ದುಬೈ: ಕಷ್ಟಕಾಲದಲ್ಲಿ ದೊರೆತ ಚಿನ್ನ & ಹಣದ ಇದ್ದ ಚೀಲವನ್ನು ಹಸ್ತಾಂತರಿಸಿದ ಭಾರತೀಯ

Team Udayavani, Sep 15, 2020, 10:35 PM IST

James-Gupta

ದುಬೈ: ನಿರುದ್ಯೋಗಿ ಯುವಕನೊಬ್ಬನಿಗೆ ನಗದು ಮತ್ತು ಚಿನ್ನ ತುಂಬಿದ ಚೀಲವೊಂದು ಸಿಗುತ್ತದೆ. ಅದಕ್ಕೆ ವಾರಸುದಾರರಿಲ್ಲ. ಕಲ್ಪಿಸಿಕೊಳ್ಳಿ ಅವನು ಏನು ಮಾಡಬಹುದು?

ತಟ್ಟನೆ ಬರುವ ಮೊದಲ ಆಲೋಚನೆ ಎಂದರೆ ನಿಧಿಯನ್ನು ಎತ್ತಿಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಾನೆ ಎಂಬುದು. ಆದರೆ ದುಬೈನಲ್ಲಿ ನೆಲೆಸಿರುವ ಭಾರತೀಯ ವಲಸಿಗ ರಿತೇಶ್‌ ಜೇಮ್ಸ್ ಗುಪ್ತಾ ಅವರು ಹಾಗೆ ಮಾಡಿಲ್ಲ.‌

ದುಬೈನ ಬ್ಯಾಂಕರ್‌ ಗುಪ್ತಾ (ಈಗ ಉದ್ಯೋಗಿ) 14,000 ಡಾಲರ್‌ ಮತ್ತು 200,000 ಡಾಲರ್‌ ಮೌಲ್ಯದ ಚಿನ್ನಾಭರಣ ಮತ್ತು ಮೂರು ಅಮೆರಿಕನ್‌ ಪಾನ್ಪೋರ್ಟ್‌ ಹೊಂದಿರುವ ಚೀಲವನ್ನು ಅದರ ಮಾಲಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಈ ಸಂದರ್ಭ ಮಾಧ್ಯಮಗಳ ಮಂದಿ ಅವರನ್ನು ಸುತ್ತುವರೆದು ಪ್ರಶ್ನೆಗಳನ್ನು ಕೇಳಿದ ಸಂದರ್ಭ ಮಾತನಾಡಿದ ಅವರು, ಚೀಲವನ್ನು ಇಟ್ಟುಕೊಳ್ಳಬೇಕು ಎಂಬ ಒಂದು ಆಲೋಚನೆ ನನ್ನ ತಲೆಯಲ್ಲಿ ಹೊಳೆಯಲೇ ಇಲ್ಲ. ಅದನ್ನು ಅದರ ಮಾಲಕರಿಗೆ ಹಿಂದಿರುಗಿಸದೇ ನಾನು ಬೇರೆ ಯಾವ ರೀತಿ ಬಳಸಬಹುದು ಏನಾದರೂ ಮಾಡಬಹುದೇ ಎಂಬ ಆಲೋಚನೆ ಮನಸ್ಸಲ್ಲಿ ಇರಲಿಲ್ಲ ಎಂದು ಗುಪ್ತಾ ಗಲ್ಫ್‌ ನ್ಯೂಸ್‌ಗೆ ತಿಳಿಸಿದ್ದಾರೆ.

ಗುಪ್ತಾ ಅವರು ಕೆಲಸ ಕಳೆದುಕೊಂಡ ಒಂದು ವಾರದ ನಂತರ ಅವರ ಕಣ್ಣಿಗೆ ಈ ಸಂಪತ್ತಿನ ಚೀಲ ಬಿದ್ದಿದೆ. ಉದ್ಯೋಗ ಕಳೆದುಕೊಂಡ ಕಲ್ಕತಾದ 37 ವರ್ಷದ ಮಾಜಿ ಬ್ಯಾಂಕರ್‌ಗೆ ತುಂಬಾ ಕಷ್ಟದ ಸಮಯವಾಗಿತ್ತು. ಅದನ್ನು ದೇವರ ಉಡುಗೊರೆ ಎಂದು ಪರಿಗಣಿಸಿ ಚೀಲವನ್ನು ಇಟ್ಟುಕೊಳ್ಳಬಹುದಿತ್ತು ಎಂಬ ಆ ನಿರ್ಧಾರ ನನ್ನಲ್ಲಿ ಬರಲೇ ಇಲ್ಲ. ನಾನು ಆಂತಹ ನಿರ್ಧಾರದೊಂದಿಗೆ ಎಂದಿಗೂ ಬದುಕಲಾರೆ ಎಂದಿದ್ದಾರೆ.

ಎಲ್ಲಿತ್ತು ಚೀಲ
ದುಬೈನಲ್ಲಿ ವಾಸಿಸುತ್ತಿರುವ ಗುಪ್ತಾ, ಅವರ ಪತ್ನಿ ಅಪರೂಪಾ ಗಂಗೂಲಿ ಮತ್ತು ಅವರ ಮೂರು ವರ್ಷದ ಮಗ ವಿವಾನ್‌ ಐಡೆನ್‌ ಗುಪ್ತಾ ಅವರೊಂದಿಗೆ ರಾತ್ರಿ 10.30ರ ಸುಮಾರಿಗೆ ಮೆಟ್ರೋ ನಿಲ್ದಾಣದ ಬಳಿಯ ಅಲ್‌ ಕುಸೈಸ್‌ನ ಸಲೂನೆಗೆ ಭೇಟಿ ನೀಡಿದ್ದರು. ಬಳಿಕ ಹಿಂತಿರುಗಿದಾಗ ತನ್ನ ಕಾರ್‌ನ ಬಾನೆಟ್‌ನಲ್ಲಿ ಚೀಲ ಇರುವುದು ಪತ್ತೆಯಾಗಿದೆ. ಅದನ್ನು ಕಂಡು ಗೊಂದಲಕ್ಕೊಳಗಾಗಿದ್ದನು. ಅದನ್ನು ಏನು ಮಾಡಬೇಕೆಂದು ತಿಳಿಯದೇ ಚೀಲದ ವಾರಸುದಾರರು ಯಾರಾದರೂ ಬಂದು ಚೀಲವನ್ನು ಕೊಂಡುಹೋಗುತ್ತಾರೆಯೇ ಎಂದು ಸುಮಾರು 30 ನಿಮಿಷಗಳ ಕಾಲ ಕಾಯುತ್ತಿದ್ದರು. ಆದರೆ ಯಾರ ಸುಳಿವೂ ಇರಲಿಲ್ಲ.

ನಂತರ ಅವರು ಯಾವುದೇ ಗುರುತು ಅಥವಾ ಸಂಪರ್ಕ ವಿವರಗಳನ್ನು ಪರೀಕ್ಷಿಸುವ ಕಾರಣಕ್ಕೆ ಚೀಲವನ್ನು ತೆರೆಯಲು ನಿರ್ಧರಿಸಿದ್ದರು. ಆದರೆ ಚೀಲದ ಒಳಗೆ ಏನಿದೆ ಎಂದು ನೋಡಿ ಬೆರಗಾದರು. ಯುಎಸ್‌ ಡಾಲರ್‌ಗಳ ಹಲವು ನೋಟುಗಳ ಸಂಗ್ರಹಗಳು ಮತ್ತು ಬಹಳಷ್ಟು ಚಿನ್ನಾಭರಣಗಳು, ಮೂರು ಅಮೆರಿಕನ್‌ ಪಾಸ್‌ಪೋರ್ಟ್‌ಗಳು ಇದ್ದವು.

“ದೇವರು ಈ ಕಷ್ಟದ ಸಮಯದಲ್ಲಿ ನಮ್ಮನ್ನು ಪರೀಕ್ಷಿಸುತ್ತಿದ್ದಾನೆ
ಚೀಲದ ಮಾಲೀಕರನ್ನು ಹೇಗೆ ಪತ್ತೆ ಹಚ್ಚುವುದಿ ಎಂಬುದು ನನಗೆ ಹೊಳೆದೇ ಇಲ್ಲ. ಆದರೆ ಹೆಂಡತಿ ತಕ್ಷಣವೇ ಪೊಲೀಸರ ಬಳಿಗೆ ಹೋಗಬೇಕೆಂದು ಹೇಳಿದಳು. “ದೇವರು ಈ ಕಷ್ಟದ ಸಮಯದಲ್ಲಿ ನಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಆದ್ದರಿಂದ ಅದನ್ನು ಹಿಂದಿರುಗಿಸಲು ವಿಫ‌ಲರಾಗಬೇಡಿ ‘ ಎಂದು ಪತ್ನಿ ಹೇಳಿದ್ದಾಗಿ ಗುಪ್ತಾ ಮಾಹಿತಿ ನೀಡಿದ್ದಾರೆ.

ಮರುದಿನ, ಗುಪ್ತಾ ಅವರಿಗೆ ಚೀಲದ ಮಾಲಕರಿಂದ ಕರೆ ಬಂತು. ಅವನ ಹೆಸರು ಬಾಬಿ ಹಮೀದ್‌, ಬಾಂಗ್ಲಾದೇಶದ ಅಮೆರಿಕನ್‌. ಹಮೀದ್‌ ಅವರು ಗುಪ್ತಾ ಅವರಿಗೆ ಕರೆ ಮಾಡಿ ಉತ್ತಮ ನಡೆ ಮತ್ತು ಪ್ರಾಮಾಣಿಕತೆಗಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಆದರೆ ಬ್ಯಾಗಿನ ವಾರಸುದಾರರು ಅಮೆರಿಕಕ್ಕೆ ಹಿಂದಿರುಗಿಯಾಗಿತ್ತು. ಕಳೆದ 45 ವರ್ಷಗಳಿಂದ ಇಲ್ಲಿ ವಾಸವಾಗಿರುವ ತನ್ನ ಹೆತ್ತವರನ್ನು ಭೇಟಿ ಮಾಡಲು ಅವರು ಕುಟುಂಬದೊಂದಿಗೆ ದುಬೈಗೆ ಬಂದಿದ್ದರು. ಹೀಗಾಗಿ ಅವರನ್ನು ಭೇಟಿಯಾಗಲು ಗುಪ್ತಾ ಅವರಿಗೆ ಸಾಧ್ಯವಾಗಿಲ್ಲ.

ಗುಪ್ತಾರಿಗೆ ಉದ್ಯೋಗವೂ ದೊರೆಯಿತು
ಇಷ್ಟೆಲ್ಲಾ ಪ್ರಾಮಾಣಿಕ ಕಾರ್ಯಗಳು ನಡೆದ ಕೆಲವು ದಿನಗಳ ಬಳಿಕ ಗುಪ್ತಾ ಅವರಿಗೆ ಬ್ಯಾಂಕಿನಿಂದ ಹೊಸ ಉದ್ಯೋಗ ಪ್ರಸ್ತಾವ ಬಂದಿದೆ.ಈ ವೇಳೆ ಅವರ ಸಂಭ್ರಮವು ದ್ವಿಗುಣಗೊಂಡಿತು. “ಕಷ್ಟದ ಸಮಯದಲ್ಲಿ ಇದು ದೇವರಿಂದ ನನಗೆ ದೊರೆತ ಪ್ರತಿಫ‌ಲ ಎಂದು ನಾನು ನಂಬುತ್ತೇನೆ. ಏಕೆಂದರೆ ನನಗೆ ಉತ್ತಮ ಉದ್ಯೋಗದ ಪ್ರಸ್ತಾವ ಸಿಕ್ಕಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನ ಬಗ್ಗೆ ಹೆಮ್ಮೆಪಡುವಾಗ ನಾನು ಸಂತೋಷವನ್ನು ಅನುಭವಿಸುತ್ತೇನೆ. ಭಾರತದಿಂದ ನನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ನನಗೆ ಕರೆಗಳು ಬರುತ್ತಿವೆ. ನನ್ನ ಪ್ರಾಮಾಣಿಕತೆಗೆ ಅಭಿನಂದನೆಗಳು ಎಂದರು ಗುಪ್ತಾ ಅವರು.

ಅಲ್‌ ಖುಸೈಸ್‌ ಪೊಲೀಸ್‌ ಠಾಣೆಯ ನಿರ್ದೇಶಕ ಬ್ರಿಗೇಡಿಯರ್‌ ಯೂಸೆಫ್ ಅಬ್ದುಲ್ಲಾ ಸಲೀಮ್‌ ಅಲ್‌ ಅಡಿಡಿ ಗುಪ್ತಾ ಅವರಿಗೆ ಮೆಚ್ಚುಗೆಯ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ. ದುಬೈ ಪೊಲೀಸರಿಂದ ಇಷ್ಟು ದೊಡ್ಡ ಮನ್ನಣೆ ಪಡೆದ ನಂತರ ಗುಪ್ತಾ ಅವರ ಸಂತೋಷಕ್ಕೆ ಯಾವುದೇ ಮಿತಿಯಿರಲಿಲ್ಲ. ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು ಗೌರವಿಸುವ ಅವಕಾಶವನ್ನು ದುಬೈ ಪೊಲೀಸರೂ ಕಳೆದುಕೊಳ್ಳಲಿಲ್ಲ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.