ಅಮೆರಿಕ ಸಂಸದೆ ಪ್ರಮೀಳಾ ವಿರುದ್ಧ ಭಾರತೀಯ ಸಮುದಾಯ ಆಕ್ರೋಶ

Team Udayavani, Dec 10, 2019, 10:56 PM IST

ನ್ಯೂಯಾರ್ಕ್‌: ಅಮೆರಿಕದ ಭಾರತೀಯ ಸಮುದಾಯ, ಡೆಮಾಕ್ರಾಟ್‌ ಪಕ್ಷದ ಸಂಸದೆ ಪ್ರಮೀಳಾ ಜಯಪಾಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರದ ಸಂವಹನ ವ್ಯವಸ್ಥೆ ನಿರ್ಬಂಧ ಸಂಬಂಧ ಭಾರತ ಸರ್ಕಾರದ ವಿರುದ್ಧ, ಅವರು ಅಮೆರಿಕ ಸಂಸತ್ತಿನಲ್ಲಿ ನಿಲುವಳಿ ಮಂಡಿಸಿದ್ದಾರೆ. ಇದರಿಂದ ಅವರಿಗೆ ಮತ ನೀಡಿರುವ ತಮಗೆ ಬಹಳ ನೋವಾಗಿದೆ. ಹೀಗೆ ಮಾಡಬಾರದೆಂದು ಆಗ್ರಹಿಸಿದ್ದರೂ, ಅವರು ನಿಲುವಳಿ ಮಂಡಿಸುವ ಮೂಲಕ ದ್ರೋಹ ಬಗೆದಿದ್ದಾರೆ ಎಂದು ಭಾರತೀಯ ಸಮುದಾಯ ಹೇಳಿಕೊಂಡಿದೆ.

ಕಾಶ್ಮೀರವು ಭಾರತದ ಆಂತರಿಕ ವಿಚಾರ. ಅಮೆರಿಕ ಸಂಸತ್ತಿನಲ್ಲಿ ಆದ ನಿರ್ಣಯಗಳಿಗೆ ತಕ್ಕಂತೆ ಭಾರತವನ್ನು ನಡೆಸಲು ಸಾಧ್ಯವಿಲ್ಲ. ಇಷ್ಟಾದರೂ ಪ್ರಮೀಳಾ ಅದರಲ್ಲಿ ಮಧ್ಯಪ್ರವೇಶಿಸಿದ್ದಾರೆ. ಅವರು ಅಮೆರಿಕ ವಿರೋಧಿ, ಹಿಂದೂ ವಿರೋಧಿ, ಹಾಗೆಯೇ ಭಯೋತ್ಪಾದನೆಯ ಬೆಂಬಲಿಗರಂತೆ ಕಾಣುತ್ತಿದ್ದಾರೆಂದು ವಕೀಲ ರವಿ ಬಾತ್ರಾ ಹೇಳಿದ್ದಾರೆ.

ಪ್ರಮೀಳಾರಂಥ ಎಡಪಂಥೀಯ ವ್ಯಕ್ತಿಗಳಿಂದ ನಮಗೆ ಬೇಸರವಾಗಿದೆ. ನಾವು ಈವರೆಗೆ ಡೆಮಾಕ್ರಾಟ್‌ ಪಕ್ಷವನ್ನು ಬೆಂಬಲಿಸುತ್ತಿದ್ದೆವು. ಇನ್ನು ರಿಪಬ್ಲಿಕನ್‌ ಪಕ್ಷ ಬೆಂಬಲಿಸುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ದೇಬದತ್ತ ದಾಸ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ