ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

ಮತ್ತೆ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ಸುದ್ದಿಯಾದ ಪಾಕ್ ಮಾಜಿ ಪ್ರಧಾನಿ

Team Udayavani, Nov 27, 2022, 5:12 PM IST

1-sadsad

ರಾವಲ್ಪಿಂಡಿ : ಪಾಕಿಸ್ಥಾನದ ಉಚ್ಚಾಟಿತ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈ ತಿಂಗಳ ಆರಂಭದಲ್ಲಿ ಪೂರ್ವ ನಗರವಾದ ವಜೀರಾಬಾದ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತನ್ನ ಮೇಲೆ ದಾಳಿಯಲ್ಲಿ ಮೂವರು ಶೂಟರ್‌ಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ದಾಳಿಯ ನಂತರ ನಡೆದ ನಡೆದ ಸೇನೆಯ ಪ್ರಧಾನ ಕಚೇರಿಯನ್ನು ಹೊಂದಿರುವ ರಾವಲ್ಪಿಂಡಿ ಗ್ಯಾರಿಸನ್ ಸಿಟಿಯಲ್ಲಿ ಶನಿವಾರ ರಾತ್ರಿ ತನ್ನ ಪಕ್ಷದ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖಾನ್, ಈ ಹಿಂದೆ ಗುರುತಿಸಲಾದ ಇಬ್ಬರು ದಾಳಿಕೋರರು, ನನ್ನ ಮೇಲೆ ಮತ್ತು ಇತರ ಪಿಟಿಐ ನಾಯಕರ ಮೇಲೆ ಗುಂಡು ಹಾರಿಸಿದರು. ಎರಡನೆಯ ಶೂಟರ್ ಕಂಟೇನರ್ ಮುಂಭಾಗದಲ್ಲಿ ಗುಂಡು ಹಾರಿಸಿದ. ಮೂರನೇ ದಾಳಿಕೋರ ಮೊದಲ ಬಂದೂಕುಧಾರಿಯನ್ನು ಮುಗಿಸಿದ ಎಂದು ಹೇಳಿದ್ದಾರೆ.

70 ವರ್ಷದ ಖಾನ್, ಈ ಮೂರನೇ ಶೂಟರ್ ನಿಜವಾಗಿಯೂ ರ‍್ಯಾಲಿಯಲ್ಲಿ ಒಬ್ಬ ವ್ಯಕ್ತಿಯನ್ನು ಮುಗಿಸಲು ಪ್ರಯತ್ನಿಸುತ್ತಿರುವಾಗ ದಾಳಿಕೋರ ಅಂತ್ಯಗೊಂಡಿದ್ದಾನೆ ಎಂದು ಹೇಳಿದ್ದಾರೆ.

ದಾಳಿಯ ಒಂದು ದಿನದ ನಂತರ ಲಾಹೋರ್‌ನ ಶೌಕತ್ ಖಾನುಮ್ ಆಸ್ಪತ್ರೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಾನ್, ಇಬ್ಬರು ಶೂಟರ್‌ಗಳು ತಮ್ಮ ಬಲಗಾಲಿಗೆ ನಾಲ್ಕು ಗುಂಡುಗಳನ್ನು ಹೊಡೆದಿದ್ದಾರೆ ಎಂದು ಹೇಳಿದ್ದರು.

ಮೊದಲ ಪ್ರತಿಭಟನಾ ಮೆರವಣಿಗೆ ವಿಶ್ವಾದ್ಯಂತ ಮುಖ್ಯ ಸುದ್ದಿಯಾಗಿದ್ದು, ಪಾಕ್ ನ ಎಲ್ಲಾ ಅಸೆಂಬ್ಲಿಗಳಿಂದ ತನ್ನ ಪಕ್ಷದ ಶಾಸಕರನ್ನು ಹಿಂತೆಗೆದುಕೊಳ್ಳುವ ಇಮ್ರಾನ್ ಖಾನ್ ಅವರ ನಿರ್ಧಾರವು ಮತ್ತೊಮ್ಮೆ ಅವರ ರಾಜಕೀಯ ನಡೆಗಳನ್ನು ಕೇಂದ್ರೀಕರಿಸಿದೆ. ಸುಮಾರು ಮೂರು ವಾರಗಳ ಹಿಂದೆ ನಡೆದ ಘಟನೆಯ ಹೊರತಾಗಿಯೂ ಭಾರಿ ಜನಸಮೂಹವನ್ನು ಸೆಳೆಯಲು ಸಾಧ್ಯವಾಯಿತು. ಮಾಜಿ ಪ್ರಧಾನಿ ಇಸ್ಲಾಮಾಬಾದ್‌ಗೆ ತಮ್ಮ ಲಾಂಗ್ ಮಾರ್ಚ್ ಅನ್ನು ಮೊಟಕುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಇಮ್ರಾನ್ ಖಾನ್ ಅಧ್ಯಕ್ಷ ನವೆಂಬರ್ 3 ರಂದು ಪಂಜಾಬ್‌ನ ವಜೀರಾಬಾದ್ ಪ್ರದೇಶದಲ್ಲಿ ಸರಕಾರದ ವಿರುದ್ಧ ಕ್ಷಿಪ್ರ ಚುನಾವಣೆಗೆ ಒತ್ತಾಯಿಸಿ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾಗ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದಾಗ ಬಲಗಾಲಿಗೆ ನಾಲ್ಕು ಗುಂಡು ತಗುಲಿತ್ತು.

ಟಾಪ್ ನ್ಯೂಸ್

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

1-asdsa-das

ನನ್ನ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

Perth Scorchers are the BBL champions for the fifth time!

ಐದನೇ ಬಾರಿಗೆ ಬಿಗ್ ಬ್ಯಾಶ್ ಲೀಗ್ ಟ್ರೋಫಿ ಗೆದ್ದ ಪರ್ತ್ ಸ್ಕಾಚರ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಎಂಎಫ್ ಷರತ್ತುಗಳು ಕಲ್ಪನೆಗೂ ಮೀರಿದ್ದು!

ಐಎಂಎಫ್ ಷರತ್ತುಗಳು ಕಲ್ಪನೆಗೂ ಮೀರಿದ್ದು!

Chinese Spy Balloon Spotted Surveilling US Nuclear Weapons Sites

ಅಮೆರಿಕ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನೀ ಸ್ಪೈ ಬಲೂನ್ ಕಣ್ಗಾವಲು

ಪಾಕ್‌ಗೆ ಐಎಂಎಫ್ ಶಾಕ್‌: ಸಾಲದ ಹೊಸ ಪ್ರಸ್ತಾವನೆ ತಿರಸ್ಕಾರ

ಪಾಕ್‌ಗೆ ಐಎಂಎಫ್ ಶಾಕ್‌: ಸಾಲದ ಹೊಸ ಪ್ರಸ್ತಾವನೆ ತಿರಸ್ಕಾರ

tdy-20

30 ಎಂಕ್ಯೂ-9ಬಿ ಡ್ರೋನ್‌ಗಳ ಖರೀದಿಗೆ ಒಪ್ಪಂದ

tdy-17

ಬಡ್ಡಿ ದರ ಏರಿಸಿದ ಬ್ಯಾಂಕ್‌ ಆಫ್ ಇಂಗ್ಲೆಂಡ್‌

MUST WATCH

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

ಹೊಸ ಸೇರ್ಪಡೆ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

Exam

371 (ಜೆ) ಪ್ರಾಧ್ಯಾಪಕ ಹುದ್ದೆ ನೇಮಕಾತಿ ದೋಷ ಸರಿಪಡಿಸುವ ಆದೇಶ ಸ್ವಾಗತಾರ್ಹ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.