ಎಚ್ಚರಿಕೆಗೂ ಜಗ್ಗದ ಆಕ್ರೋಶ : ಹಾಂಕಾಂಗ್‌ನಲ್ಲಿ ಎಲ್ಲೆ ಮೀರುತ್ತಿರುವ ಹೋರಾಟ

Team Udayavani, Nov 19, 2019, 7:15 AM IST

ಹಾಂಕಾಂಗ್‌: ಪ್ರಜಾಪ್ರಭುತ್ವ ಮಾದರಿ ಆಡಳಿತಕ್ಕೆ ಆಗ್ರಹಿಸಿ, ಆರು ತಿಂಗಳಿಂದ ನಡೆಯುತ್ತಿರುವ ಹಾಂಕಾಂಗ್‌ ಯುವ ಜನತೆಯ ಹೋರಾಟ, ಸೋಮವಾರ ಮತ್ತೂಂದು ಮಜಲು ಮುಟ್ಟಿದೆ. ಹಾಂಕಾಂಗ್‌ ಪಾಲಿಟೆಕ್ನಿಕ್‌ ವಿವಿ (ಪಾಲಿ-ಯು) ಕ್ಯಾಂಪಸ್‌ನಲ್ಲಿ ಅಡಗಿರುವ ಸಾವಿರಾರು ಹೋರಾಟಗಾರರು ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಉಗ್ರ ಪ್ರತಿಭಟನೆ ನಡೆಸಿದ್ದಾರೆ.

ರವಿವಾರ, ಪ್ರತಿಭಟನಕಾರರು ಬಿಲ್ಲು- ಬಾಣ ಪ್ರಯೋಗಿಸಿದ ಪರಿಣಾಮ, ಪೊಲೀಸ್‌ ಸಿಬಂದಿಯೊಬ್ಬರ ಕಾಲಿಗೆ ಬಾಣ ನೆಟ್ಟುಕೊಂಡಿತ್ತು. ಹೀಗಾಗಿ ಪೊಲೀಸರು, ಗೋಲಿಬಾರ್‌ ಮಾಡುವುದಾಗಿ ಹೋರಾಟಗಾರರನ್ನು ಎಚ್ಚರಿಸಿ, ವಿವಿಯ ಆವರಣದೊಳಕ್ಕೆ ಲಗ್ಗೆಯಿಡಲು ಪ್ರಯತ್ನಿಸಿದರು. ರೊಚ್ಚಿಗೆದ್ದ ಹೋರಾಟಗಾರರು, ಟೈರು ಮತ್ತಿತರ ಸಾಮಗ್ರಿಗಳಿಗೆ ಬೆಂಕಿಯಿಟ್ಟು ಪೊಲೀಸರು ವಿವಿ ಪ್ರವೇಶಿಸದಂತೆ ನೋಡಿಕೊಂಡರು.

ಜತೆಗೆ, ಪೊಲೀಸರ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದರಲ್ಲದೆ, ವಿವಿಯ ಮುಖ್ಯ ಕಟ್ಟಡದ ಮೇಲಿನಿಂದ ಕಚ್ಚಾ ಬಾಂಬ್‌ಗಳನ್ನೂ ಎಸೆದರು. ಈ ಮೂಲಕ ವಿವಿ ತಮ್ಮ ವಶದಲ್ಲಿದೆ ಎಂಬ ಸಂದೇಶವನ್ನೂ ರವಾನಿಸಿದರು. ಇಡೀ ನಗರವೇ ಹೊತ್ತಿ ಹೊರಿಯುತ್ತಿರುವ ಹಿನ್ನೆಲೆಯಲ್ಲಿ ಚೀನದ ಅಧ್ಯಕ್ಷ ಹೋರಾಟ ಕೈಬಿಡದಿದ್ದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ, ಸ್ಪೈಸ್‌ ಜೆಟ್‌ ಸಹಿತ ಏಷ್ಯಾದ ಅನೇಕ ವೈಮಾನಿಕ ಕಂಪೆನಿಗಳು ಹಾಂಕಾಂಗ್‌ಗೆ ತೆರಳುವ ವಿಮಾನಗಳ ಸಂಚಾರ ರದ್ದು ಮಾಡಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ