ಗಗನಮುಖಿಯಾದ ಜ್ವಾಲಾಮುಖಿ
Team Udayavani, Jun 22, 2020, 6:10 AM IST
ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿರುವ ಹಾಗೂ ಇಂಡೋನೇಷ್ಯಾವನ್ನು ಪದೇ ಪದೆ ಕಾಡುವ ಮೆರಾಪಿ ಪರ್ವತದಲ್ಲಿ (ಮೌಂಟ್ ಮೆರಾಪಿ) ಭಾನುವಾರ ಎರಡು ಬಾರಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಬೂದು ಬಣ್ಣದ ಹೊಗೆ ಗಗನ ಚುಂಬಿಸಿದೆ.
ಸುಮಾರು ಏಳು ನಿಮಿಷಗಳ ಕಾಲ ಸಂಭವಿಸಿದ ಜ್ವಾಲಾಮುಖಿ ಸ್ಫೋಟಕ್ಕೆ ಉಕ್ಕಿದ ದಟ್ಟ ಹೊಗೆ ಆರು ಸಾವಿರ ಮೀಟರ್ ಎತ್ತರ ತಲುಪಿ ಮೋಡಗಳನ್ನು ಮೀರಿ ಹೋಗಿತ್ತು ಎಂದು ಇಂಡೋನೇಷ್ಯಾದ ತಜ್ಞರು ಹೇಳಿದ್ದಾರೆ.
ಹಾಗೇ ಈ ಸ್ಫೋಟದ ಸದ್ದು ಪರ್ವತದಿಂದ ಮೈಲುಗಳಷ್ಟು ದೂರದಲ್ಲಿರುವ ಊರುಗಳಿಗೂ ಕೇಳಿಸಿದ್ದು, ಪರಿಣಾಮ ಪ್ರಮುಖ ದ್ವೀಪವಾಗಿರುವ ಜಾವಾದಲ್ಲಿನ ಗ್ರಾಮಗಳ ನಾಗರಿಕರು ಬೆಚ್ಚಿಬಿದ್ದಿದ್ದಾರೆ.
ಜನಜೀವನದ ಮೇಲೆ ಪರಿಣಾಮ
ಜ್ವಾಲಾಮುಖಿಯಿಂದಾಗಿ ಅಲ್ಲಿನ ಸಾಂಸ್ಕೃತಿಕ ರಾಜಧಾನಿ ಯೋಗ್ಯಾಕಾರ್ತದ ಸಮೀಪವಿರುವ ಮೆರಾಪಿ ಪರ್ವತದ ಸುತ್ತಲ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ಗ್ರಾಮಗಳ ಜನರಿಗೆ ಮೂರು ಕಿ.ಮೀ. ವ್ಯಾಪ್ತಿಯಿಂದ ಆಚೆ ಹೋಗುವಂತೆ ಮತ್ತು ಲಾವಾದ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಜ್ವಾಲಾಮುಖಿ ಕುರಿತು ಸಂಬಂಧಿಸಿದ ಸಂಸ್ಥೆಯು ಸ್ಥಳೀಯರಿಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು