ಮಾನ ನಷ್ಟ ಮೊಕದ್ದಮೆ : ಇಮ್ರಾನ್‌ ಖಾನ್‌ ಮಾಜಿ ಪತ್ನಿಗೆ ಜಯ

Team Udayavani, Nov 14, 2019, 1:34 AM IST

ಲಂಡನ್‌: ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ರ ಮಾಜಿ ಪತ್ನಿ ರೆಹಾಮ್‌ ಖಾನ್‌ ಹೂಡಿದ್ದ ಮಾನ ನಷ್ಟ ಮೊಕದ್ದಮೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ವರ್ಷ ಪಾಕಿಸ್ಥಾನದ ದುನಿಯಾ ಟಿವಿ ನಡೆಸಿದ್ದ ಚರ್ಚೆಯಲ್ಲಿ ಸಚಿವರಾಗಿದ್ದ ಶೇಖ್‌ ರಶೀದ್‌, ರಹಾಮ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

ಅದರ ವಿರುದ್ಧ ಯುನೈಟೆಡ್‌ ಕಿಂಗ್‌ಡಮ್‌ ಹೈಕೋರ್ಟ್‌ ನಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ವೇಳೆ ನ್ಯಾಯಮೂರ್ತಿ ಮ್ಯಾಥ್ಯೂ ನಿಕ್ಲಿನ್‌ಗೆ ಚಾನೆಲ್‌ನ ಆಡಳಿತ ಮಂಡಳಿ ಕ್ಷಮೆ ಕೋರಿರುವ ಮತ್ತು ಬೃಹತ್‌ ಮೊತ್ತವನ್ನು ಪರಿಹಾರವಾಗಿ ನೀಡುವ ಬಗ್ಗೆ ಒಪ್ಪಿಕೊಂಡ ಅಂಶ ಅರಿಕೆ ಮಾಡಲಾಯಿತು. ಆದರೆ ಅದರ ಮೊತ್ತ ಎಷ್ಟು ಎನ್ನುವುದನ್ನು ಬಹಿರಂಗಪಡಿಸಲಾಗಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ