ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Team Udayavani, Oct 22, 2021, 6:50 AM IST

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಹೊಸದಿಲ್ಲಿ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಬುಧವಾರದಿಂದ ಆರಂಭವಾಗಿರುವ “ಮಾಸ್ಕೋ ಫಾರ್ಮ್ಯಾಟ್‌’ ಅಡಿಯಲ್ಲಿ ನಡೆದ ಸಮಾಲೋಚನ  ಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರತಿನಿಧಿಗಳು, ಸಭೆಯ ಮೊದಲ ದಿನವೇ ತಾಲಿಬಾನಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಅಧಿಕಾರಿಗಳ ನಿಯೋಗಕ್ಕೆ ಭಾರತದ ವಿದೇ ಶಾಂಗ ಇಲಾಖೆಯ ಪಾಕಿಸ್ಥಾನ- ಅಫ್ಘಾನಿಸ್ಥಾನ ವಿಭಾಗದ ಜಂಟಿ ಕಾರ್ಯದರ್ಶಿಯಾಗಿರುವ ಜೆ.ಪಿ. ಸಿಂಗ್‌ ನೇತೃತ್ವ ವಹಿಸಿದ್ದರೆ, ತಾಲಿಬಾನಿ ಗಳ ನಿಯೋಗಕ್ಕೆ ಅಫ್ಘಾನಿಸ್ಥಾನದ ಉಪ ಪ್ರಧಾನಿ ಅಬ್ದುಲ್‌ ಸಲಾಂ ಅನಾಫಿ ಮುಂದಾಳತ್ವ ವಹಿಸಿ ದ್ದರು. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಅಫ್ಘಾನಿಸ್ಥಾನದ “ಟೋಲೋ ನ್ಯೂಸ್‌’ಗೆ ನೀಡಿರುವ ಸಂದರ್ಶ ನದಲ್ಲಿ ತಾಲಿಬಾನ್‌ ವಕ್ತಾರ ಝಬೀ ವುಲ್ಲಾ ಮುಜಾ ಹಿದೀನ್‌ ವಿವರಣೆ ನೀಡಿದ್ದಾನೆ. ಸಭೆಯಲ್ಲಿ, ಅಫ್ಘಾನಿಸ್ಥಾನಕ್ಕೆ ಹಲವಾರು ದಶಕಗಳಿಂದ ನೀಡುತ್ತಾ ಬಂದಿರುವ ಮಾನ ವೀಯ ಹಾಗೂ ಮೂಲಸೌಕರ್ಯಗಳ ಸೇವೆ ಮುಂದುವರಿಸಲು ಭಾರತ ಆಸಕ್ತಿ ಹೊಂದಿರುವುದಾಗಿ ತಾಲಿಬಾನಿಗಳಿಗೆ ಮನ ದಟ್ಟು ಮಾಡಲಾಯಿತು. ಇದಕ್ಕೆ ತಾಲಿಬಾನಿಗಳ ಸಹಕಾರ ಬೇಕೆಂದು ಭಾರತ ಮನವಿ ಮಾಡಿದೆ. ಎರಡೂ ದೇಶಗಳ ಬಾಂಧವ್ಯಾಭಿವೃದ್ಧಿಗೆ ಪರಸ್ಪರ ಅಗತ್ಯ ಸಹಕಾರ ನೀಡುವುದು ಹಾಗೂ ಇತರ ನೆರೆ ರಾಷ್ಟ್ರಗಳ ರಾಜತಾಂತ್ರಿಕ ಹಾಗೂ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಶ್ರಮಿಸುವ ಬಗ್ಗೆ ಎರಡೂ ಕಡೆಯ ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿವೆ ಎಂದು ಆತ ಹೇಳಿದ್ದಾನೆ.

ಏನಿದು “ಮಾಸ್ಕೋ ಫಾರ್ಮ್ಯಾಟ್‌’?:

ಅಫ್ಘಾನಿಸ್ಥಾನದ ವಿದ್ಯಮಾನಗಳನ್ನು, ಸಮಸ್ಯೆಗಳನ್ನು ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವ ಉದ್ದೇಶ ದಿಂದ, ರಷ್ಯಾ, ಅಫ್ಘಾನಿಸ್ಥಾನ, ಭಾರತ, ಇರಾನ್‌, ಚೀನಾ, ಪಾಕಿಸ್ಥಾನ ರಾಷ್ಟ್ರಗಳು ಸೇರಿ, 2017ರಲ್ಲಿ ಮಾಸ್ಕೋ ಫಾರ್ಮ್ಯಾಟ್‌ ಎಂಬ ವೇದಿಕೆಯನ್ನು ರಚಿಸಲಾಗಿದೆ. ಆಗಿನಿಂದ ಇಲ್ಲಿಯವರೆಗೆ ಮಾಸ್ಕೋದಲ್ಲಿ ಹಲವಾರು ಸುತ್ತಿನ ಸಭೆಗಳನ್ನು ನಡೆಸ ಲಾಗಿದೆ. ಅಫ್ಘಾನಿಸ್ಥಾನದಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಮಾದರಿಯ ಸಭೆ ನಡೆದಿರುವುದು ಇದೇ ಮೊದಲು.

ಟಾಪ್ ನ್ಯೂಸ್

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!-ವಿಡಿಯೋ ವೈರಲ್‌

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.