ಮಿಲಿಟರಿ ಜನರಲ್ ಹತ್ಯೆ- ಅಮೆರಿಕದ ವಿರುದ್ಧ ಪ್ರತಿಕಾರ ನಿಶ್ಚಿತ; ಇರಾನ್ ಪ್ರತಿಜ್ಞೆ
ಅಮೆರಿಕ ಈ ಎಲ್ಲಾ ಧೂರ್ತ ಸಾಹಸಕ್ಕೆ ತಕ್ಕ ಬೆಲೆ ತೆರಲಿದೆ ಎಂದಿರುವ ಇರಾನ್ ವಿದೇಶಾಂಗ ಸಚಿವ ಜಾವೇದ್
Team Udayavani, Jan 3, 2020, 2:24 PM IST
ತೆಹ್ರಾನ್: ಇರಾಕ್ ರಾಜಧಾನಿ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕದ ಸೇನಾಪಡೆ ದಿಢೀರ್ ವೈಮಾನಿಕ ದಾಳಿ ನಡೆಸಿ ಇರಾನ್ ಮಿಲಿಟರಿ ಜನರಲ್ ಖಾಸೀಂ ಸೋಲೈಮನಿಯನ್ನು ಹತ್ಯೆಗೈದಿರುವುದಕ್ಕೆ ತೀಕ್ಷ್ಣ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್ ಶುಕ್ರವಾರ ಪ್ರತಿಜ್ಞೆಗೈದಿದೆ ಎಂದು ವರದಿ ತಿಳಿಸಿದೆ.
ಅಮೆರಿಕ ದಾಳಿಯಲ್ಲಿ ಮಿಲಿಟರಿ ಜನರಲ್ ಸೋಲೈಮನಿ ಹುತಾತ್ಮರಾಗಿದ್ದಾರೆ ಎಂದು ತಿಳಿಸಿರುವ ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.
ಅಮೆರಿಕ ಈ ಎಲ್ಲಾ ಧೂರ್ತ ಸಾಹಸಕ್ಕೆ ತಕ್ಕ ಬೆಲೆ ತೆರಲಿದೆ ಎಂದಿರುವ ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರೀಫ್ ಕಿಡಿಕಾರಿದ್ದಾರೆ. ತುರ್ತು ಸಂಭಾವ್ಯ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಬಾಗ್ದಾದ್ ನ ಗ್ರೀನ್ ಝೋನ್ ಅನ್ನು ಸಂಪೂರ್ಣವಾಗಿ ಇರಾಕಿ ಭದ್ರತಾ ಪಡೆಗಳು ಮುಚ್ಚಿದ್ದರು ಎಂದು ಸಿಎನ್ ಎನ್ ವರದಿ ಮಾಡಿದೆ.
ಅಮೆರಿಕದ ಪಡೆ ನಡೆಸಿದ ಸೋಲೈಮನಿ ಹತ್ಯೆ ಅಂತಾರಾಷ್ಟ್ರೀಯ ಭಯೋತ್ಪಾದನೆಯಾಗಿದೆ. ಐಸಿಸ್, ಅಲ್ ನುಸ್ರಾಹ್, ಅಲ್ ಖೈದಾದಂತಹ ಉಗ್ರವಾಮಿ ಸಂಘಟನೆ ವಿರುದ್ಧ ಹೋರಾಟ ನಡೆಸಿದ್ದ ಸೋಲೈಮನಿ ಹತ್ಯೆ ಸಹಿಸಿಕೊಳ್ಳಲು ಸಾಧ್ಯವಿಲ್ಲ.ಇದಕ್ಕೆ ಅಮೆರಿಕ ತಕ್ಕ ತಲೆದಂಡ ತೆರಲಿದೆ ಎಂದು ಝಾರೀಫ್ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು