ದಾವೂದ್‌ನಿಂದ ಭಾರತಕ್ಕೆ ಅಪಾಯ

Team Udayavani, Jul 11, 2019, 5:06 AM IST

ನ್ಯೂಯಾರ್ಕ್‌: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ, ಜೈಶ್‌ ಎ ಮೊಹಮದ್‌ ಮತ್ತು ಲಷ್ಕರ್‌ ಉಗ್ರರಿಂದ ಭಾರತಕ್ಕೆ ಅಪಾಯವಿದೆ ಎಂಬ ವಿಚಾರದ ಕುರಿತಂತೆ ವಿಶ್ವ ಸಂಸ್ಥೆಯ ಗಮನ ಸೆಳೆಯುವ ಯತ್ನವನ್ನು ಭಾರತ ನಡೆಸಿದ್ದು, ದಾವೂದ್‌ ಗ್ಯಾಂಗ್‌ ಉಗ್ರರಿಗೆ ನೆರವಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರಿದೆ.

ಉಗ್ರ ಸಂಘಟನೆಗಳು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಾನವ ಕಳ್ಳಸಾಗಣೆಯಂತಹ ವಹಿವಾಟಿನ ಮೂಲಕ ತಮ್ಮ ಉಗ್ರ ಚಟುವಟಿಕೆಗಳಿಗೆ ಹಣ ಗಳಿಕೆ ಮಾಡುತ್ತಿವೆ. ಇದೇ ರೀತಿ, ಅಪರಾಧ ಚಟುವಟಿಕೆ ನಡೆಸುವ ಗ್ಯಾಂಗ್‌ಗಳೂ ಉಗ್ರರಿಗೆ ನೆರವಾಗುತ್ತಿವೆ. ಖೋಟಾ   ನೋಟು ಮುದ್ರಣ, ಅಕ್ರಮ ಹಣ ಕಾಸು, ಶಸ್ತ್ರಾಸ್ತ್ರ ವಹಿವಾಟು, ಮಾದಕದ್ರವ್ಯ ಕಳ್ಳ ಸಾಗಣೆ ಯಂತಹ ಚಟುವಟಿಕೆಗಳಲ್ಲಿ ದಾವೂದ್‌ ಇಬ್ರಾಹಿಂನ ಡಿ ಕಂಪೆನಿ ತೊಡಗಿಸಿಕೊಂಡಿದೆ.

ದಾವೂದ್‌ ಗ್ಯಾಂಗ್‌ ಉಗ್ರ ಸಂಘಟನೆಗಳಾದ ಜೈಷ್‌ ಹಾಗೂ ಲಷ್ಕರ್‌ ಜೊತೆಗೆ ಕೈಜೋಡಿಸಿವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿ ಸೈಯದ್‌ ಅಕºರುದ್ದೀನ್‌ ಹೇಳಿದ್ದಾರೆ. ಉಗ್ರ ಚಟುವಟಿಕೆ ಮತ್ತು ಅಕ್ರಮ ಚಟುವಟಿಕೆಗಳೆರಡೂ ಬಹುತೇಕ ಸನ್ನಿವೇಶಗಳಲ್ಲಿ ಒಟ್ಟಿಗೆ ನಡೆಯುತ್ತಿವೆ. ಇದನ್ನು ನಾವು ತಡೆಯುವ ಅಗತ್ಯವಿದೆ ಎಂದು ಸೈಯದ್‌ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ