ಹಿಜ್ಬುಲ್‌ ಅಂ.ರಾ. ಉಗ್ರ  ಸಂಘಟನೆ: ಅಮೆರಿಕ

Team Udayavani, Aug 17, 2017, 8:35 AM IST

ವಾಷಿಂಗ್ಟನ್‌: ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನ ಮೂಲದ ಹಿಜ್ಬುಲ್‌ ಮುಜಾಹಿದೀನ್‌ ಅನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ಪರಿಣಾಮ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಎದುರಿಸುವಂತಾಗಿದೆ.

ಇತ್ತೀಚೆಗಷ್ಟೇ ಅಮೆರಿಕ ಹಿಜ್ಬುಲ್‌ ಮುಖಂಡ ಸೈಯಸ್‌ ಸಲಾಹುದ್ದೀನ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಿತ್ತು. ಇದರ ಬೆನ್ನಲ್ಲೇ ಉಗ್ರ ಸಂಘಟನೆಯನ್ನೂ ಕಪ್ಪು ಪಟ್ಟಿಗೆ ಸೇರಿಸಿದೆ. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಪಟ್ಟಿಗೆ ಹಿಜ್ಬುಲ್‌ ಸೇರಿದ್ದರಿಂದ ಅದರ ವಿರುದ್ಧ ಅನೇಕ ನಿರ್ಬಂಧಗಳು ಜಾರಿಯಾಗಲಿವೆ. ಹಿಜ್ಬುಲ್‌ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವ ವಿರುದ್ಧ ಅದಕ್ಕೆ ಲಭ್ಯವಾಗುವ ಅಂತಾರಾಷ್ಟ್ರೀಯ ಮೂಲಗಳಿಗೆ ಕಡಿವಾಣ ಬೀಳಲಿದೆ ಎಂದು ಅಮೆರಿಕ ಗೃಹ ಇಲಾಖೆ ಪ್ರಕಟಣೆ ಹೇಳಿದೆ. ಇದರೊಂದಿಗೆ ಅಮೆರಿಕ ವ್ಯಾಪ್ತಿಯಲ್ಲಿ ಬರುವ ಹಿಜ್ಬುಲ್‌ಗೆ ಸೇರಿದ ಯಾವುದೇ ಆಸ್ತಿ ಪಾಸ್ತಿ, ವ್ಯವಹಾರಗಳಿಗೆ ನಿರ್ಬಂಧ ಹೇರಲಾಗುತ್ತದೆ. ಹಿಜ್ಬುಲ್‌ನೊಂದಿಗೆ ಯಾವುದೇ ಅಮೆರಿಕ ಪ್ರಜೆ ವ್ಯವಹಾರವನ್ನೂ ನಡೆಸುವಂತೆಯೂ ಇರುವುದಿಲ್ಲ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ