Udayavni Special

ಪಾಕ್‌ ಸಾಲ ತೀರಿಸಲು ಇಮ್ರಾನ್‌ ಖಾನ್‌ಗೆ ಬೇಕು ಬಿಲಿಯಗಟ್ಟಲೆ ಡಾಲರ್‌

Team Udayavani, Aug 3, 2018, 4:33 PM IST

imran-victory-700.jpg

ಇಸ್ಲಾಮಾಬಾದ್‌ : ಇದೇ ಆಗಸ್ಟ್‌ 11ರಂದು ಪಾಕಿಸ್ಥಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಗೆ ಪ್ರತಿ ಪಕ್ಷಗಳಿಂದ ಯಾವುದೇ ಸವಾಲು ಎದುರಾಗದಿದ್ದರೂ ದೇಶದ ಸಂಪೂರ್ಣವಾಗಿ ಹದಗೆಟ್ಟ ಆರ್ಥಿಕತೆಯನ್ನು ಮೇಲೆತ್ತಲು ಬಿಲಿಯಗಟ್ಟಲೆ ಡಾಲರ್‌ ಅಗತ್ಯದ ಅತೀ ದೊಡ್ಡ ಸವಾಲು ಕಾಡಲಿದೆ. 

ತೀವ್ರವಾಗಿ ಹದಗೆಟ್ಟಿರುವ ಮತ್ತು ದಿವಾಳಿ ಅಂಚಿಗೆ ತಲುಪಿರುವ  ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರಲು ಇಮ್ರಾನ್‌ ಖಾನ್‌ಗೆ ಈಗ ತತ್‌ಕ್ಷಣಕ್ಕೆ ಕನಿಷ್ಠ  12 ಶತಕೋಟಿ ಡಾಲರ್‌ ನೆರವು ಬೇಕಾಗಿದೆ.

ಇಷ್ಟು ದೊಡ್ಡ ಮೊತ್ತದ ನೆರವಿಗಾಗಿ ಪಾಕಿಸ್ಥಾನ ಐಎಂಎಫ್ ಕಡೆ ಮುಖ ಮಾಡಬೇಕಿದೆ. 2013ರಲ್ಲಿ ಪಾಕಿಸ್ಥಾನ IMF ನಿಂದ 6.6 ಬಿಲಿಯ ಡಾಲರ್‌ ಸಾಲ ಪಡೆದಿತ್ತು. ಆದರೆ ಈಗ ಕೇವಲ ಐದೇ ವರ್ಷದಲ್ಲಿ ಪಾಕಿಸ್ಥಾನಕ್ಕೆ ಇದರ ದುಪ್ಪಟ್ಟು ಹಣದ ಅಗತ್ಯವಿದೆ. ಆದರೆ ಈ ಹಣ IMF ನಿಂದ ಸಿಗುವುದು ಖಚಿತವಿಲ್ಲ ಎಂಬ ಸ್ಥಿತಿ ಈಗ ಒದಗಿದೆ. 

ಚೀನದಿಂದ ಪಡೆದಿರುವ ಭಾರೀ ಮೊತ್ತದ ಸಾಲವನ್ನು ಮರು ಪಾವತಿಸುವ ಸಲುವಾಗಿ ಇಮ್ರಾನ್‌ ಖಾನ್‌ ಅವರ ಪಾಕಿಸ್ಥಾನ ಈಗಿನ್ನು ಐಎಂಎಫ್ ನಿಂದ ಪಡೆಯಲು ಪ್ರಯತ್ನಿಸುವ ಯಾವುದೇ ಸಾಲದ ಮೇಲೆ ತೀವ್ರ ನಿಗಾ ಇಡುವುದಾಗಿ ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದೆ. 

ಪಾಕ್‌ ಬಳಿ ಈಗ 10.3 ಶತಕೋಟಿ ಡಾಲರ್‌ ವಿದೇಶಿ ವಿನಿಮಯ ಮೀಸಲು ನಿಧಿ ಇದೆ ಎಂದು ಹಿಂದಿನ ಸರಕಾರ ಹೇಳಿತ್ತು. ಆದರೆ ಈ ಮೊತ್ತ ಕೇವಲ ಎರಡು ತಿಂಗಳ ಆಮದಿಗೆ ಕೂಡ ಸಾಲದಾಗಿದೆ. 

ದೇಶದಲ್ಲಿ ಬ್ರಹ್ಮಾಂಡದ ಪ್ರಮಾಣಕ್ಕೆ ಬೆಳೆದಿರುವ ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಸಮರ ಸಾರುವುದು ಮತ್ತು ಆಮದು ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸುವುದು ಇಮ್ರಾನ್‌ ಮುಂದಿರುವ ಗುರುತರ ಸವಾಲಾಗಿದೆ. 

ಈ ಸಂದರ್ಭದಲ್ಲಿ ಪಾಕಿಸ್ಥಾನ, ಚೀನ ಮತ್ತು ಸೌದಿ ಅರೇಬಿಯದ ಮುಂದೆ ಕೈಚಾಚುವುದು ಅನಿವಾರ್ಯವಾಗುತ್ತದೆ. ಚೀನದಿಂದ ಹೆಚ್ಚೆಚ್ಚು ಸಾಲ ಪಡೆದರೆ ಉಂಟಾಗುವ ರಾಜಕೀಯ-ಭೌಗೋಳಿಕ ಪರಿಣಾಮ ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಈಗಾಗಲೇ ಲಂಕಾ ಮೊದಲಾದ ದೇಶಗಳು ಕಂಡುಕೊಂಡಿವೆ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

paytm

ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ

ಕೋವಿಡ್ ಪಾಸಿಟಿವ್ ಎಂದು ಪತ್ನಿಗೆ ಹೇಳಿ ನಾಪತ್ತೆಯಾಗಿದ್ದ ಪತಿಯ ಅಸಲಿ ಗುಟ್ಟು ಬಯಲು!

ಕೋವಿಡ್ ಪಾಸಿಟಿವ್ ಎಂದು ಪತ್ನಿಗೆ ಹೇಳಿ ನಾಪತ್ತೆಯಾಗಿದ್ದ ಪತಿಯ ಅಸಲಿ ಗುಟ್ಟು ಬಯಲು!

vಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವುದು ಕನಸಿನ ಮಾತು: ಎಂ. ಚಂದ್ರಪ್ಪ

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವುದು ಕನಸಿನ ಮಾತು: ಎಂ. ಚಂದ್ರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

Mask

ಸಾಧ್ಯವಾದರೆ ಮಾಸ್ಕ್ ಧರಿಸಿ; ತಪ್ಪಿದರೆ ಸ್ಮಶಾನದಲ್ಲಿ ಸಮಾಧಿ ಗುಂಡಿ ತೋಡಿ!

indaus

ಚೀನಕ್ಕೆ ಪರ್ಯಾಯವಾಗಿ ಭಾರತದ ಜತೆ ವ್ಯಾಪಾರ ವಹಿವಾಟಿಗೆ ಮುಂದಾದ ಆಸ್ಟ್ರೇಲಿಯಾ

Mobile-Monkey-1

ಮಿಸ್ಸಿಂಗ್ ಮೊಬೈಲ್ ಮರಳಿ ಸಿಕ್ಕಿದಾಗ ಅದರಲ್ಲಿದ್ದ ಫೊಟೋಗಳನ್ನು ಕಂಡ ಯುವಕನಿಗೆ ಶಾಕ್!

youtube-vs-instagram

ಟಿಕ್‌ಟಾಕ್‌ ಬಳಿಕ ತಲೆ ಎತ್ತಿದ ಇನ್‌ಸ್ಟಾ ರೀಲ್ಸ್‌ಗೆ YouTube‌ ಚಾಲೆಂಜ್‌ !

MUST WATCH

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary

udayavani youtube

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್ ಸ್ಪಷ್ಟನೆಹೊಸ ಸೇರ್ಪಡೆ

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

paytm

ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

ಯುವ ಮೋರ್ಚಾದಿಂದ ರಕ್ತ ದಾನ ಶಿಬಿರ

ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಮೋದಿ ಹುಟ್ಟು ಹಬ್ಬ: ಜಿಲ್ಲೆಯಲ್ಲಿ  ಸೇವಾ ಕಾರ್ಯ

ಮೋದಿ ಹುಟ್ಟು ಹಬ್ಬ: ಜಿಲ್ಲೆಯಲ್ಲಿ ಸೇವಾ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.