ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಕೇಸ್: ಇಮ್ರಾನ್ ಖಾನ್ ಖುಲಾಸೆ
Team Udayavani, May 4, 2018, 4:32 PM IST
ಇಸ್ಲಾಮಾಬಾದ್ : 2014ರಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ಮೇಲೆ ನಡೆಸಲಾಗಿದ್ದ ಮಾರಣಾಂತಿಕ ದಾಳಿಗೆ ಸಂಬಂಧಿಸಿದ ಕೇಸಿನಲ್ಲಿ ಪಾಕ್ ವಿಪಕ್ಷ ನಾಯಕ ಇಮ್ರಾನ್ ಖಾನ್ ಅವರನ್ನು ಉಗ್ರ ನಿಗ್ರಹ ನ್ಯಾಯಾಲಯ ಖುಲಾಸೆಗೊಳಿಸಿದೆ.
2013ರ ಮಹಾ ಚುನಾವಣೆಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಇಮ್ರಾನ್ ಖಾನ್ ಅವರು ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ (ಪಿಟಿಐ) ಕಾರ್ಯಕತರು ಮತ್ತು ಪಾಕಿಸ್ಥಾನ್ ಆವಾಮಿ ತೆಹರೀಕ್ ಅಧ್ಯಕ್ಷ ತಾಹಿರುಲ್ ಕಾದ್ರಿ ಅವರ ಬೆಂಬಲಿಗರು ಜತೆಗೂಡಿ 2014ರಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
2014ರ ಜೂನ್ನಲ್ಲಿ ಲಾಹೋರ್ನಲ್ಲಿ ಕೂಡ ಈ ಪ್ರತಿಭಟನೆಗಳು ನಡೆದಿದ್ದು 14 ಮಂದಿ ಕೊಲ್ಲಲ್ಪಟ್ಟು ಇತರ 100ಕ್ಕೂ ಅಧಿಕ ಮಂದಿ ಪೊಲೀಸ್ ಗೋಲಿಬಾರಿನಲ್ಲಿ ಗಾಯಗೊಂಡಿದ್ದರು.
ಆ ಸಂದರ್ಭದಲ್ಲಿ ಇಸ್ಲಾಮಾಬಾದ್ ಪೊಲೀಸ್ ಸುಪರಿಂಟೆಂಡೆಂಟ್ ಅಸ್ಮತುಲ್ಲಾ ಜುನೇಜೋ ಅವರನ್ನು ಉದ್ರಿಕ್ತರು ಹಿಗ್ಗಾ ಮುಗ್ಗಾ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ