ಭಾರತ ಮೂಲದ ಬಾಲಕನ ಮೌಂಟ್‌ಎವರೆಸ್ಟ್ ಸಾಧನೆ
Team Udayavani, Dec 6, 2022, 7:10 AM IST
ಸಿಂಗಾಪುರ: ಭಾರತ ಮೂಲದ ಆರು ವರ್ಷದ ಬಾಲಕ ಓಂ ಮದನ್ ಗಾರ್ಗ್, ನೇಪಾಲದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಪರ್ವತಾರೋಹಣ ಮಾಡಿದ ಸಿಂಗಾಪುರದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿ¨ªಾರೆ. ಇದು ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಓಂ ಮದನ್ ಗಾರ್ಗ್ ತಮ್ಮ ಪೋಷಕರೊಂದಿಗೆ ಪರ್ವತಾರೋಹಣ ಆರಂಭಿಸಿದ್ದರು. 10 ದಿನಗಳಲ್ಲಿ 65 ಕಿ.ಮೀ. ಟ್ರೆಕ್ಕಿಂಗ್ ಮಾಡಿ, 5,364 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್‌ನ ದಕ್ಷಿಣದ ಬೇಸ್ ಕ್ಯಾಂಪ್ ತಲುಪಿದ್ದರು. ಓಂ ಮದನ್ ಎರಡೂವರೆ ವರ್ಷ ವಿರುವಾಗಲೇ ಆತನನ್ನು ಪೋಷಕರು ವಿಯೆಟ್ನಾಂ, ಥೈಲ್ಯಾಂಡ್, ಲಾವೋಸ್‌ಗೆ ಪ್ರವಾಸಕ್ಕೆ ಕರೆದೊಯ್ದಿದ್ದರು.