ಆಲ್ ಇಸ್ ವೆಲ್! ಇರಾಕ್ ನಲ್ಲಿ ಅಮೆರಿಕ ಪಡೆ ಮೇಲೆ ಇರಾನ್ ದಾಳಿಗೆ ಟ್ರಂಪ್ ಪ್ರತಿಕ್ರಿಯೆ

ಇರಾನ್ ದಾಳಿಯಲ್ಲಿ ಎಷ್ಟು ಸಾವು ಹಾಗೂ ನಷ್ಟ ಸಂಭವಿಸಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ

Team Udayavani, Jan 8, 2020, 4:14 PM IST

ವಾಷಿಂಗ್ಟನ್: ಅಮೆರಿಕ ವಾಯುಪಡೆ ದಾಳಿಯಲ್ಲಿ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಇರಾನ್ ಬುಧವಾರ ಇರಾಕ್ ನ ಎರಡು ವಾಯುನೆಲೆಯಲ್ಲಿರುವ ಅಮೆರಿಕ ಮೈತ್ರಿಪಡೆಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಲ್ ಇಸ್ ವೆಲ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇರಾಕ್ ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ ಗುರಿಯಾಗಿರಿಸಿಕೊಂಡು 15 ಮಿಸೈಲ್ಸ್ ಗಳ ದಾಳಿ ನಡೆಸಿರುವುದಾಗಿ ಹೇಳಿದ್ದು, ದಾಳಿಯಲ್ಲಿ 80ಕ್ಕೂ ಅಧಿಕ ಅಮೆರಿಕನ್ ಟೆರರಿಸ್ಟ್ (ಸೈನಿಕರು)ಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ ಟಿಲಿವಿಷನ್ ವರದಿ ಮಾಡಿತ್ತು.

ಇರಾನ್ ದಾಳಿಯಲ್ಲಿ ಎಷ್ಟು ಸಾವು ಹಾಗೂ ನಷ್ಟ ಸಂಭವಿಸಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

2018ರ ಡಿಸೆಂಬರ್ ನಲ್ಲಿ ಇರಾಕ್ ನಲ್ಲಿರುವ ಐನ್ ಅಲ್ ಅಸ್ಸಾದ್ ವಾಯು ನೆಲೆಗೆ ಟ್ರಂಪ್  ಭೇಟಿ ನೀಡಿದ್ದರು. ಅಲ್ಲದೇ ಅಲ್ ಇಸ್ ವೆಲ್ ಎಂದು ಶುಭ ಕೋರಿರುವುದಾಗಿ ವರದಿ ವಿವರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ