ಸ್ವಿಸ್ ಬ್ಯಾಂಕ್‌ನಲ್ಲಿ ಕಡಿಮೆಯಾಗುತ್ತಿದೆ ಭಾರತೀಯರ ಹಣ
Team Udayavani, Jul 1, 2019, 5:10 AM IST
ಜ್ಯೂರಿಚ್: ಒಂದೆಡೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶ್ರಮಿಸುತ್ತಿದ್ದರೆ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣವೂ ಕರಗುತ್ತಿದೆ. ಸ್ವಿಸ್ ಬ್ಯಾಂಕ್‌ನಲ್ಲಿ ಅತೀ ಹೆಚ್ಚು ಹಣ ಠೇವಣಿ ಇಟ್ಟ ದೇಶಗಳ ಪಟ್ಟಿಯನ್ನು ಸ್ವಿಸ್ ಬ್ಯಾಂಕ್‌ಗಳು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಭಾರತ ಕಳೆದ ವರ್ಷಕ್ಕೆ ಹೋಲಿಸಿದರೆ 1 ಸ್ಥಾನ ಕುಸಿದು 74ಕ್ಕೆ ತಲುಪಿದೆ. ಇಂಗ್ಲೆಂಡ್ ಕಳೆದ ವರ್ಷದಂತೆಯೇ ಒಂದನೇ ಸ್ಥಾನದಲ್ಲಿ ಮುಂದುವರಿದಿದೆ. 2017ರಲ್ಲಿ ಭಾರತ 88ನೇ ಸ್ಥಾನದಲ್ಲಿತ್ತು.
ಅಂತಾರಾಷ್ಟ್ರೀಯ ಸಮುದಾಯಕ್ಕೆ ಹೋಲಿ ಸಿದರೆ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಹೊಂದಿರುವ ಠೇವಣಿ ಪ್ರಮಾಣ ಅತ್ಯಂತ ಕಡಿಮೆ ಇದೆ. ಒಟ್ಟು ಶೇ. 0.07ರಷ್ಟು ಮೊತ್ತ ಮಾತ್ರ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಯದ್ದಾಗಿದೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು, ಅನಂತರದಲ್ಲಿ ಅಮೆರಿಕ, ವೆಸ್ಟ್ ಇಂಡೀಸ್, ಫ್ರಾನ್ಸ್ ಹಾಗೂ ಹಾಂಕಾಂಗ್ ಇವೆ. ಮೊದಲ ಐದು ರಾಷ್ಟ್ರಗಳು ಒಟ್ಟು ಶೇ. 50ರಷ್ಟು ಮೊತ್ತವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಶೇಖರಿಸಿವೆ. ಇನ್ನು ಪ್ರಮುಖ 15 ದೇಶಗಳು ಶೇ. 75ರಷ್ಟು ಮೊತ್ತದ ಪಾಲನ್ನು ಹೊಂದಿವೆ. ಸ್ವಿಸ್ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಎಲ್ಲ ಹಣವೂ ತೆರಿಗೆ ತಪ್ಪಿಸಿದ ಹಣವಾಗಿರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್ನಲ್ಲಿ ಪೋಸ್ಟ್, ಲೈಕ್ ರಿಪ್ಲೈ ಗೆ ಅವಕಾಶ
Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್ ಮೇಲೆ ಹಲವು ರಾಷ್ಟ್ರಗಳ ಒತ್ತಡ