ಹಜ್ ಯಾತ್ರಿಕರ ಮಾಹಿತಿ ಡಿಜಿಟಲೀಕರಣ : ಭಾರತಕ್ಕೆ ಹಿರಿಮೆ

Team Udayavani, Dec 2, 2019, 12:35 AM IST

ಜೆಡ್ಡಾ: ಹಜ್‌ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಎಲ್ಲ ಪ್ರಕ್ರಿಯೆಯನ್ನೂ ಡಿಜಿಟಲೀಕರಿಸಿದ ಮೊದಲ ದೇಶ ಭಾರತ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ ಹೇಳಿದ್ದಾರೆ.

2020ರಲ್ಲಿ ಮೆಕ್ಕಾ ಯಾತ್ರೆ ಕೈಗೊಳ್ಳುವ ಭಾರತೀಯರಿಗೆ ಆನ್‌ಲೈನ್‌ ಅರ್ಜಿ, ಇ ವೀಸಾ, ಹಜ್‌ ಮೊಬೈಲ್‌ ಆ್ಯಪ್‌, ಇ-ಮಸೀಹಾ ಆರೋಗ್ಯ ಸೇವೆ, ಇ-ಲಗೇಟ್‌ ಪ್ರೀ ಟ್ಯಾಗಿಂಗ್‌ ಮಾತ್ರವಲ್ಲದೆ, ಯಾತ್ರಿಕರಿಗೆ ಮೆಕ್ಕಾ ಮತ್ತು ಮದೀನದಲ್ಲಿನ ವಸತಿ ವ್ಯವಸ್ಥೆ, ಸಂಚಾರ ವ್ಯವಸ್ಥೆ ಕುರಿತ ಮಾಹಿತಿಯನ್ನು ಭಾರತದಲ್ಲೇ ಒದಗಿಸುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಭಾರತ ಮತ್ತು ಸೌದಿ ಅರೇಬಿಯಾದ ನಡುವೆ 2020ರ ಹಜ್‌ ಯಾತ್ರೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅವರು ಈ ಮಾತುಗಳನ್ನಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ