ನಮ್ಮಲ್ಲಿ ಬಂಡವಾಳ ಹೂಡಬನ್ನಿ

ಸೌದಿ ಹೂಡಿಕೆದಾರರಿಗೆ ಮೋದಿ ಆಹ್ವಾನ ತೈಲ ಕ್ಷೇತ್ರದಲ್ಲಿ 7 ಲ.ಕೋ.ರೂ. ಹೂಡಿಕೆ

Team Udayavani, Oct 30, 2019, 6:50 AM IST

r-37

ಪ್ರಧಾನಿ ಮೋದಿ ಅವರು ಸೌದಿ ದೊರೆ ಸಲ್ಮಾನ್‌ರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ರಿಯಾದ್‌: ದೇಶದ ಅರ್ಥ ವ್ಯವಸ್ಥೆಯನ್ನು ಐದು ಶತಕೋಟಿ ಡಾಲರ್‌ಗೆ ಏರಿಸುವ ಸರಕಾರದ ಸಂಕಲ್ಪಕ್ಕೆ ಪೂರಕವಾಗಿ ಅನಿಲ ಮತ್ತು ಪೆಟ್ರೋಲಿಯಂ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದೆ ಬರಬೇಕು ಎಂದು ಸೌದಿ ಅರೇಬಿಯಾದ ಕಂಪೆನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಮಂಗಳವಾರ ಆರಂಭವಾಗಿರುವ 3 ದಿನಗಳ ಫ್ಯೂಚರ್‌ ಇನ್ವೆಸ್ಟ್‌ಮೆಂಟ್‌ ಇನಿಶಿ ಯೇಟಿವ್‌ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅವರು ಈ ವಿಚಾರ ಪ್ರಸ್ತಾವಿಸಿದ್ದಾರೆ. ಅನಿಲ, ಪೆಟ್ರೋಲಿಯಂ ಕ್ಷೇತ್ರಗಳಲ್ಲಿ 7.08 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ಮಾಡುವ ಗುರಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಕಂಪೆನಿಗಳಿಗೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕೌಶಲಯುಕ್ತ ಸಿಬಂದಿಯ ಅಗತ್ಯ ಪೂರೈಸಲು 40 ಕೋಟಿ ಮಂದಿಗೆ ತರಬೇತಿ ನೀಡಲಾಗುತ್ತದೆ. ಸೌದಿ ಅರೇಬಿಯಾದ ತೈಲ ಉತ್ಪಾದನ ಸಂಸ್ಥೆ ಅರಾಮೊRà ದೇಶದ ತೈಲೋತ್ಪಾದನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದು ಸಂತಸ ತಂದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಸ್ಟಾರ್ಟಪ್‌ ಮೂಲ ಸೌಕರ್ಯಕ್ಕಾಗಿ ವಿಶ್ವದಲ್ಲಿಯೇ 3ನೇ ಅತ್ಯಂತ ದೊಡ್ಡ ವ್ಯವಸ್ಥೆ ಭಾರತದಲ್ಲಿ ಇದೆ ಎಂದಿದ್ದಾರೆ.

ಒಂದೇ ವ್ಯವಸ್ಥೆ
ಚರಿತ್ರೆಯ ದಿನಗಳಿಂದಲೂ ಎರಡು ದೇಶಗಳು ಉತ್ತಮ ಸೌಹಾರ್ದಯುತ ಬಾಂಧವ್ಯ ಹೊಂದಿವೆ. ಹಾಲಿ ಕಾಲಘಟ್ಟದಲ್ಲಿಯೂ ವ್ಯೂಹಾತ್ಮಕ ಬಾಂಧವ್ಯ ಕಾಪಿಟ್ಟುಕೊಳ್ಳಲು ಆ ಉತ್ತಮ ತಳಹದಿ ನೆರವಾಗಿದೆ ಎಂದು ಮೋದಿ ಹೇಳಿದ್ದಾರೆ.

1.06 ಲ.ಕೋ.ರೂ. ಮೊತ್ತದ 23 ಒಪ್ಪಂದಗಳಿಗೆ ಸಹಿ
ರಿಯಾದ್‌ನಲ್ಲಿ ಮಂಗಳವಾರ ಆರಂಭವಾಗಿರುವ, ಮರುಭೂಮಿಯ ದಾವೋಸ್‌ ಆರ್ಥಿಕ ಶೃಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 3 ದಿನಗಳ ಶೃಂಗದಲ್ಲಿ 1.06 ಲಕ್ಷ ಕೋಟಿ ರೂ. ಮೌಲ್ಯದ 23 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಅದಕ್ಕೆ ಆಸಕ್ತಿ ವಹಿಸಿದ್ದಾರೆ. 2030ರ ಸೌದಿ ದಿಕ್ಸೂಚಿ ದಾಖಲೆಯ ಅನ್ವಯ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಕಾರ್ಯಕ್ರಮದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಸೇರಿದಂತೆ ಹಲವು ಮಂದಿ ಭಾರತದ ಮತ್ತು ಇತರ ದೇಶಗಳ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಭಾರತೀಯರಿಗೆ 2ನೇ ಮನೆ: ಪ್ರಧಾನಿ ಬಣ್ಣನೆ
ಕೋಟ್ಯಂತರ ಭಾರತೀಯರಿಗೆ ಸೌದಿ ಅರೇಬಿಯಾ ಎನ್ನುವುದು 2ನೇ ಮನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಅರಬ್‌ ನ್ಯೂಸ್‌’ ಜತೆಗೆ ಮಾತನಾಡಿದ ಅವರು, ಲಕ್ಷಾಂತರ ಮಂದಿ ಭಾರತೀಯರು ಪ್ರತಿ ವರ್ಷ ಹಜ್‌ ಮತ್ತು ಉಮ್ರಾ ಯಾತ್ರೆಗೆ ಸೌದಿಗೆ ಆಗಮಿಸುತ್ತಾರೆ ಎಂದಿದ್ದಾರೆ. ಸೌದಿಯಲ್ಲಿರುವ ಭಾರತೀಯರಿಗೆ ಸಂದೇಶ ನೀಡಿದ ಅವರು, ನಿಮ್ಮ ನಿಸ್ವಾರ್ಥ ಮತ್ತು ಕಠಿನ ದುಡಿಮೆಯಿಂದ ಈ ದೇಶವನ್ನು ಶ್ರೀಮಂತಗೊಳಿಸಿದ್ದೀರಿ. ಜತೆಗೆ ಎರಡೂ ದೇಶಗಳ ಬಾಂಧವ್ಯ ವೃದ್ಧಿಗೆ ಕಾರಣರಾಗಿದ್ದೀರಿ ಎಂದಿದ್ದಾರೆ.

ಹೊಸ ಶಕೆಯತ್ತ
ಫೆಬ್ರವರಿಯಲ್ಲಿ 2 ದೇಶಗಳು ಸಹಿ ಹಾಕಿದ ವ್ಯೂಹಾತ್ಮಕ ಸಹಕಾರ ಮಂಡಳಿಯು ಮುಂದಿನ ದಿನಗಳಲ್ಲಿ ಹೊಸ ಮಾದರಿಯ ಸಹಕಾರ ಸ್ಥಾಪಿಸಿಕೊಳ್ಳಲು ನೆರವಾಗಲಿದೆ ಮತ್ತು ಅದರಿಂದ ಎರಡೂ ದೇಶಗಳ ನಡುವಣ ಬಾಂಧವ್ಯದಲ್ಲಿ ವಿಶೇಷ ಅಧ್ಯಾಯ ಆರಂಭವಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಸೌದಿ ಅರೇಬಿಯಾದ 2030ರ ದಿಕ್ಸೂಚಿ ದಾಖಲೆಯಲ್ಲಿನ ಅಂಶಗಳಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.

ವ್ಯೂಹಾತ್ಮಕ ಸಹಕಾರ ಒಪ್ಪಂದ
ಸೌದಿ ಜತೆಗೆ ವ್ಯೂಹಾತ್ಮಕ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ವ್ಯೂಹಾತ್ಮಕ ಸಹಕಾರ ಮಂಡಳಿ ಸ್ಥಾಪನೆಗೆ ಒಪ್ಪಂದ ಮಾಡಿ ಕೊಂಡಿದ್ದಾರೆ. ಇದರಿಂದ ಉಡುಪಿ ಬಳಿಯ ಪಾದೂರಿನ ಭೂಗತ ತೈಲ ಸಂಗ್ರಹಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಕ್ಕೆ ಅನುಕೂಲವಾಗಲಿದೆ. ರುಪೇ ಕಾರ್ಡ್‌ ಅನ್ನು ಸೌದಿ ಅರೇಬಿಯಾದಲ್ಲಿ ಆರಂಭಿಸುವ ಬಗ್ಗೆ, ಸೌದಿಯ ಅಲ್‌ ಜೀರಿ ಕಂಪೆನಿ ಮತ್ತು ಐಒಸಿ ಜತೆಗೆ ಜಂಟಿ ಉದ್ದಿಮೆ ಸ್ಥಾಪಿಸುವ ಬಗ್ಗೆಯೂ ಸಹಿ ಹಾಕಲಾಗಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.