ಒಂದು ಗ್ಲಾಸ್ ಬಿಯರ್ ಗೆ 70 ಲಕ್ಷ ಕೊಟ್ಟ..!

Team Udayavani, Sep 8, 2019, 5:25 PM IST

ಕೆಲವೊಮ್ಮೆ ನಾವು ಎಷ್ಟೇ ಜಾಗೃತರಾಗಿದ್ದರೂ  ನಮ್ಮಿಂದ ಯಾವುದೋ ಒಂದು ಅವಘಡ ಸಂಭವಿಸುತ್ತದೆ. ಮ್ಯಾಂಚಸ್ಟರ್ ನಲ್ಲಿ ನಡೆದ ಈ ಘಟನೆ ಕೇಳಲು ಹಾಸ್ಯಾಸ್ಪದ ಅನ್ನಿಸಿದ್ರು ನಡೆದದ್ದು ನಿಜ.

ಪೀಟರ್ ಲಾಲೋರ್ ಎನ್ನುವ ವ್ಯಕ್ತಿ ಮಾಲ್ಮೈಸನ್ ಹೋಟೆಲ್ ಗೆ ಬಿಯರ್ ಕುಡಿಯಲು ಹೋಗಿದ್ದಾರೆ. ಬಿಯರ್ ಕುಡಿದ ನಂತರ  ಬಿಲ್ ಪಾವತಿಸಿದ್ದಾರೆ. ಈ ವೇಳೆಯಲ್ಲಿ ಪೀಟರ್ ಕನ್ನಡಕ ಬಿಟ್ಟು ಹೋಗಿದ್ದಾರೆ. ಬಿಲ್ ಪಾವತಿಸುವ ಯಂತ್ರ ಹಾಳಾಗಿ ಇರುವುದರಿಂದ ಅದರಲ್ಲಿ ಬರೋಬ್ಬರಿ 70 ಲಕ್ಷ ರೂಪಾಯಿ ಬಿಲ್ ನಮೂದಿತವಾಗಿರುತ್ತದೆ. ಕನ್ನಡಕ ಹಾಕದೇ ಇದ್ದ ಪೀಟರ್ ಗೆ ಇದು ಸರಿಯಾಗಿ ಕಾಣಲಿಲ್ಲ. ಈ ವೇಳೆಯಲ್ಲಿ ಪೀಟರ್ ಬಿಲ್ ಪಾವತಿಸಿದ್ದಾರೆ.

ಪೀಟರ್ ಮನೆಯಿಂದ ತಕ್ಷಣ ಖಾತೆಯಿಂದ ಇತಿಷ್ಟು ಹಣ ತೆಗೆಯಲಾಗಿದೆ ಎಂಬ ಕಾಲ್ ಬರುತ್ತದೆ. ನಂತರ ಕ್ಯಾಶ್ ಕೌಂಟರ್ ಗೆ ಬಂದು ಪೀಟರ್ ತಾನೆಷ್ಟು ಬಿಲ್ ಪಾವತಿಸಿದ್ದೇನೆ ಎಂದು ಕೇಳಿದ್ದಾರೆ. ಬಾರ್ ಕೆಲಸದವ ಮೊದಲು ಎಷ್ಟು ಎಂದು ಕೇಳಿದಾಗ ಹೇಳಲು ನಿರಾಕರಿಸಿದ್ದಾರೆ. ಪೀಟರ್ ಒತ್ತಾಯ ಮಾಡಿದಾಗ 70 ಲಕ್ಷ ಎಂದು ಹೇಳಿದ್ದಾರೆ. ಇದನ್ನು ಕೇಳಿ ಪೀಟರ್  ದಿಗ್ಬ್ರಂತನಾಗಿದ್ದಾರೆ.

ಪೀಟರ್ ಈ ಘಟನೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಬಿಯರ್ ಬಾಟಲ್  ಫೋಟೋವನ್ನು ಹಾಕಿ ಇದು ಅತ್ಯಂತ ದುಬಾರಿ ಬಿಯರ್ ಎಂದು ನಡೆದ ಸಂಗತಿಯನ್ನು ಬರೆದು ಶೇರ್ ಮಾಡಿದ್ದಾರೆ. ಈ ಸಂಬಂಧ ಬಾರ್ ವ್ಯವಸ್ಥಾಪಕರು ತಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿದ್ದು,70 ಲಕ್ಷದಲ್ಲಿ ಸ್ವಲ್ಪ ಹಣವನ್ನು ವಾಪಸ್ ಕೊಟ್ಟಿದ್ದಾರೆ.ದೊಡ್ಡ ಮಟ್ಟದ ಮೊತ್ತವಾಗಿರುವುದರಿಂದ ಎಲ್ಲಾ ಹಣ ವಾಪಸ್ದ ಬರುವವರೆಗೆ ಒಂಬತ್ತು ದಿನ ಕಾಯಬೇಕಾಗಬಹುದು ಎಂದಿದ್ದಾರೆ. ಪೀಟರ್ ಈಗ ತನ್ನ ಖಾತೆಯಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದಾರೆ .ಇಷ್ಟೆಲ್ಲಾ ಎಡವಟ್ಟು ಆಗಿದ್ದು ಪೀಟರ್ ಕನ್ನಡಕ ಮರೆತು ಬಂದಿದ್ದರಿಂದ ಅನ್ನುವುದು ಹಾಸ್ಯಾಸ್ಪದ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ