಆದೇಶ ನೀಡಿದ್ದ. ಹೀಗಾಗಿ, ಇವರ ಜನಸಂಖ್ಯೆ ಒಮ್ಮೆಗೆ ಅರ್ಧದಷ್ಟು ಕಡಿಮೆಯಾಗಿತ್ತು. ಅಷ್ಟೇ ಅಲ್ಲ, ನಂತರದಲ್ಲೂ ಇವರನ್ನು ಗುಲಾಮರನ್ನಾಗಿ ಮಾಡಿ ಬೇರೆಕಡೆಗೆ ಮಾರಾಟ ಮಾಡಲಾಗುತ್ತಿತ್ತು.

ಇದನ್ನೂ ಓದಿ:ಅಫ್ಘಾನ್ ನಲ್ಲಿ ನಡೆಯುತ್ತಿರುವ ಘಟನೆಗಳು ಮನುಷ್ಯರು ತಲೆತಗ್ಗಿಸುವಂತಿದೆ: ಈಶ್ವರಪ್ಪ

ತಾಲಿಬಾನಿಗಳ ಕಾಲದಲ್ಲಿ

1990ರ ನಂತರದಲ್ಲಿ ಹಜಾರಸ್‌ಗಳ ಮೇಲಿನ ಆಕ್ರಮಣ ಮತ್ತಷ್ಟು ಹೆಚ್ಚಿಗೆಯಾಯಿತು. ತಾಲಿಬಾನ್‌ ಉಗ್ರರೇ ಶಿಯಾಗೆ ಸೇರಿದ ಇವರನ್ನು ಗುರುತಿಸಿ ಹತ್ಯೆ ಮಾಡುತ್ತಿದ್ದರು. 1990ರ ದಶಕದ ಮಧ್ಯಭಾಗದಲ್ಲಿ ಒಮ್ಮೆ ತಾಲಿಬಾನ್‌ ಕಮಾಂಡರ್‌ ಮೌಲಾವಾಯಿ ಮೊಹಮ್ಮದ್‌ ಹನೀಫ್, ಹಜಾರಸ್‌ಗಳು ಮುಸ್ಲಿಮರಲ್ಲ, ನೀವು ಅವರನ್ನುಕೊಲ್ಲಬಹುದು ಎಂದು ತನ್ನ ಸಂಗಡಿಗರಿಗೆ ಹೇಳಿದ್ದ. ಹೀಗಾಗಿಯೇ 1998ರಲ್ಲಿ ಮಝರ್‌ ಐ ಶರೀಫ್ನಲ್ಲಿ ಸಾವಿರಾರು ಹಜಾರಸ್‌ ಜನರನ್ನು ಸಾಮೂಹಿಕವಾಗಿ ಕೊಂದು ಹಾಗಲಾಗಿತ್ತು. ತಾಲಿಬಾನ್‌ ಉಗ್ರರನ್ನು ನಿಯಂತ್ರಣ ಮಾಡಲು ಅಮೆರಿಕ ಸೇನೆಯೇ ಅಫ್ಘಾನಿಸ್ತಾನಕ್ಕೆ ಬಂದು ಆಳ್ವಿಕೆ ಶುರು ಮಾಡಿತ್ತು. ಆದರೆ, ಈ ನಂತರದಲ್ಲೂ ಹಜಾರಸ್‌ಗಳಿಗೆ ನ್ಯಾಯ ಸಿಗಲಿಲ್ಲ. ಈ ಅವಧಿಯಲ್ಲೂ ಇವರ ಮೇಲೆ ಕಿರುಕುಳ ನಡೆಯುತ್ತಲೇ ಇತ್ತು. ಅಂದರೆ, ಐಸಿಸ್‌, ತಾಲಿಬಾನ್‌ ಉಗ್ರರು ಇವರ ಮಸೀದಿಗಳು, ಶಾಲೆಗಳು, ಆಸ್ಪತ್ರೆಗಳನ್ನು ಗುರಿಯಾಗಿ ದಾಳಿ ನಡೆಸುತ್ತಲೇ ಇದ್ದರು. ಕಳೆದ ಮೇನಲ್ಲಷ್ಟೇ ಕಾಬೂಲ್‌ನಲ್ಲಿ ಹಜಾರಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ದಶ್ತ್ ಇ ಬರ್ಚಿಯಲ್ಲಿ ಬಾಂಬ್‌ ಸ್ಫೋಟವಾಗಿ 60 ಮಂದಿ ಅಸುನೀಗಿದ್ದರು.

ಟಾಪ್ ನ್ಯೂಸ್

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.