ಆತನ ಫ್ರಿಡ್ಜ್ ನಲ್ಲಿತ್ತು 183 ನಾಯಿ,ಹಾವು,ಮೊಲ,ಹಲ್ಲಿ
ಪ್ರಾಣಿಗಳನ್ನೆಲ್ಲ ಫ್ರಿಡ್ಜ್ ನಲ್ಲಿ ಕೂಡಿಟ್ಟಿದ್ದ ಪಾಪಿ
Team Udayavani, Apr 17, 2022, 8:10 AM IST
ವಾಷಿಂಗ್ಟನ್: ಸರಣಿ ಕೊಲೆ ಮಾಡು ವವರು, ಬೇರೆಯವರಿಗೆ ಹಿಂಸಿಸಿ ಅದರಲ್ಲಿ ಆನಂದ ಅನುಭವಿಸುವಂತಹ ವಿಚಿತ್ರ ಮನುಷ್ಯರ ಬಗ್ಗೆ ನೀವು ಕೇಳಿರುತ್ತೀರಿ. ಅಮೆರಿಕದ ಅರಿಜೋ ನಾದಲ್ಲೂ ಅಂತದ್ದೇ ಒಬ್ಬ ವಿಚಿತ್ರ ಮನುಷ್ಯ ಬರೋಬ್ಬರಿ 183 ಪ್ರಾಣಿ ಗಳನ್ನು ಕೊಂದು, ಮನೆಯ ಫ್ರಿಡ್ಜ್ ನಲ್ಲಿಟ್ಟು ಕೊಂಡಿದ್ದ ವಿಚಾರ ಇದೀಗ ಹೊರಬಿದ್ದಿದೆ.
ಮೈಕೆಲ್ ಪ್ಯಾಟ್ರಿಕ್ ಟರ್ಲ್ಯಾಂಡ್(43) ಹೆಸರಿನ ವ್ಯಕ್ತಿ, ಗೋಲ್ಡನ್ ವ್ಯಾಲಿ ಎಂಬಲ್ಲಿ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಇತ್ತೀಚೆಗೆ ಆತ ಮನೆ ಖಾಲಿ ಮಾಡಿ ಕೊಂಡು ಬೇರೆ ನಗರದಲ್ಲಿ ವಾಸ ಹೂಡಿದ್ದಾನೆ. ಖಾಲಿಯಾಗಿದ್ದ ಮನೆ ಯನ್ನು ಸ್ವಚ್ಛ ಮಾಡಲೆಂದು ಮನೆಯ ಮಾಲಕ ಬಂದಾಗ ಆತನಿಗೆ ವಿಚಿತ್ರ ಕಾಣಿಸಿಕೊಂಡಿದೆ.
ಅಲ್ಲಿದ್ದ ದೊಡ್ಡ ಫ್ರಿಡ್ಜ್ ನಲ್ಲಿ ಹಾವು, ನಾಯಿ, ಮೊಲ, ಹಲ್ಲಿ ಸೇರಿ ಹಲವು ಪ್ರಾಣಿಗಳ ಮೃತ ದೇಹ ಪತ್ತೆಯಾಗಿದೆ.
ಆ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಒಟ್ಟು 183 ಪ್ರಾಣಿಗಳ ದೇಹ ಫ್ರಿಡ್ಜ್ ನಲ್ಲಿದ್ದು, ಅದರಲ್ಲಿ ಅನೇಕ ವನ್ನು ಜೀವಂತವಾಗಿ ರುವಾಗಲೇ ಫ್ರಿಡ್ಜ್ ನಲ್ಲಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಉಪಚುನಾವಣೆ: ಟಿಎಂಸಿ, ಕಾಂಗ್ರೆಸ್, ಆರ್‌ಜೆಡಿ ಗೆಲುವು; ಬಿಜೆಪಿಗೆ ಗೆಲುವಿಲ್ಲ
ಆತ ಅದೇ ಊರಿನ ಮಹಿಳೆಯೊಬ್ಬಳಿಂದ ಹಾವಿನ ಸಂತಾನೋತ್ಪತ್ತಿಗಾಗಿ ಆಕೆ ಸಾಕಿದ್ದ ಹಾವನ್ನು ಬಾಡಿಗೆ ತಂದಿದ್ದು, ಅದನ್ನೂ ಫ್ರಿಡ್ಜ್ ನಲ್ಲೇ ಇಟ್ಟಿದ್ದ ಎನ್ನುವ ವಿಚಾರ ತಿಳಿದುಬಂದಿದೆ.ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮೆರಿಕ ಸ್ವಾತಂತ್ರ್ಯೋತ್ಸವ ಪರೇಡ್ ಮೇಲೆ ಗುಂಡಿನ ದಾಳಿ: ಆರು ಮಂದಿ ಸಾವು
ಸೇನಾ ಹೆಲಿಕಾಪ್ಟರ್ನಲ್ಲಿ ತನ್ನ ಪತ್ನಿಯನ್ನು ಕರೆತಂದ ತಾಲಿಬಾನಿ ಸೈನಿಕ
ಸೇನಾ ಹೆಲಿಕ್ಯಾಪ್ಟರ್ ನಲ್ಲಿ ವಧುವನ್ನು ಕರೆತಂದ ತಾಲಿಬಾನ್ ಕಮಾಂಡರ್!
ಆರ್ಥಿಕ ಬಿಕ್ಕಟ್ಟು-ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆ; ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ