ಎಲ್ಲೆಡೆ ವಿದ್ಯಾರ್ಥಿಗಳ ಪ್ರತಿಭಟನೆ

Team Udayavani, Mar 16, 2019, 12:30 AM IST

ಬರ್ಲಿನ್‌: ಸ್ವೀಡನ್‌ನಲ್ಲಿ ತಾಪಮಾನ ವೈಪರೀತ್ಯ ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಶುಕ್ರವಾರ ತರಗತಿಗೆ ಹಾಜರಾಗದೇ ಪ್ರತಿಭಟಿಸಿದ್ದಾರೆ. 16 ವರ್ಷದ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಈ ಹೋರಾಟದ ರೂವಾರಿ. ಈಕೆಯ ನೇತೃತ್ವದಲ್ಲಿ ಕಳೆದ ವರ್ಷ ಸ್ವೀಡನ್‌ ಸಂಸತ್ತಿನ ಎದುರು ಪ್ರತಿಭಟನೆ ನಡೆಸಲಾಗಿತ್ತು. ಅಂದಿನಿಂದಲೂ ಪ್ರತಿ ಶುಕ್ರವಾರ ಒಂದಲ್ಲ ಒಂದು ಕಡೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಥನ್‌ಬರ್ಗ್‌ರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೂ ಶಿಫಾರಸು ಮಾಡಲಾಗಿತ್ತು. ಈಗ ಪಾದಯಾತ್ರೆ ನಡೆಸಿ, ಇಲ್ಲವಾದರೆ ನಂತರ ಈಜಾಡಿ ಎಂಬುದು ಗ್ರೆಟಾ ಘೋಷವಾಕ್ಯ.ಬರ್ಲಿನ್‌ನಲ್ಲಿ ಸುಮಾರು 20 ಸಾವಿರ ಪ್ರತಿಭಟನೆಕಾರರು ಸೇರಿದ್ದರು.

ಇದೇ ವೇಳೆ ಭಾರತದಲ್ಲೂ ಪ್ರತಿಭಟನೆ ನಡೆದಿದ್ದು, ದಿಲ್ಲಿಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಹಿಂದಿನ ಚಳಿಗಾಲದ ವೇಳೆ ದಿಲ್ಲಿಯ ವಾತಾವರಣವನ್ನು ಶುದ್ಧಗೊಳಿಸುವುದಾಗಿ ರಾಜಕಾರಣಿಗಳು ಹೇಳಿದ್ದರು. ಆದರೆ ಈಗಲೂ ವಾತಾವರಣ ಹಾಗೆಯೇ ಇದೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ದಿಲ್ಲಿಯಲ್ಲಿ ಫ್ರೈಡೇಸ್‌ ಫಾರ್‌ ಫ್ಯೂಚರ್‌ (ಭವಿಷ್ಯಕ್ಕಾಗಿ ಶುಕ್ರವಾರ) ಎಂಬ ಘೋಷವಾಕ್ಯದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ