ಭಾರತೀಯರು ಸೇರಿ 23 ಸಿಬ್ಬಂದಿ ಇದ್ದ ತೈಲಟ್ಯಾಂಕರ್ ಹಡಗು ಇರಾನ್ ವಶ

Team Udayavani, Jul 20, 2019, 1:18 PM IST

ದುಬೈ/ವಾಷಿಂಗ್ಟನ್:ಭಾರತೀಯ ಪ್ರಜೆಗಳು ಸೇರಿದಂತೆ 23 ಸಿಬ್ಬಂದಿಯನ್ನೊಳಗೊಂಡಿದ್ದ ಬ್ರಿಟನ್ ಮೂಲದ ತೈಲ ಟ್ಯಾಂಕರ್ ಅನ್ನು ಹೊತ್ತೊಯ್ಯುತ್ತಿದ್ದ ಹಡಗನ್ನು ಇರಾನ್ ವಶಕ್ಕೆ ಪಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ತೈಲ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ಹಡಗಿನ ಕುರಿತು ಶೀಘ್ರವಾಗಿ ಮಾಹಿತಿ ಪಡೆಯಬೇಕಾಗಿದೆ. ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಹಡಗು ದಿಢೀರ್ ಆಗಿ ಇರಾನ್ ವಶವಾಗಿದೆ.

ಹಡಗು ನಿಯಂತ್ರಣ ನಮ್ಮ ಸಿಬ್ಬಂದಿಯ ಕೈತಪ್ಪಿ ಹೋಗಿದೆ, ಅಲ್ಲದೇ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತೈಲ ಟ್ಯಾಂಕರ್ ಆಪರೇಟರ್ ಸ್ಟೆನಾ ಬುಲ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್ ಸ್ಟೇಟ್ ನ್ಯೂಸ್ ಏಜೆನ್ಸಿ ಐಆರ್ ಎನ್ ಎ ಪ್ರಕಾರ, ಹಡಗು ದಿಕ್ಕು ತಪ್ಪಿ ಬರುತ್ತಿದ್ದಾಗ, ನಮ್ಮ ಕರಾವಳಿ ಪಡೆ ಎಚ್ಚರಿಕೆಯನ್ನು ನೀಡಿತ್ತು. ಆದರೆ ಅದನ್ನು ನಿರ್ಲಕ್ಷಿಸಿರುವುದಾಗಿ ತಿಳಿಸಿದೆ. ಈ ಘಟನೆ ಬಗ್ಗೆ ನಾವು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಬ್ರಿಟನ್ ಹೇಳಿದೆ.

ಇರಾನ್ ಮತ್ತು ಅಮೆರಿಕದ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ಸಂಘರ್ಷ ನಡೆಯುತ್ತಿದ್ದು, ಏತನ್ಮಧ್ಯೆ ಅಮೆರಿಕದ ನೌಕಾಪಡೆಯ ಹಡಗೊಂದು ಇರಾನ್ ನ ಡ್ರೋನ್ ಅನ್ನು ಹೊಡೆದುರುಳಿಸಿತ್ತು.

ಯುಎಸ್ ಎಸ್ ಬಾಕ್ಸರ್ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿತ್ತು.

ಆದರೆ ನಮ್ಮ ಯಾವುದೇ ಡ್ರೋನ್ ಗೆ ಹಾನಿಯಾಗಿಲ್ಲ ಎಂದು ಇರಾನ್ ಹೇಳಿಕೊಂಡಿತ್ತು. ಅಮೆರಿಕ ತನ್ನದೇ ಡ್ರೋನ್ ಅನ್ನು ತಪ್ಪಾಗಿ ಹೊಡೆದುರುಳಿಸಿರಬಹುದು ಎಂದು ಇರಾನ್ ಸೇನಾ ಪಡೆಯ ಬ್ರಿಗೇಡಿಯರ್ ಶೆಕಾರ್ಚಿ ತಿರುಗೇಟು ನೀಡಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ